ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ತನ್ನ ಹೊಸ ಕಿಯಾ ಕೆ5 ಸೆಡಾನ್ ಕಾರಿನ ಬಾಹ್ಯ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಕಿಯಾ ಕೆ5 ಕಾರ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಪ್ಟಿಮಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೊರಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ, ಹೊಸ ಕಾರು ಸೆಡಾನ್ ಸೆಗ್‍‍ಮೆಂಟಿಗೆ ಹೊಸ ಹಾಗೂ ನವೀನ ಲುಕ್ ಅನ್ನು ನೀಡುತ್ತದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಇದರಿಂದಾಗಿ ಕಿಯಾ ಮೋಟಾರ್ಸ್‍‍ನ ಹೊಸ ವಿನ್ಯಾಸವನ್ನು ಕಾಣಬಹುದು. ಹೊಸ ಕಿಯಾ ಕೆ 5 ಸ್ಪೋರ್ಟಿಯಾದ, ಆಧುನಿಕವಾದ ಹಾಗೂ ಬೋಲ್ಡ್ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಕಿಯಾ ಕಂಪನಿಯ ಟೈಗರ್ ನೋಸ್ ಎವಲ್ಯೂಷನ್ ಅಳವಡಿಸಲಾಗಿದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಸೆಡಾನ್‌ನ ಹಿಂದಿನ ಕಾರಿಗಿಂತ ಗ್ರಿಲ್ ಹಾಗೂ ಹೆಡ್‌ಲ್ಯಾಂಪ್‌ಗಳನ್ನು ಹೆಚ್ಚು ಆರ್ಗಾನಿಕ್ ಆಗಿ ಇಂಟಿಗ್ರೇಟ್ ಮಾಡಲು ವಿಶಾಲವಾದ, ಮೂರು ಆಯಾಮದ ವಿನ್ಯಾಸಗಳಿವೆ. ಗ್ರಿಲ್ ವಿನ್ಯಾಸವು ಶಾರ್ಕ್ ಸ್ಕಿನ್‍‍ನ ಟೆಕ್ಚರ್ ಮಾದರಿಯಲ್ಲಿದೆ. ಗ್ರಿಲ್ ಅನ್ನು ಇಂಟರ್ ಲಾಕಿಂಗ್ ವಿವರಗಳ ಮ್ಯಾಟ್ರಿಕ್ಸ್ ನೊಂದಿಗೆ ತಯಾರಿಸಲಾಗಿದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಕೆ 5 ಸೆಡಾನ್ ಕಾರಿನ ಮುಂಭಾಗದಲ್ಲಿರುವ ಹೆಡ್‍‍ಲ್ಯಾಂಪ್‍‍ಗಳು ವಿಶಿಷ್ಟವಾದ ಹಾರ್ಟ್ ಬೀಟ್ ಡಿಆರ್‍ಎಲ್ ವಿನ್ಯಾಸವನ್ನು ಹೊಂದಿವೆ. ಗ್ರಿಲ್ ಮೇಲೆ, ಆಳವಾದ ಕಾಂಟೌರ್ಡ್ ಹುಡ್ ಹಾಗೂ ವಿಶಿಷ್ಟವಾದ ಕೆಳ ಬಂಪರ್‍‍ಗಳಿದ್ದು, ಕಾರಿನ ಮುಂಭಾಗದಲ್ಲಿ ಸ್ಮೂತ್ ಲೈನ್‍‍ಗಳಿಗೆ ಒತ್ತು ನೀಡಲು ಹಾಗೂ ಹೊಸ ತಲೆಮಾರಿನ ಕೆ 5 ಆನ್-ರೋಡ್ ಉಪಸ್ಥಿತಿಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಇದರ ಪ್ರೊಫೈಲ್ ಮುಂಚೆ ಇದ್ದ ಕಾರಿಗಿಂತ ಹೆಚ್ಚಿನ ಮಸ್ಕ್ಯುಲರ್ ಹೊಂದಿದೆ. ವ್ಹೀಲ್ ಆರ್ಕ್‍‍ಗಳ ಮಧ್ಯಭಾಗದಲ್ಲಿ ಬಾಡಿ ಸ್ವಲ್ಪ ಚಿಕ್ಕದಾಗಿದೆ. ಒಂದು ವಿಶಿಷ್ಟವಾದ ಕ್ರೀಸ್ ಹೊಸ ಕೆ 5ನ ಬಾಡಿಯ ಉದ್ದಕ್ಕೂ ಚಲಿಸುತ್ತದೆ. ಹೊಸ ಫ್ರೇಮ್‌ಲೆಸ್ ವಿಂಡೋಗಳ ಮೇಲಿರುವ ಕ್ರೋಮ್‌ನ ಡ್ಯಾಶ್ ಹರಿಯುವ, ಫಾಸ್ಟ್‌ಬ್ಯಾಕ್ ರೂಫ್‌ಲೈನ್‌ಗೆ ಹೆಚ್ಚಿನ ಲುಕ್ ಅನ್ನು ಸೇರಿಸುತ್ತದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಹೊಸ ಕೆ 5 ಮೊದಲಿದ್ದ ಕಾರಿಗಿಂತ ಉದ್ದವಾಗಿದ್ದು, ಅಗಲವಾಗಿದೆ. ಹೊಸ ಕಾರಿನ ಉದ್ದವನ್ನು 50 ಎಂಎಂನಷ್ಟು ಹೆಚ್ಚಿಸಿ 4,905 ಎಂಎಂ ಹಾಗೂ ಅಗಲವನ್ನು 25 ಎಂಎಂನಷ್ಟು ಹೆಚ್ಚಿಸಿ 1,860 ಎಂಎಂಗೆ ವಿಸ್ತರಿಸಲಾಗಿದೆ. ವ್ಹೀಲ್‍‍ಬೇಸ್‌ ಅನ್ನು 2,850 ಎಂಎಂಗೆ ಎತ್ತರಿಸಲಾಗಿದೆ. 20 ಎಂಎಂನಷ್ಟು ಕಡಿಮೆಯಾದ ನಂತರ ಕಾರಿನ ಎತ್ತರವು 1,445 ಎಂಎಂನಷ್ಟಾಗಿ ಸ್ಪೋರ್ಟಿ ಪ್ರೊಫೈಲ್ ನೀಡುತ್ತದೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಕೆ 5 ನ ಹಿಂಭಾಗವು ಹೊಸ ಹಿಂಭಾಗದ ಕಾಂಬಿನೇಷನ್‍‍ನ ಲ್ಯಾಂಪ್ ಡಿಸೈನ್ ಅನ್ನು ಹೊಂದಿದೆ. ಈ ವಿನ್ಯಾಸವು ಕೆ 5 ನ ಸೂಕ್ಷ್ಮವಾದ ಹಿಂಭಾಗದ ವಿಂಗ್‍‍ನ ಮೂರು ಆಯಾಮದ ವಿನ್ಯಾಸದಿಂದ ಪ್ರತಿಬಿಂಬಿತವಾದ ಸ್ಪೋರ್ಟಿ ಸಿಲೂಯೆಟ್ ಅನ್ನು ಒದಗಿಸುತ್ತದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ವಿಶಿಷ್ಟವಾದ ಟೇಲ್ ಲ್ಯಾಂಪ್‌ಗಳು ಕಾರಿನ ಮುಂಭಾಗದಲ್ಲಿ ಕಂಡುಬರುವ ಹಾರ್ಟ್ ಬೀಟ್ ಮೋಟಿಫ್, ರೂಫ್ ಲೈನ್ ಕ್ರೋಮ್‌ನ ಫ್ಲ್ಯಾಷ್ ಹಿಂಭಾಗದ ವಿಂಡ್‌ಸ್ಕ್ರೀನ್‌ನ ಸುತ್ತಲೂ ಇದ್ದು, ಸೈಡ್ ಹಾಗೂ ರೇರ್ ಪ್ರೊಫೈಲ್ ಅನ್ನು ಯೂನಿಫೈಗೊಳಿಸುತ್ತವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಕೆ 5 ಸೆಡಾನ್ ಕಾರ್ ಅನ್ನು ಹೊಸ ಮಿಷಿನ್ ಕಟ್ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ವಿನ್ಯಾಸಗಳನ್ನು ಹೊಂದಿರುವ ಗ್ಲಾಸ್ ಬ್ಲಾಕ್ ಬಣ್ಣದಿಂದ ಡಾರ್ಕ್ ಗ್ರೇ ಹಾಗೂ ಲೈಟ್ ಗ್ರೇ ಬಣ್ಣಗಳವರೆಗೆ ಲಭ್ಯವಿರುತ್ತದೆ. ಕಿಯಾ ಮೋಟಾರ್ಸ್ ಹೊಸ ಸೆಡಾನ್‌ ಬಗ್ಗೆ ಬೇರೆ ಯಾವುದೇ ಮೆಕಾನಿಕಲ್ ಅಂಶಗಳ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಹೊಸ ತಲೆಮಾರಿನ ಕೆ 5 ಕಾರ್ ಅನ್ನು ಡಿಸೆಂಬರ್‌ನಲ್ಲಿ ಕೊರಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ದೇಶಿಯ ಮಾರುಕಟ್ಟೆಯಲ್ಲಿ, ಕಿಯಾ ತನ್ನ ಮೊದಲ ಮಾದರಿಯಾದ ಸೆಲ್ಟೋಸ್ ಎಸ್‌ಯುವಿಯನ್ನು ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಿತ್ತು.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಕಿಯಾ ಕಂಪನಿಯು ಸದ್ಯಕ್ಕೆ ಸಣ್ಣ ಗಾತ್ರದ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಈ ಕಾರಿಗಿಂತ ಮೊದಲು ಕಿಯಾ ಕಾರ್ನಿವಲ್ ಎಂಪಿವಿಯನ್ನು ಬಿಡುಗಡೆಗೊಳಿಸಲಿದೆ. ಕ್ರಾಸ್ ಹ್ಯಾಚ್‌ಬ್ಯಾಕ್ ಮಾದರಿಯ ಕಾರುಗಳನ್ನು ಕಂಪನಿಯು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ಆದರೆ ಈ ಕಾರುಗಳು ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಸೆಡಾನ್ ಕಾರ್ ಅನಾವರಣಗೊಳಿಸಿದ ಕಿಯಾ ಮೋಟಾರ್ಸ್

ಎಸ್‌ಯುವಿ ಸೆಗ್‍‍ಮೆಂಟಿನಲ್ಲಿ ಸೆಲ್ಟೋಸ್ ಜನಪ್ರಿಯ ಮಾದರಿ ಎಂದು ಸಾಬೀತಾಗಿದೆ. ಈ ಬ್ರ್ಯಾಂಡ್ 60,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದಿದೆ. 2019ರ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿರುವುದಾಗಿ ತಿಳಿಸಿದೆ.

Most Read Articles

Kannada
English summary
Kia motors revealed new k5 sedan - Read in Kannada
Story first published: Wednesday, November 13, 2019, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X