ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಕಿಯಾ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಹೊಸ ಸೆಲ್ಟೊಸ್ ಕಾರನ್ನು ಅನಾವರಣಗೊಳಿಸಿದ್ದು, ಇದೀಗ ಹೊಸ ಕಾರಿನ ಮೊದಲ ಟಿವಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಜಾಹೀರಾತಿನಲ್ಲಿ ಕಿಯಾ ಅಂಬಾಸಿಡರ್ ಆಗಿ ನಟ ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದು, ಕಾರಿನ ವಿನ್ಯಾಸಗಳು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಹ್ಯುಂಡೈ ಕ್ರೆಟಾ ಮಾದರಿಯಲ್ಲೇ ಸಿದ್ದವಾಗಿರುವ ಸೆಲ್ಟೊಸ್ ಕಾರು ಕ್ರೆಟಾಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ.

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಹಾಗೆಯೇ ಸೆಲ್ಟೊಸ್ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗೆಯೇ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಕಾರಿನ ಒಳಾಂಗಣ

ವಿನ್ಯಾಸ ಕಿಯಾ ಸಂಸ್ಥೆಯು ಸೆಲ್ಟೊಸ್ ಕಾರಿನ ಹೊಸ ವಿನ್ಯಾಸಗಳನ್ನು ಮಾತ್ರವೇ ಪ್ರದರ್ಶನ ಮಾಡಿದ್ದು, ಬಿಡುಗಡೆಯ ದಿನದ ತನಕ ಕಾರಿನ ಒಳವಿನ್ಯಾಸಗಳನ್ನು ಬಹಿರಂಗಪಡಿಸದಿರಲು ನಿರ್ಧರಿಸಿದೆ. ಹೀಗಾಗಿ ಕಾರಿನ ಒಳಾಂಗಣ ಮಾಹಿತಿ ನೀಡಿದೆಯಾದರೂ ಒಳಾಂಗಣ ಚಿತ್ರಗಳನ್ನು ಮಾತ್ರ ರಹಸ್ಯವಾಗಿಟ್ಟಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಕಿಯಾ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಹೊಸ ಸೆಲ್ಟೊಸ್ ಕಾರಿನ ಒಳಾಂಗಣ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ಉತ್ತಮವಾಗಿರಲಿವೆ ಎಂದಿದ್ದು, ಕಾರಿನಲ್ಲಿ 10.25-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, 360 ಡಿಗ್ರಿ ವ್ಯೂ ಮಾನಿಟರ್, ಹೆಡ್ ಅಪ್ ಡಿಸ್‌ಪ್ಲೇ, ಸನ್‌ರೂಫ್ ಮತ್ತು 8-ಸ್ಪಿಕರ್ಸ್ ಬಾಷ್ ಸೌಂಡ್ ಸಿಸ್ಟಂ ಹೊಂದಿರಲಿದೆಯೆಂತೆ.

ಇದರ ಜೊತೆಗೆ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಸೌಲಭ್ಯಗಳು ಕೂಡಾ ಸೆಲ್ಟೊಸ್‌ನಲ್ಲಿವೆ. ಬ್ಲ್ಯೂ ಲಿಂಕ್ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟಾಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಎಂಜಿನ್ ಸಾಮಾರ್ಥ್ಯ

ಸೆಲ್ಟೊಸ್ ಕಾರು ಬಿಎಸ್-6 ಪ್ರೇರಿತ 1.5-ಲೀಟರ್ ಸಾಮಾರ್ಥ್ಯ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಸ್ಪೋರ್ಟಿ ವರ್ಷನ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಜಿಟಿ ಆವೃತ್ತಿಯನ್ನು ಸಹ ಪರಿಚಯಿಸುತ್ತಿದ್ದು, ಹೊಸ ಎಂಜಿನ್ ಅಧಿಕೃತ ಪರ್ಫಾಮೆನ್ಸ್ ಕುರಿತು ಬಿಡುಗಡೆಯ ದಿನದಂದೇ ಹೆಚ್ಚಿನ ಮಾಹಿತಿ ದೊರೆಯಲಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಸುರಕ್ಷಾ ಸೌಲಭ್ಯಗಳು

ಶೇ.73ರಷ್ಟು ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಅಗಸ್ಟ್ ಆರಂಭದಲ್ಲಿ ಸೆಲ್ಟೊಸ್ ಕಾರು ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಇನ್ನು ಕಿಯಾ ಸಂಸ್ಥೆಯು ಸೆಲ್ಟೊಸ್ ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರು ಆವೃತ್ತಿಗಳನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 2 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸೆಲ್ಟೊಸ್ ಅನಾವರಣ ನಂತರ ಮೊದಲ ಟಿವಿ ಜಾಹೀರಾತು ಬಿಡುಗಡೆಗೊಳಿಸಿದ ಕಿಯಾ

ಇದಕ್ಕಾಗಿಯೇ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳದೊಂದಿಗೆ ಆಂಧ್ರಪ್ರದೇಶದಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆದಿದ್ದು, ಇಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಗುರಿಹೊಂದಿದೆ.

Article Published On: Monday, June 24, 2019, 12:15 [IST]
English summary
Kia Seltos First TVC With Tiger Shroff. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+