ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಮಹೀಂದ್ರಾ ಥಾರ್ ವಾಹನವು ಬಹು ದೊಡ್ಡ ಇತಿಹಾಸವನ್ನು ಹೊಂದಿದೆ. ಈ ಕಾರು 1949ರ ಜೂನ್ 3 ರಂದು ಮಾರುಕಟ್ಟೆಗೆ ಕಾಲಿಟ್ಟಿತ್ತು. ಆಗ ಈ ಕಾರ್ ಅನ್ನು ಮಹೀಂದ್ರಾ ಸಿ‍‍ಜೆ3‍ಎ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಈ ಕಾರಿಗೆ 70 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಆವೃತ್ತಿಯೊಂದನ್ನು ಬಿಡುಗಡೆ ಮಾಡಲಾಗುತ್ತಿದ್ದು, ಸಿಗ್ನೇಚರ್ ಎಡಿಷನ್ ಎಂಬ ಹೆಸರಿಡಲಾಗಿದೆ. ಈ ಸಿಗ್ನೇಚರ್ ಎಡಿಷನ್ ವಾಹನವನ್ನು ಮಹಾರಾಷ್ಟ್ರದ ನಾಸಿಕ್‍‍ನಲ್ಲಿರುವ ಕಂಪನಿಯ ತಯಾರಿಕಾ ಘಟಕದಲ್ಲಿ ತಯಾರಿಸಲಾಗುವುದು. ಕೇವಲ 700 ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುವುದು. ಈ ಕಾರ್ ಅನ್ನು ಅಕ್ವಾ ಮರೀನ್ ಬ್ಲೂ ಬಣ್ಣದಲ್ಲಿ ಮಾರಾಟ ಮಾಡಲಾಗುವುದು.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಈ ಕಾರಿನ ಮುಂಭಾಗದಲ್ಲಿ ನಪೊಲಿ ಬ್ಲಾಕ್ ಗ್ರಿಲ್ ಅನ್ನು ಅಳವಡಿಸಲಾಗಿದ್ದು, ಜೊತೆಯಲ್ಲಿ 5 ಸ್ಪೋಕಿನ ಅಲಾಯ್ ವ್ಹೀಲ್, ಕೊಲೊನ್ ಲೆದರ್ ಹೊಂದಿರುವ ಕಪ್ಪು ಬಣ್ಣದ ಸೀಟುಗಳಿದ್ದು, ಅವುಗಳ ಮೇಲೆ ಥಾರ್ ಲೊಗೊ ಅಳವಡಿಸಲಾಗಿದೆ.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಈ ಕಾರಿನ ಬಂಪರ್‍ ಡಿ ಸ್ಯಾಟ್ ಸಿಲ್ವರ್ ಬಣ್ಣವನ್ನು ಹೊಂದಿದೆ. ಸ್ಪೇಷಲ್ ಸಿಗ್ನೇಚರ್ ಎಡಿಷನ್ ಡೆಕಾಲ್‍‍ಗಳನ್ನು ಕಾರಿನ ಸುತ್ತಲೂ ಅಳವಡಿಸಲಾಗಿದೆ. ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಕಾರಿನ ಅಧಿಕೃತವಾದ ಬ್ರೋಷರ್ ಸೋರಿಕೆಯಾಗಿದ್ದು, ಆಟೋ ಟೆಕ್ ಇಂಡಿಯಾ ಕೈಸೇರಿದೆ.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಸೋರಿಕೆಯಾಗಿರುವ ಬ್ರೋಷರ್, ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾರಿನ ಬಗ್ಗೆ ಹಾಗೂ ಕಾರಿನಲ್ಲಿರುವ ಫೀಚರ್‍‍ಗಳ ಬಗ್ಗೆ ಮಾಹಿತಿ ನೀಡುತ್ತದೆ. ಆದರೆ ಈ ಬ್ರೋಷರ್‍‍ನಲ್ಲಿ ಎಲ್ಲಿಯೂ ಕಾರಿನ ಬೆಲೆಯ ಬಗ್ಗೆ ನಮೂದಿಸಲಾಗಿಲ್ಲ. ಈ ಕಾರಿನ ಬೆಲೆಯು ರೂ.10 ಲಕ್ಷದ ಆಸುಪಾಸಿನಲ್ಲಿರುವ ಸಾಧ್ಯತೆಗಳಿವೆ. ಈ ಸಿಗ್ನೇಚರ್ ಎಡಿಷನ್ ಕಾರಿನ ಹೊರತಾಗಿ ಮಹೀಂದ್ರಾ ಕಂಪನಿಯು ಹೊಸ ವಿನ್ಯಾಸದಲ್ಲಿರುವ ಥಾರ್ ಕಾರನ್ನು ಬಿಡುಗಡೆಗೊಳಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಹೊಸ ಥಾರ್ ಕಾರನ್ನು ಈ ವರ್ಷದ ಕೊನೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ, ಇಲ್ಲದಿದ್ದಲ್ಲಿ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈ ಕಾರ್ ಅನ್ನು ಅನೇಕ ಬಾರಿ ಕೊಯಂಬತ್ತೂರಿನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಸ್ಪಾಟ್ ಟೆಸ್ಟ್ ನಲ್ಲಿ ಕಾರಿನ ಗಾತ್ರವನ್ನು ಹಿಗ್ಗಿಸಲಾಗಿರುವುದು ಕಂಡು ಬಂದಿದೆ.

MOST READ: ಮಾರಾಟದಲ್ಲಿ ಹಾರ್ಲೆ ಡೇವಿಡ್‍‍ಸನ್ ಹಿಂದಿಕ್ಕಿದ ಕೆ‍‍ಟಿ‍ಎಂ

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಈ ಕಾರಿನಲ್ಲಿ 7 ಸ್ಲಾಟ್ ಗ್ರಿಲ್‍‍ಗಳ ಜೊತೆಗೆ ಸರ್ಕ್ಯುಲರ್ ಹೆಡ್‍‍ಲ್ಯಾಂಪ್, ದೊಡ್ಡ ಗಾತ್ರದ ಫೆಂಡರ್ ಹಾಗೂ ಫ್ಲೆರ್ ವ್ಹೀಲ್ ಆರ್ಕ್‍‍ಗಳನ್ನು ಅಳವಡಿಸಲಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಇನ್ನೊಂದು ಕಾರಿನ ಸಾಫ್ಟ್ ಹಾಗೂ ಹಾರ್ಡ್ ಟಾಪ್ ಎಂಡ್ ಮಾದರಿಗಳನ್ನು ತೋರಿಸಲಾಗಿತ್ತು.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಹಾರ್ಡ್ ಟಾಪ್ ಎಂಡ್ ಆವೃತ್ತಿಯಲ್ಲಿ ಸ್ಪೇರ್ ವ್ಹೀಲ್ ಅಳವಡಿಸುವುದರ ಜೊತೆಗೆ ಪೂರ್ಣ ಪ್ರಮಾಣದ ಟೇಲ್‍‍‍ಗೇಟ್, ಹಿಂಭಾಗದಲ್ಲಿ ದೊಡ್ಡ ವಿಂಡ್‍‍ಸ್ಕ್ರೀನ್ ನೀಡಲಾಗಿದೆ. ಇಂಟಿರಿಯರ್‍‍ನಲ್ಲಿ ಹೊಸ ವಿನ್ಯಾಸದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಹೊಸ ಡ್ಯಾಶ್‍‍ಬೋರ್ಡ್ ವಿನ್ಯಾಸವನ್ನು ಹೊಂದಿದೆ.

MOST READ: ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಹೊಸ ಮಾಲಿನ್ಯ ನಿಯಮಗಳಿಗೆ ಹೊಂದುಕೊಳ್ಳುವಂತಹ ಎಂಜಿನ್ ಅನ್ನು ಅಭಿವೃದ್ಧಿಪಡಿಸಿ ಥಾರ್ ವಾಹನದಲ್ಲಿ ಅಳವಡಿಸಲಾಗಿದೆ. ಈ ಕಾರಿನಲ್ಲಿ 2.0 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, 138 ಬಿ‍‍ಹೆಚ್‍‍ಪಿ ಪವರ್ ಹಾಗೂ 300 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿಯೂ ಸಹ ಫೋರ್ ವ್ಹೀಲ್ ಡ್ರೈವ್ ಲೇ‍ಔ‍‍ಟ್ ಅಳವಡಿಸಿದ್ದು, ಹೊಸ 6 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಇದರಲ್ಲಿ ಡ್ಯೂಯಲ್ ಏರ್‍‍ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮ್ಯಾಂಡರ್, ಎ‍ಬಿ‍ಎಸ್ ಅಳವಡಿಸಲಾಗಿದ್ದು, ಇ‍‍ಬಿ‍‍ಡಿ ಫೀಚರ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಬಹಿರಂಗವಾಯ್ತು ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಮಾಹಿತಿ

ಹೊಸ ಫೀಚರ್‍‍ಗಳನ್ನು ಅಭಿವೃದ್ಧಿ ಪಡಿಸಿರುವುದರಿಂದ ಹಾಗೂ ಹೊಸ ಬಿ‍ಎಸ್6 ನಿಯಮಗಳಿಗೆ ಅನುಕೂಲವಾಗುವಂತಹ ಎಂಜಿನ್ ಅಳವಡಿಸಲಾಗಿರುವುದರಿಂದ ಹೊಸ 2020ರ ಮಹೀಂದ್ರಾ ಥಾರ್ ಕಾರಿನ ಬೆಲೆಯು, ಈಗಿರುವ ಕಾರಿನ ಬೆಲೆಗಿಂತ ಹೆಚ್ಚಾಗಲಿದೆ. ಹೊಸ ಕಾರಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.9.49 ಲಕ್ಷಗಳಾಗಲಿದೆ.

Image Courtesy: AutoTech India

Most Read Articles

Kannada
English summary
Mahindra Thar Signature Edition brochure leaks - Read in kannada
Story first published: Monday, June 17, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X