ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ದಿನನಿತ್ಯ ಟ್ರಾಫಿಕ್ ದಟ್ಟಣೆ ಹೇಗಿರುತ್ತೆ ಎಂಬುವುದು ಅದನ್ನು ದಿನನಿತ್ಯ ಅನುಭವಿಸುತ್ತಿರುವವರಿಗೆ ಮಾತ್ರ ಗೊತ್ತು. ಯಾಕೆಂದ್ರೆ ದೇಶದ ಇತರೆ ಮಾಹಾನಗರಗಳಿಂತಲೂ ಅತಿವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನ ವಾಹನಗಳ ಸರಾಸರಿ ವೇಗವು ಸಾಮಾನ್ಯ ಸೈಕಲ್‌ ವೇಗಕ್ಕಿಂತ ಕಡಿಮೆಯಿದೆ ಎಂದರೆ ನೀವು ನಂಬಲೇಬೇಕು.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಹೌದು, ಕಳೆದ ಒಂದು ದಶಕದ ಅವಧಿಯಲ್ಲಿ ಮಹಾನಗರಗಳ ತೀವ್ರಗತಿಯ ಬೆಳವಣಿಗೆಯಿಂದಾಗಿ ದೇಶಾದ್ಯಂತ ವಾಹನಗಳ ಸಂಖ್ಯೆಯು ಕೂಡಾ ದುಪ್ಪಟ್ಟಾಗಿದ್ದು, ಮೆಟ್ರೋ ನಗರಗಳಲ್ಲಿನ ಟ್ರಾಫಿಕ್ ದಟ್ಟಣೆಯಿಂದಾಗಿ ವಾಹನಗಳ ಸರಾಸರಿ ವೇಗವು ಸತತವಾಗಿ ಇಳಿಕೆ ಕಾಣುತ್ತಿದೆ. ಇತ್ತೀಚೆಗೆ ನಡೆದ ಕೆಲವು ಅಧ್ಯಯನ ವರದಿಗಳು ಈ ವಿಚಾರವನ್ನು ಬಹಿರಂಗಪಡಿಸಿದ್ದು, ನಮ್ಮ ಬೆಂಗಳೂರಿನ ಟ್ರಾಫಿಕ್ ದಟ್ಟಣೆಯು ತೀರಾ ಶೋಚನಿಯವಾಗಿರುವುದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ತಡೆಯಲು ಮೆಟ್ರೋದಂತಹ ಸುಲಭ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಿದರೂ ಸಹ ವ್ಯಯಕ್ತಿಕ ವಾಹನ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವು ದಿನದಿಂದ ದುಪ್ಪಾಟ್ಟಾಗುತ್ತಿದೆ.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಭಾರತದ ಪ್ರಮುಖ ಮಾಹಾನಗರಗಳ ಟ್ರಾಫಿಕ್ ದಟ್ಟಣೆ ಕುರಿತಂತೆ ಸರ್ವೇ ಮಾಡಿರುವ ಟ್ರಾವೆಲ್ ಟೈಮ್ ರೀರ್ಪೋಟ್ ಅಧ್ಯಯನ ವರದಿ ಪ್ರಕಾರ, ಪ್ರತಿಯೊಬ್ಬ ಭಾರತೀಯನು ಸರಸಾರಿಯಾಗಿ ಶೇ.7ರಷ್ಟು ದಿನದ ಸಮಯವನ್ನು ಟ್ರಾಫಿಕ್ ದಟ್ಟಣೆಯಲ್ಲೇ ಕಳೆಯುತ್ತಿರುವ ಬಗ್ಗೆ ವರದಿ ಮಾಡಿದೆ.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ದೇಶದ ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ಪುಣೆ ನಗರಗಳಲ್ಲಿ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿರುವ ನಗರಗಳೆಂದು ಪರಿಗಣಿಸಲಾಗಿದ್ದು, ಪ್ರತಿ ಗಂಟೆಗೆ ಸರಾಸರಿಯಾಗಿ ವಾಹನ ಚಲನೆಯ ವೇಗವನ್ನು ಲೆಕ್ಕಾಚಾರ ಹಾಕಲಾಗಿದೆ. ಮೆಟ್ರೋ ನಗರಗಳಲ್ಲಿ ಸರಾಸರಿಯಾಗಿ ಪ್ರತಿ ಗಂಟೆಗೆ 24.6 ಕಿ.ಮಿ ವಾಹನ ಚಾಲನೆ ವೇಗವನ್ನು ಅಳೆಯಲಾಗಿದ್ದು, ಇದರಲ್ಲಿ ಬೆಂಗಳೂರು ಮತ್ತು ಮುಂಬೈ ಮಹಾನಗರಗಳ ಟ್ರಾಫಿಕ್ ಅತಿ ಎಂಬುವುದು ಸಾಬೀತಾಗಿದೆ.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಟ್ರಾವೆಲ್ ಟೈಮ್ ರೀರ್ಪೋಟ್ ಪ್ರಕಾರ ಚೆನ್ನೈ ನಗರದಲ್ಲಿ ಪ್ರತಿ ಗಂಟೆಗೆ ವಾಹನಗಳ ಸರಾಸರಿ ವೇಗವು 25.7 ಕಿ.ಮಿ ಆಗಿದ್ದರೆ ಹೈದ್ರಾಬಾದ್‌ನಲ್ಲಿ ಪ್ರತಿ ಗಂಟೆಗೆ 21.2ಕಿ.ಮಿ, ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ 20.6 ಕಿ.ಮಿ, ಬೆಂಗಳೂರಿನಲ್ಲಿ 18.7 ಕಿ.ಮಿ ಮತ್ತು ಮುಂಬೈನಲ್ಲಿ 18.5ಕಿ.ಮಿ ವಾಹನಗಳ ಚಾಲನೆಯ ಸರಾಸರಿ ವೇಗ ದಾಖಲಾಗಿದೆ.

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಸೋಮವಾರವೇ ಅತಿ ಹೆಚ್ಚು ಟ್ರಾಫಿಕ್

ಅಧ್ಯಯನ ವರದಿಯಲ್ಲಿ ಮತ್ತೊಂದು ವಿಚಾರ ಬಯಲಾಗಿದ್ದು, ವಾರದಲ್ಲಿ ಅತಿಹೆಚ್ಚು ಟ್ರಾಫಿಕ್ ದಟ್ಟಣೆ ಇರುವ ದಿನ ಯಾವುದು ಎಂಬುವುದು ಗೊತ್ತಾಗಿದೆ. ವಿಕೇಂಡ್ ಮೂಡ್‌ನಿಂದ ಆಫೀಸ್ ಕೆಲಸಕ್ಕೆ ಹೊರಡು ಸೋಮವಾರದಂದೇ ಅತಿಯಾದ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಗುತ್ತೆ.

MOST READ: ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಹಾಗೆಯೇ ದೇಶದ ಪ್ರಮುಖ ಮಾಹಾನಗರಗಳಲ್ಲಿ ಉತ್ಸವ ದಿನಗಳಲ್ಲೂ ಕೂಡಾ ಭಾರೀ ಪ್ರಮಾಣದ ಟಾಫ್ರಿಕ್ ದಟ್ಟಣೆ ದಾಖಲಾಗುತ್ತಿದ್ದು, ಸಾಯಂಕಾಲ 6ರಿಂದ 7 ಗಂಟೆ ಮಧ್ಯದ ಅವಧಿಯಲ್ಲಿ ಮಾಹಾನಗರಗಳ ಟ್ರಾಫಿಕ್ ಅತ್ಯಧಿಕ ಎನ್ನುವುದು ಕೂಡಾ ಬಹಿರಂಗವಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಇದೇ ಕಾರಣಕ್ಕೆ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಪ್ರಮಾಣವು ಕೂಡಾ ಅತಿಹೆಚ್ಚು ಉತ್ಪತ್ತಿಯಾಗುತ್ತಿದ್ದು, ಸದಾ ಟ್ರಾಫಿಕ್ ದಟ್ಟಣೆಯಲ್ಲಿ ಓಡಾಡುವ ವಾಹನ ಸವಾರರು ಇತರರಿಗಿಂತ ಹೆಚ್ಚು ಉಸಿರಾಟ ಸಂಬಂಧಿ ಖಾಯಲೆಗಳಿಗೆ ತುತ್ತಾಗುತ್ತಿದ್ದಾರೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಈ ನಿಟ್ಟಿನಲ್ಲಿ ಟ್ರಾಫಿಕ್ ದಟ್ಟಣೆ ತಡೆಯಲು ಸಮ-ಬೆಸದಂತಹ ಹಲವು ಕಠಿಣ ಕ್ರಮಕೈಗೊಂಡಿದ್ದರೂ ಟ್ರಾಫಿಕ್ ದಟ್ಟಣೆಯು ಮಿತಿ ಮೀರುತ್ತಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ತರಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಬಳಕೆ ಮತ್ತು ಮೆಟ್ರೋ ಮಾರ್ಗಗಳ ಹೆಚ್ಚಳವು ಪರಿಹಾರವಾಗುತ್ತಾ ಎಂಬುವುದು ಕಾಯ್ದುನೋಡಬೇಕಾಗಿದೆ.

Source: deccanherald

Most Read Articles

Kannada
English summary
Average commute speed in Bengaluru drops to 18.7 kmph. Read in Kannada.
Story first published: Saturday, August 31, 2019, 21:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X