ಈ 6 ಕಾರಣಗಳಿಂದಾಗಿ ಫುಲ್ ಫೇಮಸ್ ಆಯ್ತು ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಮೊದಲಿಗೆ ಹ್ಯುಂಡೈನ ಕ್ರೆಟಾ ಎಸ್‍ಯುವಿಯನ್ನು ಹಿಂದಿಕ್ಕಿತ್ತು.

ಬಿಡುಗಡೆಯಾದಾಗಿನಿಂದಲೂ ಕಿಯಾ ಸೆಲ್ಟೋಸ್, ಮಾರಾಟದಲ್ಲಿ ಕ್ರೆಟಾ ಎಸ್‍ಯುವಿಯನ್ನು ಹಿಂದಿಕ್ಕುತ್ತಲೇ ಇದೆ. ಯಾವ ಕಾರಣಕ್ಕೆ ಕಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿ ಇಷ್ಟೊಂದು ಜನಪ್ರಿಯವಾಗುತ್ತಿದೆ ಎಂಬ ಕಾರಣಗಳನ್ನು ಈ ಲೇಖನದಲ್ಲಿ ನೋಡೋಣ.

ಎಲ್ಲರಿಗೂ ಇಷ್ಟವಾಗುವ ಮಾದರಿ
ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಟೆಕ್ ಲೈನ್ ಹಾಗೂ ಜಿಟಿ ಲೈನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟೆಕ್ ಲೈನ್ ಲೋ ಎಂಡ್ ಮಾದರಿಯಾದರೆ, ಜಿಟಿ ಲೈನ್ ಸ್ಪೋರ್ಟಿಯರ್ ಆವೃತ್ತಿಯಾಗಿದ್ದು, ಹಲವಾರು ಬದಲಾವಣೆಗಳನ್ನು ಹೊಂದಿದೆ.

ಒಟ್ಟಾರೆಯಾಗಿ, ಕಿಯಾ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ 18 ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸೆಲ್ಟೋಸ್ ಎಸ್‍ಯುವಿಯನ್ನು ಗ್ರಾಹಕರ ಅಗತ್ಯ ಹಾಗೂ ಬಜೆಟ್‍ಗೆ ಹೊಂದಿಕೊಳ್ಳುವಂತೆ ಮಾರಾಟ ಮಾಡಲಾಗುತ್ತದೆ.

ಆಕರ್ಷಕ ಕಾರು
ಭಾರತದಲ್ಲಿ, ಒಂದು ಕಾರು ರಸ್ತೆಯಲ್ಲಿ ಹೇಗೆ ಕಾಣುತ್ತದೆ ಎಂಬುದರ ಮೇಲೆ ಕಾರ್ ಅನ್ನು ಖರೀದಿಸಲಾಗುತ್ತದೆ. ಹೊಸ ಸೆಲ್ಟೋಸ್ ಕಾರ್ ಅನ್ನು ರಸ್ತೆಯಲ್ಲಿರುವ ಜನರನ್ನು ತನ್ನತ್ತ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಕಾರಿನ ಹೊರಭಾಗ ಹಾಗೂ ಒಳಭಾಗದಲ್ಲಿ ಎಲ್ಇಡಿ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ.

ಸೆಲ್ಟೋಸ್‍ನಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಗ್ರಿಲ್ ಸುತ್ತಲೂ ಅಳವಡಿಸಿ, ಈ ಎಸ್‍ಯುವಿಯ ಸುತ್ತಲೂ ಗಮನ ಸೆಳೆಯುವ ಲುಕ್ ನೀಡಲಾಗಿದೆ. ಸೆಲ್ಟೋಸ್ ರಸ್ತೆಯಲ್ಲಿರುವಾಗ ಜನರ ಕಣ್ಣಿಗೆ ಎದ್ದು ಕಾಣುತ್ತದೆ.

ಹಲವಾರು ಫೀಚರ್‍ಗಳು
ಭಾರತೀಯರು ತಾವು ಖರೀದಿಸುವ ಕಾರಿನಲ್ಲಿ ಹಲವಾರು ಫೀಚರ್‍ಗಳಿರಬೇಕೆಂದು ಬಯಸುತ್ತಾರೆ. ಅವುಗಳಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೇಲ್ ಲ್ಯಾಂಪ್, ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಫ್ರಂಟ್ ಗ್ರಿಲ್‌ನಲ್ಲಿ ಲೈಟ್ ಬಾರ್ ಸೇರಿದಂತೆ ಇತರ ಹಲವು ಫೀಚರ್‍ಗಳಿರಬೇಕೆಂದು ಬಯಸುತ್ತಾರೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸೆಲ್ಟೋಸ್ ಎಸ್‍ಯುವಿಯಲ್ಲಿ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್, ಹೆಡ್ಸ್ ಅಪ್ ಡಿಸ್‍ಪ್ಲೇ, ಕನೆಕ್ಟೆಡ್ ಆಂಬಿಯೆಂಟ್ ಲೈಟ್, ಬೋಸ್ ಸ್ಪೀಕರ್ ಸಿಸ್ಟಂ, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಫೀಚರ್‍ಗಳನ್ನು ನೀಡಲಾಗುತ್ತದೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಇದರಿಂದಾಗಿ ಈ ಸೆಗ್‍ಮೆಂಟಿನಲ್ಲಿ ಕಾರು ಖರೀದಿಸ ಬಯಸುವ ಗ್ರಾಹಕರು ಬೇರೆ ಕಾರುಗಳಿಗಿಂತ ಈ ಕಾರ್ ಅನ್ನು ಖರೀದಿಸ ಬಯಸುತ್ತಾರೆ. ಈ ಸೆಗ್‍ಮೆಂಟಿನಲ್ಲಿರುವ ಬೇರೆ ಯಾವುದೇ ಕಾರುಗಳಲ್ಲಿ ಇಷ್ಟೊಂದು ಫೀಚರ್‍ಗಳನ್ನು ನೀಡುತ್ತಿಲ್ಲ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ರೆಟಾ ಕಾರಿಗಿಂತ ಕಡಿಮೆ ಬೆಲೆ
ಕಿಯಾ ಸೆಲ್ಟೋಸ್‌ನ ಮೂಲ ಮಾದರಿಯ ಬೆಲೆ ರೂ.9,69 ಲಕ್ಷಗಳಾದರೆ, ಎಂಟ್ರಿ ಲೆವೆಲ್ ಹ್ಯುಂಡೈ ಕ್ರೆಟಾ ಕಾರಿನ ಬೆಲೆ ರೂ.9.99 ಲಕ್ಷಗಳಾಗುತ್ತದೆ. ಅಲ್ಲದೇ ಕ್ರೆಟಾ ಕಾರಿಗಿಂತ ಹೆಚ್ಚಿನ ಫೀಚರ್‍ಗಳನ್ನು ಕಿಯಾ ಸೆಲ್ಟೋಸ್‍ನಲ್ಲಿ ನೀಡಲಾಗುತ್ತದೆ.

ಹಲವು ವಿಧದ ಎಂಜಿನ್ ಟ್ರಾನ್ಸ್ ಮಿಷನ್ ಆಯ್ಕೆಗಳು
ಕಿಯಾ ಸೆಲ್ಟೋಸ್ ಹಲವಾರು ರೀತಿಯ ಎಂಜಿನ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡುತ್ತದೆ. ಕಿಯಾ ಸೆಲ್ಟೋಸ್ ಭಾರತದಲ್ಲಿ ಮೂರು ವಿಭಿನ್ನ ರೀತಿಯ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ಗಳನ್ನು ನೀಡುವ ಏಕೈಕ್ ಕಾರ್ ಆಗಿದೆ.

1.5 ಲೀಟರ್ ಪೆಟ್ರೋಲ್ ಎಂಜಿನ್‍ನಲ್ಲಿ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್, 1.5 ಲೀಟರ್ ಡೀಸೆಲ್ ಎಂಜಿನ್‍ನಲ್ಲಿ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹಾಗೂ 1.4 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‍ನಲ್ಲಿ 7 ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗುತ್ತದೆ.

ಇದರ ಜೊತೆಗೆ ಈ ಎಲ್ಲಾ ಮೂರು ಎಂಜಿನ್‍ಗಳಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ಮಿಷನ್‍ಗಳನ್ನು ನೀಡಲಾಗುತ್ತದೆ. ಇದು ಖರೀದಿದಾರರಿಗೆ ಕಿಯಾ ಸೆಲ್ಟೋಸ್ ಅನ್ನು ಖರೀದಿಸಲು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ.

ಸರಿಯಾದ ಗಾತ್ರ
ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಭಾರತದ ಗ್ರಾಹಕರು ಎಸ್‍ಯುವಿಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿರುವುದರಿಂದಾಗಿ ವಾಹನ ತಯಾರಕರಿಗೆ ಸರಿಯಾದ ಗಾತ್ರದ ಹಾಗೂ ಆಕರ್ಷಕ ಲುಕ್ ಹೊಂದಿರುವ ಕಾರುಗಳನ್ನು ಅಭಿವೃದ್ಧಿ ಪಡಿಸುವುದು ಸವಾಲಿನ ಕೆಲಸವಾಗಿದೆ.

4 ಮೀಟರ್‌ಗಳಿಗಿಂತ ಸ್ವಲ್ಪ ಹೆಚ್ಚು ಎತ್ತರವನ್ನು ಹೊಂದಿರುವ ಕಿಯಾ ಸೆಲ್ಟೋಸ್ ಕಾರ್ ಅನ್ನು ಗಾತ್ರ ಹಾಗೂ ಲುಕ್‍ಗಳೆರಡನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಿ ತಯಾರಿಸಲಾಗಿದೆ. ಇದೂ ಸಹ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಾರಣವಾಗಿದೆ.


Click it and Unblock the Notifications








