ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಂದು ಬಿಎಸ್-3 ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಚಾಲನೆ ನೀಡಿತ್ತು. ಇದೀಗ ಮತ್ತೆ 2020ರ ಏಪ್ರಿಲ್ 1ಕ್ಕೆ ಬಿಎಸ್-4 ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿ ಬಿಎಸ್-6 ನಿಯಮಗಳನ್ನು ಜಾರಿಗೆ ತರುತ್ತಿದೆ. ಹೀಗಾಗಿ ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಜನಪ್ರಿಯ ವಾಹನಗಳಿಗೆ ಸಂಕಷ್ಟ ಎದುರಾಗಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಪ್ರಯಾಣಿಕರ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸಾರಿಗೆ ಇಲಾಖೆಯು ಹೊಸ ವಾಹನ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಬಿಎಸ್ 6 ನಿಯಮವು ಜಾರಿಗೆ ಬಂದಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ಕೆಲವು ಜನಪ್ರಿಯ ವಾಹನಗಳೇ ಮಾರುಕಟ್ಟೆಯಿಂದ ನಿರ್ಗಮಿಸುವುದು ಅನಿವಾರ್ಯವಾಗಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಹೌದು, ಬಿಎಸ್ 6 ನಿಯಮದಿಂದಾಗಿ ಹೊಸ ವಾಹನಗಳ ಎಂಜಿನ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆಗಳಾಗುವುದಲ್ಲದೇ ಪ್ರಯಾಣಿಕರ ಸುರಕ್ಷಾ ಸೌಲಭ್ಯಗಳು ಕೂಡಾ ಉನ್ನತೀಕರಣ ಹೊಂದಲಿದ್ದು, ಹೊಸ ನಿಯಮದಿಂದಾಗಿ ಅಗ್ಗದ ಬೆಲೆಯ ವಾಹನಗಳ ಮಾರಾಟ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಇಷ್ಟು ದಿನಗಳ ಕಾಲ ಕಡಿಮೆ ಬೆಲೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಮೂಲಕ ಹಾಟ್ಸ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಗಳ ಉತ್ಪನ್ನಗಳೇ ಇದೀಗ ಮಾರುಕಟ್ಟೆಯಿಂದ ನಿರ್ಗಮಿಸುತ್ತಿವೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಇವುಗಳಲ್ಲಿ ಮಹೀಂದ್ರಾ ನಿರ್ಮಾಣದ ಜಿಟೊ, ಸುಪ್ರೊ, ಟಾಟಾ ನಿರ್ಮಾಣದ ಏಸ್, ಮ್ಯಾಜಿಕ್ ಮತ್ತು ಮಾರುತಿ ಸುಜುಕಿ ನಿರ್ಮಾಣದ ಓಮ್ನಿ ವ್ಯಾನ್ ಕೂಡಾ ಬಿಎಸ್-6 ನಿಯಮ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದು, ಅತಿಯಾದ ಮಾಲಿನ್ಯ ಉತ್ಪತ್ತಿ ಮತ್ತು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದೇ ಈ ವಾಹನಗಳ ಮಾರಾಟವನ್ನು ಕೈಬಿಡುವುದು ಅನಿವಾರ್ಯವಾಗಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳು ಸದ್ಯ ಮಾರುಕಟ್ಟೆಯಲ್ಲಿರುವ ವಾಹನಗಳಿಂತಲೂ ಶೇ.25 ರಷ್ಟು ಮಾಲಿನ್ಯ ಉತ್ಪತ್ತಿಯಲ್ಲಿ ಇಳಿಕೆ ಕಂಡಿದ್ದು, ಇದರ ಜೊತೆಗೆ ಶೇ. 10ರಿಂದ ಶೇ.15 ರಷ್ಟು ಮೈಲೇಜ್ ಪ್ರಮಾಣವು ಹೆಚ್ಚಳವಾಗಲಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಕೆಲವು ಅಗ್ಗದ ಬೆಲೆಯ ವಾಹನಗಳನ್ನು ಉನ್ನತಿಕರಿಸಿದರೂ ಸಹ ಬೆಲೆ ಹೆಚ್ಚಳವಾಗುವ ಸಂಬಂಧ ಹಳೆಯ ವಾಹನಗಳ ಉತ್ಪಾದನೆ ಕೈಬಿಟ್ಟು ಹೊಸ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ವಾಹನ ಉತ್ಪಾದನಾ ಸಂಸ್ಥೆಗಳು ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಜೊತೆಗೆ ಇಂಡಿಯನ್ ಕ್ರ್ಯಾಶ್ ಟೆಸ್ಟ್ ಆರಂಭಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಕನಿಷ್ಠ ಸೆಫ್ಟಿ ರೇಟಿಂಗ್ ಪಡೆಯಲು ಅಸಾಧ್ಯವಾಗದ ವಾಹನಗಳ ಉತ್ಪಾದನೆ ಮಾಡದಂತೆ ಖಡಕ್ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಉನ್ನತೀಕರಣ ಮಾಡಲು ಸಾಧ್ಯವಾಗದ ವಾಹನಗಳ ಉತ್ಪಾದನೆಯನ್ನು ಕೈಬಿಡಲಾಗುತ್ತಿದೆ.

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಬೆಲೆ ಹೆಚ್ಚಳದ ಬಿಸಿ

ಸದ್ಯ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆಯು ಬಿಎಸ್-6 ನಿಯಮ ಜಾರಿ ನಂತರ ಕಾರುಗಳ ಬೆಲೆಯಲ್ಲಿ ಕನಿಷ್ಠ ರೂ. 1 ಲಕ್ಷದಿಂದ ರೂ.1.50 ಲಕ್ಷ ಮತ್ತು ಬೈಕ್‌ಗಳ ಬೆಲೆಯಲ್ಲಿ ರೂ. 8 ಸಾವಿರದಿಂದ ರೂ.15 ಸಾವಿರ ಬೆಲೆ ಹೆಚ್ಚಳವಾಗಲಿವೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಮಹೀಂದ್ರಾ ಜಿಟೊ, ಸುಪ್ರೊ ಮತ್ತು ಟಾಟಾ ಏಸ್ ಮಾರಾಟಕ್ಕೆ ಗುಡ್ ಬೈ?

ಆದ್ರೆ ಹೊಸ ನಿಯಮದಿಂದಾಗಿ ಹೊಸ ವಾಹನಗಳ ಮಾಲಿನ್ಯ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದ್ದಲ್ಲದೇ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷೆತೆ ಲಭ್ಯವಾಗಲಿದೆ ಎನ್ನುವುದು ಸಮಾಧಾನಕರ ಸಂಗತಿ ಅಂದ್ರೆ ತಪ್ಪಾಗುವುದಿಲ್ಲ.

Most Read Articles

Kannada
English summary
Tata Ace, Mahindra Jeeto & Supro Minivans To Be Discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X