ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಕಾರು ಮಾರಾಟವನ್ನು ಆರಂಭಿಸಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ಆರ್ಥಿಕ ಸಂಕಷ್ಟದ ನಡುವೆಯೂ ಸೆಲ್ಟೊಸ್ ಮಾರಾಟವು ಹೊಸ ದಾಖಲೆಗೆ ಕಾರಣವಾಗಿದ್ದು, ಬಿಡುಗಡೆಯಾದ ಕೇವಲ 1 ತಿಂಗಳ ಅವಧಿಯಲ್ಲಿ 40 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿವೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಅಗಸ್ಟ್ 22 ರಂದು ಬಿಡುಗಡೆಯಾಗಿದ್ದ ಕಿಯಾ ಸೆಲ್ಟೊಸ್ ಕಾರು ತಿಂಗಳಾಂತ್ಯಕ್ಕೆ ಬರೋಬ್ಬರಿ 6 ಸಾವಿರ ಯುನಿಟ್ ಮಾರಾಟವಾಗಿದ್ದು, ಇದೀಗ ಸೆಪ್ಟೆಂಬರ್ ಅವಧಿಯಲ್ಲಿ ಕಾರು ಮಾರಾಟದ ಪ್ರಮಾಣವು ಈ ತಿಂಗಳಾಂತ್ಯಕ್ಕೆ ವರದಿ ಪ್ರಕಟವಾಗಲಿದೆ. ಹೀಗಿರುವಾಗ ಸೆಲ್ಟೊಸ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಮಾಣವು 40 ಸಾವಿರ ದಾಟಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಮತ್ತಷ್ಟು ಕಾರು ಮಾರಾಟವನ್ನು ನೀರಿಕ್ಷಿಸಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಕಾರು ಮಾರಾಟಕ್ಕೆ ಪರದಾಟುತ್ತಿದ್ದರೆ ಕಿಯಾ ಮೋಟಾರ್ಸ್ ಮಾತ್ರ ಸೆಲ್ಟೊಸ್ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಉತ್ಪಾದನಾ ಗುಣಮಟ್ಟದ ಆಧಾರದ ಮೇಲೆ ನೀಡಲಾಗುವ ವಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೂ ಸೆಲ್ಟೊಸ್ ನಾಮಿನೆಟ್‌ಗೊಂಡಿವೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 16.99 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದ್ದು, ಟೆಕ್ ಲೈನ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮತ್ತು ಜಿಟಿ ಲೈನ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್, ಜಿಟಿಕೆ ಪ್ಲಸ್ ಎಎಂಟಿ ವೆರಿಯೆಂಟ್‌ಗಳಲ್ಲಿ ಲಭ್ಯವಿವೆ. ಟೆಕ್ ಲೈನ್‌ ಕಾರು ಮಾದರಿಗಳು ಸಾಮಾನ್ಯ ಚಾಲನಾ ತಂತ್ರಜ್ಞಾನ ಹೊಂದಿದ್ದರೆ ಜಿಟಿ ಲೈನ್‌ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ವೈಶಿಷ್ಟ್ಯತೆ ಹೊಂದಿವೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಜಿಟಿಎಕ್ಸ್ ಪ್ಲಸ್ ಎಎಂಟಿ ವರ್ಷನ್ ಮಾದರಿಯು ಬಿಎಸ್-6 ನಿಯಮ ಅನುಸಾರ ಅಭಿವೃದ್ಧಿಗೊಂಡಿರುವ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ, ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಜಿಟಿ ಲೈನ್ ಹೊರತುಪಡಿಸಿ ಟೆಕ್ ಲೈನ್ ಕಾರುಗಳಲ್ಲಿ ಪ್ರತಿ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದೆ.

MOST READ: ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

MOST READ: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಭಾರೀ ದಂಡಕ್ಕೆ ಬ್ರೇಕ್ ಹಾಕಿದ ಸಚಿವ ನಿತಿನ್ ಗಡ್ಕರಿ..!

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಯತ್ತ ಕಿಯಾ ಸೆಲ್ಟೊಸ್..!

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

More from DriveSpark

Article Published On: Friday, September 27, 2019, 14:19 [IST]
English summary
Kia Seltos SUV bookings have recieved 40,000 within 35 days since its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+