ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ದೇಶಿಯ ಮಾರುಕಟ್ಟೆಯಲ್ಲಿ ಈಗ ಎಸ್‍‍ಯುವಿ ವಾಹನಗಳದ್ದೇ ದರ್ಬಾರು. ಎಂಟ್ರಿ ಲೆವೆಲ್‍‍ನ ಸೆಗ್‍‍ಮೆಂಟ್ ಆಗಿರಲಿ ಅಥವಾ ಅಲ್ಟ್ರಾ ಲಗ್ಷುರಿಯ ಸೆಗ್‍‍‍ಮೆಂಟ್ ಆಗಿರಲಿ ಬಹುತೇಕ ವಾಹನ ಪ್ರಿಯರ ನೆಚ್ಚಿನ ಆಯ್ಕೆ ಎಸ್‍‍ಯುವಿಗಳಾಗಿವೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಈ ಕಾರಣಕ್ಕಾಗಿಯೆ ಲ್ಯಾಂಬೊರ್ಗಿನಿ, ಫೆರಾರಿ, ಆಸ್ಟನ್ ಮಾರ್ಟಿನ್, ರೋಲ್ಸ್ ರಾಯ್ಸ್, ಬೆಂಟ್ಲಿಯಂತಹ ಕಂಪನಿಗಳು ಎಸ್‍‍ಯುವಿ ವಾಹನಗಳನ್ನು ಮಾರಾಟ ಮಾಡುತ್ತಿವೆ. 2018ರ ಜನವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಲ್ಯಾಂಬೊರ್ಗಿನಿ ಉರುಸ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಇದುವರೆಗೂ ಭಾರತದಲ್ಲಿ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯ 50 ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಕಡಿಮೆ ಸಮಯದಲ್ಲಿ ವೇಗವಾಗಿ 50 ವಾಹನಗಳ ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಎಸ್‍‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಈ ಬಗ್ಗೆ ಮಾತನಾಡಿರುವ ಲ್ಯಾಂಬೊರ್ಗಿನಿಯ ಮುಖ್ಯಸ್ಥರಾದ ಶರದ್ ಅಗರ್‍‍ವಾಲ್‍‍ರವರು, ಉರುಸ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಾದ ಮೊದಲ ಮಾರುಕಟ್ಟೆಗಳ ಪೈಕಿ ಭಾರತವು ಒಂದಾಗಿದೆ. ಬಿಡುಗಡೆಯ ಸಮಯದಲ್ಲಿಯೇ ಉರುಸ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದೆಂಬ ನಂಬಿಕೆಯಿತ್ತು.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಲ್ಯಾಂಬೊರ್ಗಿನಿ ಉರುಸ್ ಭಾರತದ ಮಾರುಕಟ್ಟೆಗೆ ಅವಶ್ಯವಾಗಿರುವ ಡೈನಾಮಿಕ್ಸ್ ಅನ್ನು ಒದಗಿಸುತ್ತದೆ. ಉರುಸ್ ಎಸ್‍‍ಯುವಿಯನ್ನು ಖರೀದಿಸಿರುವ 70%ಗೂ ಅಧಿಕ ಜನರು ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಅನ್ನು ಮೊದಲ ಬಾರಿಗೆ ಖರೀದಿಸಿದವರಾಗಿದ್ದಾರೆ. ಉರುಸ್ ಎಸ್‍‍ಯುವಿಯ ಬಿಡುಗಡೆಯೊಂದಿಗೆ ಲ್ಯಾಂಬೊರ್ಗಿನಿಯು ಭಾರತದಲ್ಲಿನ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಲ್ಯಾಂಬೊರ್ಗಿನಿ ಉರುಸ್ ಪ್ರಪಂಚದ ವೇಗದ ಎಸ್‍‍ಯುವಿಯಾಗಿದೆ. ಈ ಎಸ್‍‍ಯುವಿಯ ವೇಗವು ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಈ ವಾಹನವು ಸೂಪರ್ ಸ್ಪೋರ್ಟ್ಸ್ ಯುಟಿಲಿಟಿ ವಾಹನದಡಿಯಲ್ಲಿ ಬರುತ್ತದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಈ ಎಸ್‍‍ಯುವಿಯಲ್ಲಿರುವ 5 ಸೀಟುಗಳು ಆರಾಮದಾಯಕ ಅನುಭವವನ್ನು ನೀಡುತ್ತವೆ. ಇದರ ಜೊತೆಗೆ ಸುರಕ್ಷಾ ಫೀಚರ್ಸ್, ಎಂಟರ್‍‍ಟೇನ್‍‍ಮೆಂಟ್ ಸಿಸ್ಟಂಗಳೂ ಸಹ ಈ ಎಸ್‍‍ಯುವಿಯ ದಾಖಲೆ ಮಾರಾಟಕ್ಕೆ ಕಾರಣವಾಗಿವೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ರಸ್ತೆಯಲ್ಲಿ ಸಾಗುವಾಗ ತನ್ನತ್ತ ಜನರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ ಲ್ಯಾಂಬೊರ್ಗಿನಿ ಉರುಸ್ ಚಿಕ್ಕ ಒವರ್‍‍ಹ್ಯಾಂಗ್‍‍ಗಳನ್ನು ಹೊಂದಿರುವ ಕೂಪೆ ಸಿಲೋಟ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ದೊಡ್ಡ ಗಾತ್ರದ ಬಂಪರ್‍‍ಗಳನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಈ ಎಸ್‍‍ಯುವಿಯ ಮುಂಭಾಗದ ಫೆಂಡರ್‍‍ನಲ್ಲಿ ಸ್ಲಿಮ್ ಆದ ಹೆಡ್‍‍ಲ್ಯಾಂಪ್, ಹೈ ಶೋಲ್ಡರ್ ಲೈನ್, 21 ಇಂಚಿನ ವ್ಹೀಲ್, ರೇಸ್ ಕಾರ್ ಲೈನ್ ಡಿಫ್ಯೂಸರ್ ಹೊಂದಿರುವ ವೈ ಶೇಪಿನ ಟೇಲ್ ಲ್ಯಾಂಪ್ ಹಾಗೂ ಬಲ್ಗಿಂಗ್ ಹುಡ್‍‍ಗಳಿವೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯಲ್ಲಿ 4.0 ಲೀಟರಿನ ವಿ8 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‍‍ಪಿ‍ಎಂನಲ್ಲಿ 641 ಬಿ‍‍ಹೆಚ್‍‍ಪಿ ಪವರ್ ಹಾಗೂ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 0 - 100 ಕಿ.ಮೀವರೆಗಿನ ಆಕ್ಸೆಲೆರೆಷನ್ ಅನ್ನು 3.6 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಲ್ಯಾಂಬೊರ್ಗಿನಿ ಉರುಸ್

ಈ ಎಸ್‍‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಈ ಎಸ್‍‍ಯುವಿಯ ಎಂಜಿನ್‍‍ನಲ್ಲಿ 8 ಸ್ಫೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಟಾರ್ಕ್ ವೆಕ್ಟರಿಂಗ್ ರೇರ್ ಡಿಫರೆಂಶಿಯಲ್‍‍ನೊಂದಿಗೆ 4 ವ್ಹೀಲ್ ಡ್ರೈವ್ ಹೊಂದಿದೆ.

More from DriveSpark

Article Published On: Friday, September 27, 2019, 15:03 [IST]
English summary
Lamborghini Urus sales in India cross 50 units – Creates new record - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+