ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಕಿಯಾ ಸಂಸ್ಥೆಯು ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿಗೆ ಈಗಾಗಲೇ 32 ಸಾವಿರ ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಯ ತವಕದಲ್ಲಿದ್ದಾರೆ. ಕೇವಲ 15 ದಿನಗಳಲ್ಲಿ ಹೊಸ ಕಾರಿಗೆ ದಾಖಲೆ ಪ್ರಮಾಣದ ಬುಕ್ಕಿಂಗ್ ಹರಿದುಬಂದಿದ್ದು, ಕಾರು ಮಾರಾಟದಲ್ಲಿ ಸೆಲ್ಟೊಸ್ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಪ್ರೀಮಿಯಂ ಸೌಲಭ್ಯಗಳೊಂದಿಗೆ ಸ್ಪೋರ್ಟಿ ಲುಕ್‌ ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವ ಸೆಲ್ಟೊಸ್ ಕಾರು ಒಟ್ಟು ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಾಗಿದೆ. ಸಾಮಾನ್ಯ ಕಾರು ಖರೀದಿದಾರರಿಗೆ ಟೆಕ್ ಲೈನ್ ಮತ್ತು ಸ್ಪೋರ್ಟಿ ಕಾರು ಪ್ರಿಯರಿಗೆ ಜಿಟಿ ಲೈನ್ ಮಾದರಿಯನ್ನು ಖರೀದಿ ಮಾಡಬಹುದುದಾಗಿದ್ದು, ಟೆಕ್ ಲೈನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್ ಖರೀದಿ ಲಭ್ಯವಾದಲ್ಲಿ ಜಿಟಿ ಲೈನ್‌ನಲ್ಲಿ ಕೇವಲ ಪೆಟ್ರೋಲ್ ಆವೃತ್ತಿ ಮಾತ್ರವೇ ಖರೀದಿಗೆ ಲಭ್ಯವಿದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಸೆಲ್ಟೊಸ್ ಕಾರುಗಳು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 15.99 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದು ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 5 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 8 ವೆರಿಯೆಂಟ್‌ಗಳನ್ನು ಹೊಂದಿದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಾವಳಿಗೆ ಅನ್ವಯದಂತೆ ಕಿಯಾ ಸೆಲ್ಟೊಸ್ ಕಾರು ಸುಧಾರಿತ ಎಂಜಿನ್ ಮಾದರಿಯನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯ ಜೊತೆಗೆ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಹೀಗಾಗಿ ಇದು ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಬಿಎಸ್-6 ನಿಯಮವನ್ನು ಡೆಡ್‌ಲೈನ್‌ಗೂ ಮುನ್ನವೇ ಪರಿಚಯಿಸಿದ ಮೊದಲ ಕಾರು ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ನೀಡಲಾಗಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದರಲ್ಲಿ ಟೆಕ್ ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯು 115-ಬಿಎಚ್‌ಪಿಯೊಂದಿಗೆ 250-ಎನ್ಎಂ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 138-ಬಿಎಚ್‌ಪಿ ಮತ್ತು 242-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಸೆಲ್ಟೊಸ್ ಕಾರು ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

MOST READ: ಹೊಸ ಕಾರುಗಳ ನೋಂದಣಿ ಮೇಲಿನ ಶುಲ್ಕ ಹೆಚ್ಚಳಕ್ಕೆ ಕೊನೆಗೂ ಬ್ರೇಕ್..!

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಹಾಗೆಯೇ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

MOST READ:ಕಿಯಾ ಮೋಟಾರ್ಸ್ ಬಹುನೀರಿಕ್ಷಿತ ಸೆಲ್ಟೊಸ್ ಬಿಡುಗಡೆ

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಕಿಯಾ ಸೆಲ್ಟೊಸ್‌ಗೆ ಭರ್ಜರಿ ಬೇಡಿಕೆ- ಬುಕ್ಕಿಂಗ್‌ನಲ್ಲೂ ಹೊಸ ದಾಖಲೆ..!

ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕಿಯಾ ಸೆಲ್ಟೊಸ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Article Published On: Friday, August 23, 2019, 9:00 [IST]
English summary
All New KIA Selots SUV's' Bookings has crossed 32,000 units in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+