ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಭಾರತದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತ್ತು ಇಂಧನ ದರಗಳಲ್ಲಿ ಆದ ಭಾರೀ ವ್ಯತ್ಯಾಸದಿಂದಾಗಿ ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟ ಪ್ರಮಾಣವು ಭಾರೀ ಇಳಿಕೆ ಕಂಡಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಮೇ ಅವಧಿಯಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ. ಆದ್ರೆ ಮಹೀಂದ್ರಾ ಸಂಸ್ಥೆಯು ತನ್ನ ಹೊಸ ಆವೃತ್ತಿಗಳಾದ ಎಕ್ಸ್‌ಯುವಿ300 ಮತ್ತು ಮರಾಜೊ ಮೂಲಕ ಸ್ಥಿರತೆ ಕಾಯ್ದುಕೊಂಡಿದ್ದು, ಹೊಸ ಕಾರುಗಳು ಭರ್ಜರಿ ಮಾರಾಟವಾಗಿರುವುದು ಮಹೀಂದ್ರಾಕ್ಕೆ ಮರುಜೀವ ತುಂಬಿವೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಹೌದು, ಮೇ ಅವಧಿಯಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆದ ಹಿನ್ನೆಲೆಯಲ್ಲಿ ಕಾರು ಮಾರಾಟ ಪ್ರಮಾಣವು ಸಂಪೂರ್ಣವಾಗಿ ಕುಸಿತ ಕಂಡಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಳೆದ ವರ್ಷದ ಮೇ ಅವಧಿಗಿಂತ ಈ ಬಾರಿ ಶೇ. 10ರಿಂದ ಶೇ. 35 ರಷ್ಟು ಕಾರು ಮಾರಾಟದಲ್ಲಿ ಕುಸಿತ ಕಂಡಿವೆ. ಇದರಲ್ಲಿ ಮಹೀಂದ್ರಾ ಸಹ ಕಾರು ಮಾರಾಟದಲ್ಲಿ ಕುಸಿತ ಕಂಡಿದ್ದರೂ ಸಹ ಹೊಸ ಕಾರು ಮಾದರಿಗಳಾದ ಮರಾಜೊ ಎಂಪಿವಿ ಮತ್ತು ಎಕ್ಸ್‌ಯುವಿ300 ಮಾದರಿಗಳು ಮಾರಾಟದಲ್ಲಿ ಮುಂಚೂಣಿ ಸಾಧಿಸಿವೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

2019ರ ಮೇ ಅವಧಿಯಲ್ಲಿ ಮಹೀಂದ್ರಾ ಸಂಸ್ಥೆಯು ಒಟ್ಟು 20, 608 ಕಾರುಗಳನ್ನು ಮಾರಾಟ ಮಾಡಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 20,715 ಕಾರುಗಳನ್ನು ಮಾರಾಟ ಮಾಡಿತ್ತು. ಇದರಲ್ಲಿ ಇದೀಗ ಹೊಸದಾಗಿ ಎಂಟ್ರಿ ಕೊಟ್ಟಿರುವ ಮರಾಜೊ ಮತ್ತು ಎಕ್ಸ್‌ಯುವಿ300 ಮಹೀಂದ್ರಾ ಸಂಸ್ಥೆಗೆ ಮರುಜೀವ ನೀಡಿರುವುದರಲ್ಲಿ ಎರಡು ಮಾತಿಲ್ಲ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಸದ್ಯದ ಪರಿಸ್ಥಿತಿಯಲ್ಲಿ ಎರಡರಿಂದ ಮೂರು ಕಾರು ಉತ್ಪಾದನಾ ಸಂಸ್ಥೆಗಳನ್ನು ಹೊರತುಪಡಿಸಿ ಬಹುತೇಕ ಕಾರು ಸಂಸ್ಥೆಗಳು ನಷ್ಟದ ಹಾದಿ ಹಿಡಿದ್ದು, ನಿಗದಿತ ಪ್ರಮಾಣದ ಕಾರು ಮಾರಾಟವಿಲ್ಲದೆ ಕೆಲವು ಕಡೆಗಳಲ್ಲಿ ಡೀಲರ್ಸ್‌ಗಳನ್ನು ಸಹ ಮುಚ್ಚಲಾಗುತ್ತಿದೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ಮಹೀಂದ್ರಾ ಕಾರು ಮಾರಾಟ ಪ್ರಮಾಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಮರಾಜೊ ಮತ್ತು ಎಕ್ಸ್‌ಯುವಿ300 ಕಾರು ಸಾಕಷ್ಟು ಸಹಕಾರಿಯಾಗಿದ್ದು, ಬಹುಬಳಕೆಯ ಕಾರುಗಳಲ್ಲಿ ಮರಾಜೊ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಎಕ್ಸ್‌ಯುವಿ300 ಭಾರೀ ಸದ್ದು ಮಾಡುತ್ತಿವೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಮಹೀಂದ್ರಾ ಸಂಸ್ಥೆಯು ಎಕ್ಸ್‌ಯುವಿ 300 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಕಳೆದ ಫೆಬ್ರುವರಿ 14ರಂದು ಬಿಡುಗಡೆಯಾಗಿದ್ದು, ವಿಶೇಷ ವಿನ್ಯಾಸ ಮತ್ತು ಆಕರ್ಷಕ ಬೆಲೆಗಳಿಂದಾಗಿ ಹೊಸ ಕಾರು ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ. ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಬರೋಬ್ಬರಿ 50 ಸಾವಿರ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಎಕ್ಸ್‌ಯುವಿ300 ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಫೀಚರ್ಸ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತಿ ಕಡಿಮೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಹೊಸ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದ್ದು, ಪೆಟ್ರೋಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿವೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಇನ್ನು ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ಕಾರು ಖರೀದಿಯ ಪ್ರಮುಖ ಆಕರ್ಷಣೆಯಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಎಂ2, ಎಂ4, ಎಂ6 ಮತ್ತು ಎಂ8 ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮರಾಜೊ ಕಾರುಗಳು ಆರಂಭಿಕವಾಗಿ ರೂ. 9.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.13.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಮಹೀಂದ್ರಾ ಸಂಸ್ಥೆಗೆ ಮರುಜೀವ ತುಂಬಿದ ಎಕ್ಸ್‌ಯುವಿ300 ಮತ್ತು ಮರಾಜೊ ಕಾರು ಮಾರಾಟ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ.

Most Read Articles

Kannada
English summary
Mahindra's Car Sales Are Down By 3 Per Cent In May. Read in Kannada.
Story first published: Saturday, June 1, 2019, 20:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X