ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಆಯ್ದ ಕೆಲವು ವೆರಿಯೆಂಟ್‌ಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಮಾಹಿತಿಗಳ ಪ್ರಕಾರ, ಎಕ್ಸ್‌ಯುವಿ300 ಕಾರಿನ ಸಸ್ಪೆಷನ್ ಕಾಂಪೊನೆಂಟ್ ವಿಭಾಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಗ್ರಾಹಕರ ದೂರಿನ ಮೇರೆಗೆ ಮಹೀಂದ್ರಾ ಸಂಸ್ಥೆಯು ಹೊಸ ಕಾರುಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಮೇ 19, 2019ರ ಮೊದಲು ಉತ್ಪಾದನೆಯಾದ ಕಾರುಗಳಲ್ಲಿ ಮಾತ್ರವೇ ಈ ಸಮಸ್ಯೆ ಎದುರಾಗಿದ್ದು, ತದನಂತರ ಉತ್ಪಾದನೆಯಾದ ಕಾರುಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂಬುವುದನ್ನು ಮಹೀಂದ್ರಾ ಸಂಸ್ಥೆಯು ಸ್ಪಷ್ಟಪಡಿಸಿದೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಸಸ್ಪೆಷನ್ ಕಾಂಪೊನೆಂಟ್‌ನಲ್ಲಿ ತಾಂತ್ರಿಕ ಸಮಸ್ಯೆಯು ಗಂಭೀರ ಅಲ್ಲವಾದರೂ ಕಾರು ಚಾಲನೆ ವೇಳೆ ಅತಿಯಾದ ಶಬ್ದದಿಂದಾಗಿ ಹಿಂಬದಿಯಲ್ಲಿರುವ ಕೂರುವ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಈ ಕುರಿತು ಕೆಲವು ಕಾರು ಮಹೀಂದ್ರಾ ಸಂಸ್ಥೆಯ ಗಮನಕ್ಕೆ ತಂದಿದ್ದರು.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಗ್ರಾಹಕರ ದೂರು ಆಧರಿಸಿ ಎಷ್ಟು ಕಾರುಗಳಲ್ಲಿ ಈ ಸಮಸ್ಯೆ ಉಂಟಾಗಿದೆ ಎಂಬುವುದು ಇದೀಗ ನಿರ್ದಿಷ್ಟವಾಗಿ ಪತ್ತೆಹಚ್ಚಲಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಸಸ್ಪೆಷನ್ ಕಾಂಪೊನೆಂಟ್ ತಾಂತ್ರಿಕ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ಕೊಡಲಾಗುವುದು ಎಂಬ ಭರವಸೆ ನೀಡಲಾಗಿದೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಇನ್ನು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಸಾಕಷ್ಟು ಜನಪ್ರಿಯತೆ ಹೊಂದುತ್ತಿರುವ ಎಕ್ಸ್‌ಯುವಿ300 ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆ ತರುತ್ತಿರುವ ಮಹೀಂದ್ರಾ ಇದೀಗ ಡಬ್ಲ್ಯು6 ಡೀಸೆಲ್ ವರ್ಷನ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಎಕ್ಸ್‌ಯುವಿ300 ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು8 ಎನ್ನುವ ಪ್ರಮುಖ ವೆರಿಯೆಂಟ್‌ಗಳನ್ನು ಹೊಂದಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡಾಗ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಹೆಚ್ಚು ಬೇಡಿಕೆ ಬಂದ ಹಿನ್ನಲೆಯಲ್ಲಿ ಕೆಲವು ಬದಲಾವಣೆ ತಂದ ಮಹೀಂದ್ರಾ ಸಂಸ್ಥೆಯು ಕೆಲವು ದಿನಗಳ ಹಿಂದೆ ಡಬ್ಲ್ಯು8 ಮಾದರಿಯಲ್ಲಿ ಮತ್ತು ಇದೀಗ ಡಬ್ಲ್ಯು6 ಡೀಸೆಲ್ ಕಾರುಗಳಲ್ಲಿ ಆಟೋಮ್ಯಾಟಿಕ್ ವರ್ಷನ್ ಹೊರತಂದಿದೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಸದ್ಯ ಬಿಡುಗಡೆಯಾಗಿರುವ ಎಕ್ಸ್‌ಯುವಿ300 ಡಬ್ಲ್ಯು6 ಡೀಸೆಲ್ ವರ್ಷನ್‌ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.99 ಲಕ್ಷ ಬೆಲೆ ಹೊಂದಿದ್ದು, ಇದು ಮಧ್ಯಮ ಕ್ರಮಾಂಕದ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಬಯಸುವ ಗ್ರಾಹಕರ ಆಯ್ಕೆಗೆ ಸಹಕಾರಿಯಾಗಿದೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಇನ್ನುಳಿದಂತೆ ಎಕ್ಸ್‌ಯುವಿ300 ಕಾರು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 8.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು 12.69 ಲಕ್ಷ ಬೆಲೆ ಹೊಂದಿದ್ದು, ಇದೀಗ ಹೊಸದಾಗಿ ಡಬ್ಲ್ಯು6 ಮತ್ತು ಡಬ್ಲ್ಯು8 ಡೀಸೆಲ್ ಮಾದರಿಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇನ್ನಿತರೆ ಯಾವುದೇ ಬದಲಾವಣೆ ಪಡೆದುಕೊಂಡಿಲ್ಲ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಇನ್ನು ಎಕ್ಸ್‌ಯುವಿ300 ಡಿಸೇಲ್ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ ಮೂಲಕ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 1.2-ಲೀಟರ್ ಎಂಜಿನ್‌ ಮೂಲಕ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿದೆ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಹೊಂದಿದೆ.

MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಜೊತೆಗೆ ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ. ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ- ಎಕ್ಸ್‌ಯುವಿ300 ವಾಪಸ್ ಪಡೆದ ಮಹೀಂದ್ರಾ

ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

Article Published On: Tuesday, November 5, 2019, 11:23 [IST]
English summary
Mahindra XUV300 Recalled In India Over A Faulty Suspension Component. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+