Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಹಾರ್ಲೆ ಡೇವಿಡ್‍ಸನ್ ಹಿಂದಿಕ್ಕಿದ ಕೆಟಿಎಂ
ಆಸ್ಟ್ರಿಯಾ ಮೂಲದ ಬೈಕ್ ತಯಾರಕ ಕಂಪನಿ ಕೆಟಿಎಂ ಎಜಿ ಕಂಪನಿಯು ಹಾಗೂ ಬಜಾಜ್ ಆಟೋ ಲಿಮಿಟೆಡ್ ಜೊತೆ ಸಹಭಾಗಿತ್ವವನ್ನು ಹೊಂದಿದೆ. ಕೆಟಿಎಂ ಈಗ ಹೆಚ್ಚು ಮಾರಾಟವಾಗುವ ಫುಲ್ ಸೈಜ್ ಟಾಪ್ ಬೈಕ್‍ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕೆಟಿಎಂ ಕಂಪನಿಯು ಮಾರಾಟದಲ್ಲಿ ಹಾರ್ಲೆ ಡೇವಿಡ್‍ಸನ್ ಕಂಪನಿಯ ಬೈಕುಗಳನ್ನು ಹಿಂದಿಕ್ಕಿದ್ದು, ಈಗ ಕವಾಸಕಿ ಕಂಪನಿಯ ಬೈಕುಗಳನ್ನು ಹಿಂದಿಕ್ಕುವ ಯೋಜನೆಯನ್ನಿಟ್ಟುಕೊಂಡಿದೆ. ಸ್ಟೀಫನ್ ಪಿಯರರ್ ಕೆಟಿಎಂ ಮೋಟಾರ್ಸ್‍ನ ಹಿಂದಿರುವ ದೊಡ್ಡ ಶಕ್ತಿಯಾಗಿದ್ದಾರೆ. ಇವರು 1991ರಲ್ಲಿ ಕೆಟಿಎಂ ಮೋಟಾರ್ಸ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನಂತರ ಕಳೆದ 28 ವರ್ಷಗಳಿಂದ ಕೆಟಿಎಂ ಕಂಪನಿಯನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ. ಇದರಿಂದಾಗಿ ಹಾರ್ಲೆ ಡೇವಿಡ್‍ಸನ್ ಕಂಪನಿಯನ್ನು ಮಾರಾಟದಲ್ಲಿ ಹಿಂದಿಕ್ಕಲು ಸಾಧ್ಯವಾಗಿದೆ.

2018ರಲ್ಲಿ ಕೆಟಿಎಂ ಕಂಪನಿಯ 2,61,000 ಬೈಕುಗಳನ್ನು ಮಾರಾಟ ಮಾಡಲಾಗಿದ್ದು, ಹಾರ್ಲೆ ಡೇವಿಡ್‍ಸನ್ ಕಂಪನಿಗಿಂತ 35,000ಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಲಾಗಿದೆ. ಕುಸಿಯುತ್ತಿರುವ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಕೆಟಿಎಂ ಬೈಕುಗಳ ಮಾರಾಟ ಪ್ರಮಾಣವು ನಾಲ್ಕು ಪಟ್ಟು ಏರಿಕೆಯಾಗಿದೆ.

ಕಂಪನಿಯು ಏಷ್ಯಾ ವಲಯಕ್ಕಾಗಿ ಹೆಚ್ಚಿನ ಗಮನವನ್ನು ಹರಿಸಿ ಹೊಸ ಹೊಸ ವಿನ್ಯಾಸದ ಬೈಕುಗಳನ್ನು ಬಿಡುಗಡೆಗೊಳಿಸುತ್ತಿದೆ. 2022ರ ವೇಳೆಗೆ 4,00,000 ಬೈಕುಗಳ ಮಾರಾಟದ ಗುರಿಯನ್ನಿಟ್ಟುಕೊಂಡಿದೆ. ಇದರಿಂದಾಗಿ ಮಾರಾಟದಲ್ಲಿ ಕವಾಸಕಿ ಬೈಕುಗಳನ್ನು ಹಿಂದಿಕ್ಕಿ ಟಾಪ್ 3 ಬೈಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ.

ಕೆಟಿಎಂ ಕಂಪನಿಯು ಯೂರೋಪಿನಲ್ಲಿ ಈಗಲೂ ಮಾರಾಟದಲ್ಲಿ ಪಿಯಾಜಿಯೊ ಕಂಪನಿಯ ನಂತರದ ಸ್ಥಾನದಲ್ಲಿದೆ. ಕಳೆದ ವರ್ಷ ಬೈಕ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ಸ್ 20 ಮಿಲಿಯನ್ ಬೈಕುಗಳನ್ನು ಮಾರಾಟ ಮಾಡಿ ಮೊದಲನೇ ಸ್ಥಾನದಲ್ಲಿದ್ದರೆ, ಯಮಹಾ ಮೋಟಾರ್ಸ್ 5.4 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿ ಎರಡನೇಯ ಸ್ಥಾನದಲ್ಲಿತ್ತು. ಕೆಟಿಎಂ ಟಾಪ್ ಸ್ಥಾನಕ್ಕೆ ಏರಬೇಕಿದ್ದರೆ ಇನ್ನೂ ತುಂಬಾ ದೂರ ಕ್ರಮಿಸಬೇಕಿದೆ.

ಮಾಲಿನ್ಯ ನಿಯಂತ್ರಣದ ಕಠಿಣ ನಿಯಮಗಳಿಂದಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿರುವುದರಿಂದಾಗಿ ದ್ವಿಚಕ್ರ ವಾಹನದ ಮಾರುಕಟ್ಟೆಯು ಬದಲಾಗುತ್ತಿದೆ. ಪಿಯರರ್‍ರವರು ಕಂಪನಿಯು ಎಲೆಕ್ಟ್ರಿಕ್ ಬೈಕುಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ. ಇದರಿಂದಾಗಿ ಕಂಪನಿಯು ವಿಶ್ವ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
MOST READ: ಐಎಂಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಿಕೆಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರುವ ಕೆಟಿಎಂ ಹಾಗೂ ಬಜಾಜ್ ಆಟೋ ಕಂಪನಿಗಳು ಪವರ್ಡ್ ಟೂ ವ್ಹೀಲರ್ಸ್ (ಪಿಟಿಡಬ್ಲ್ಯು) ಯೋಜನೆಯನ್ನು ಆರಂಭಿಸಿವೆ. ಈ ಯೋಜನೆಯಡಿಯಲ್ಲಿ ಈ ಎರಡೂ ದ್ವಿಚಕ್ರ ವಾಹನ ಕಂಪನಿಗಳು ಪುಣೆಯಲ್ಲಿರುವ ಬಜಾಜ್ ತಯಾರಕಾ ಘಟಕದಲ್ಲಿ 2022ರಿಂದ ಜಂಟಿಯಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಆರಂಭಿಸಲಿವೆ.

ಈ ಯೋಜನೆಯಲ್ಲಿ 48 ವೋಲ್ಟಿನ ಎಲೆಕ್ಟ್ರಿಕ್ ಪ್ಲಾಟ್‍ಫಾರಂ ಇರಲಿದ್ದು, 3 ಕೆಡಬ್ಲ್ಯು(3 ಬಿಹೆಚ್‍ಪಿ)ಯಿಂದ 10 ಕೆಡಬ್ಲ್ಯು(12 ಬಿಹೆಚ್‍ಪಿ)ಯವರೆಗಿನ ಪವರ್ ಔಟ್‍ಪುಟ್ ಉತ್ಪಾದಿಸಲಾಗುವುದು. ಈ ಯೋಜನೆಗಾಗಿ ಈಗಾಗಲೇ ಹೂಡಿಕೆ ಮಾಡಲಾಗಿದೆ. ಈ ಪ್ಲಾಟ್‍ಫಾರಂನಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಮೊಪೆಡ್, ಚಿಕ್ಕ ಮೊಪೆಡ್‍ಗಳನ್ನು ಉತ್ಪಾದಿಸಲಾಗುವುದು. ಬಜಾಜ್ ಹಾಗೂ ಕೆಟಿಎಂ ಕಂಪನಿಗಳು ತಮ್ಮ ಸರಣಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗಾಗಿ ಈ ಪ್ಲಾಟ್‍ಫಾರಂ ಅನ್ನು ಬಳಸಲಿವೆ.
MOST READ: ಲೇ ಮನ್ಸ್ ಸೀರಿಸ್‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಈ ಜಂಟಿ ಯೋಜನೆಯಿಂದಾಗಿ ಎರಡೂ ಕಂಪನಿಗಳೂ ಪ್ರಯೋಜನ ಪಡೆಯಲಿವೆ. ಕೆಟಿಎಂ ಕಂಪನಿಯು ಬಜಾಜ್ ಆಟೋ ಕಂಪನಿಯಿಂದ ಕಡಿಮೆ ವೆಚ್ಚದಲ್ಲಿ ಬೈಕುಗಳನ್ನು ತಯಾರಿಸುವ ಬಗ್ಗೆ ತಿಳಿಯಲಿದ್ದರೆ, ಬಜಾಜ್ ಕಂಪನಿಯು, ಕೆಟಿಎಂ ಕಂಪನಿ ಮೊದಲು ತಯಾರಿಸಿದ್ದ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ಸೆಗ್‍ಮೆಂಟ್ ಬಗ್ಗೆ ತಿಳಿಯಲಿದೆ.

ಬಜಾಜ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅರ್ಬನೈಟ್ ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಸ್ಕೂಟರ್ ಅನ್ನು ಈಗಾಗಲೇ ಸ್ಪಾಟ್ ಟೆಸ್ಟ್ ಮಾಡಲಾಗಿದೆ.
MOST READ: ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಕೆಟಿಎಂ ಕಂಪನಿಯು ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಕೆಟಿಎಂ ಇ-ರೈಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಈ ಬೈಕ್ 18 ಕೆಡಬ್ಲ್ಯು ಪವರ್ ಉತ್ಪಾದಿಸುತ್ತದೆ. ಇದು ಭಾರತದಲ್ಲಿರುವ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಿಸುವುದಕ್ಕಿಂತ ಹೆಚ್ಚಿನ ಪವರ್ ಆಗಿದೆ.