ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ 2020ರಿಂದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಡುವ ಯೋಜನೆಯಲ್ಲಿದ್ದು ಇದಕ್ಕೂ ಮುನ್ನ ಜನಪ್ರಿಯ ಡೀಸೆಲ್ ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿದೆ.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

2020ರ ಏಪ್ರಿಲ್ 1ರಿಂದ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯವಾಗಲಿದ್ದು, ಹೊಸ ನಿಯಮಗಳಿಗೆ ಅನ್ವಯವಾಗಿ ಉನ್ನತಿಕರಣ ಮಾಡಲು ಸಾಧ್ಯವಿಲ್ಲದ ಡೀಸೆಲ್ ಎಂಜಿನ್ ಮಾರಾಟವು ಸಂಪೂರ್ಣ ಬಂದ್ ಆಗಲಿದೆ. ಈ ಹಿನ್ನಲೆ ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಡುವ ಯೋಜನೆ ರೂಪಿಸಿದ್ದು, ಡೀಸೆಲ್ ಕಾರು ಮಾರಾಟವನ್ನು ಬಂದ್ ಮಾಡುವುದಕ್ಕೂ ಮುನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಟಾರಾ ಬ್ರೆಝಾ, ಹ್ಯಾಚ್‌ಬ್ಯಾಕ್ ಮಾದರಿಯಾದ ಸ್ವಿಫ್ಟ್, ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಡಿಜೈರ್ ಮತ್ತು ಎಸ್ ಕ್ರಾಸ್ ಎಸ್‌ಯುವಿ ಮೇಲೆ ಆಫರ್ ಘೋಷಣೆ ಮಾಡಿದೆ.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಡೀಸೆಲ್ ಎಂಜಿನ್‌ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಬ್ರೆಝಾ, ಸ್ವಿಫ್ಟ್, ಡಿಜೈರ್ ಮತ್ತು ಎಸ್-ಕ್ರಾಸ್ ಖರೀದಿ ಮೇಲೆ 5 ವರ್ಷಗಳ ಗರಿಷ್ಠ ವಾರಂಟಿ ಆಫರ್ ಘೋಷಣೆ ಮಾಡಿದ್ದು, 2020ರಿಂದ ದುಬಾರಿಯಾಗಲಿರುವ ಡೀಸೆಲ್ ಕಾರುಗಳ ಖರೀದಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಇನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಬಿಎಸ್-6 ಎಂಜಿನ್‌ನಿಂದಾಗಿ ಹೊಸ ವಾಹನ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಸುಧಾರಿತ ಮಾದರಿಯ ಎಂಜಿನ್‌ನಿಂದಾಗಿ ಪೆಟ್ರೋಲ್‌ಗಿಂತ ಡೀಸೆಲ್ ಎಂಜಿನ್‌ಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದೆ.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮದನ್ವಯ ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಮಾದರಿಗಳನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಹೆಚ್ಚಳವಾಗಲಿದ್ದು, ಇದೇ ಕಾರಣಕ್ಕೆ ಡೀಸೆಲ್ ಎಂಜಿನ್ ಉನ್ನತೀಕರಣ ಯೋಜನೆ ಕೈಬಿಟ್ಟು ಸಂಪೂರ್ಣವಾಗಿ ಪೆಟ್ರೋಲ್, ಹೈಬ್ರಿಡ್, ಸಿಎನ್‌ಜಿ, ಎಲೆಕ್ಟ್ರಿಕ್ ಕಾರುಗಳತ್ತ ಗಮನಹರಿಸುತ್ತಿದೆ.

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಸದ್ಯಕ್ಕೆ ಉತ್ಪಾದನೆಯಾಗಿರುವ ಡೀಸೆಲ್ ಕಾರುಗಳ ಸ್ಟಾಕ್ ಪ್ರಮಾಣವನ್ನು ಕಡಿತ ಮಾಡುತ್ತಿರುವ ಮಾರುತಿ ಸುಜುಕಿಯು ಗ್ರಾಹಕರನ್ನು ಸೆಳೆಯುತ್ತಿದ್ದು, ಆಕರ್ಷಕ ಡಿಸ್ಕೌಂಟ್ ದರಗಳೊಂದಿಗೆ ವಾರಂಟಿಯಲ್ಲೂ ಕೂಡಾ ಗರಿಷ್ಠ ಆಫರ್ ನೀಡುತ್ತಿದೆ.

MOST READ:ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದ್ದು, ಬಹುತೇಕ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟ ಮಾಡಲು ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಆಟೋ ಉದ್ಯಮದಲ್ಲಿನ ಕೆಲವು ಮಹತ್ವದ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ.

MOST READ: ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಜನಪ್ರಿಯ ಡೀಸೆಲ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಾರುತಿ ಸುಜುಕಿ

ಇದರಿಂದ ನಿಗದಿತ ಅವಧಿಯಲ್ಲಿ ಸ್ಟಾಕ್ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಪೂರ್ಣಗೊಳಿಸಲು ಯತ್ನಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯಲ್ಲಿ ಕಡಿತಗೊಳಸಿದ್ದು, ಪರ್ಯಾಯ ಮಾದರಿಯಾಗಿ ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳ ಮಾರಾಟದ ಮೇಲೆ ಹೆಚ್ಚಿನ ಗಮನಹರಿಸುತ್ತದೆ.

More from DriveSpark

Article Published On: Wednesday, August 21, 2019, 8:45 [IST]
English summary
Maruti Suzuki Announces 5 yr Warranty For Swift, Dzire, S Cross, Brezza diesel. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+