ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಸುಮಾರು 23,000 ಕ್ಕೂ ಹೆಚ್ಚು ಜನರಿಗೆ ಟೋಪಿ ಹಾಕಿರುವ ಐ‍ಎಂ‍ಎ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ದೇಶದಿಂದಲೇ ಪರಾರಿಯಾಗಿದ್ದಾನೆ. ಸದ್ಯಕ್ಕೆ ಅವನು ದುಬೈನಲ್ಲಿ ತಲೆಮರೆಸಿಕೊಂಡಿದ್ದು, ತನ್ನ ವಿರುದ್ಧ ಬೆಂಗಳೂರಿನಲ್ಲಿ ಮೊದಲ ದೂರು ದಾಖಲಾಗುವ ಒಂದು ದಿನ ಮೊದಲು ಅಂದರೆ ಜೂನ್ 8ರಂದು ದೇಶದಿಂದ ಓಡಿಹೋಗಿದ್ದಾನೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ದೂರು ದಾಖಲಾದ ನಂತರ ಆತನು ಮಾತನಾಡಿರುವ ಆಡಿಯೊ ವಾಟ್ಸ್ ಅಪ್‍‍ನಲ್ಲಿ ಹರಿದಾಡುತ್ತಿತ್ತು. ಇದರಿಂದಾಗಿ ಈ ಪ್ರಕರಣದ ಗಂಭೀರತೆ ಹೊರ ಬಂದಿದೆ. ಈ ಆಡಿಯೊದಲ್ಲಿ ಆತನು ಪೊಲೀಸರು ಹಾಗೂ ರಾಜಕಾರಣಿಗಳ ವಿರುದ್ಧ ಲಂಚದ ಆರೋಪ ಹೊರಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಐ ಮಾನಿಟರಿ ಅಡ್ವೈಸ್ (ಐ‍ಎಂ‍ಎ)ನಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‍ಐ‍‍ಟಿ)ನಡೆಸುತ್ತಿದೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಎಸ್‍ಐ‍‍ಟಿ ತಂಡವು ಮನ್ಸೂರ್ ಖಾನ್‍‍ಗೆ ಸೇರಿದ ಎಲ್ಲಾ ಕಚೇರಿಗಳನ್ನು ಮುಚ್ಚಿದ್ದು, ಆತನಿಗೆ ಸೇರಿದ ಎರಡು ಕಾರುಗಳನ್ನು ವಶಕ್ಕೆ ಪಡೆದಿದೆ. ಮನ್ಸೂರ್ ಖಾನ್ ಪ್ರತಿದಿನ ಬಳಸುತ್ತಿದ್ದ ಜಾಗ್ವಾರ್ ಎಕ್ಸ್ ಎಫ್ ಹಾಗೂ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರುಗಳನ್ನು ಎಸ್ಐ‍‍‍ಟಿ ವಶಕ್ಕೆ ಪಡೆದಿದೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ವರದಿಗಳ ಪ್ರಕಾರ, ಮನ್ಸೂರ್ ಖಾನ್ ತನ್ನ ರೇಂಜ್ ರೋವರ್ ಎಸ್‍‍‍ಯು‍‍‍ವಿಯಲ್ಲಿ ಜೂನ್ 8ರಂದು ಏರ್‍‍ಪೋರ್ಟಿಗೆ ತಲುಪಿ, ಅಲ್ಲಿಂದ ದುಬೈಗೆ ಪರಾರಿಯಾಗಿದ್ದಾನೆ. ಅವನ ಡ್ರೈವರ್ ಏರ್‍‍ಪೋರ್ಟ್‍‍ನ ಪಾರ್ಕಿಂಗ್‍‍ನಲ್ಲಿ ಕಾರ್ ನಿಲ್ಲಿಸಿ ತಲೆ ಮರೆಸಿಕೊಂಡಿದ್ದಾನೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಆತನು ಹೊಂದಿದ್ದ ರೇಂಜ್ ರೋವರ್ ಕಾರ್ ಅನ್ನು ಪಾಂಡಿಚೇರಿಯಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಾಂಡಿಚೇರಿಯಲ್ಲಿ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತದೆ. ಆದ ಕಾರಣ ಬಹುತೇಕ ಲಗ್ಷುರಿ ಕಾರುಗಳನ್ನು ಪಾಂಡಿಚೇರಿಯಲ್ಲಿ ರಿಜಿಸ್ಟರ್ ಮಾಡಿಸಲಾಗುತ್ತದೆ. ಮನ್ಸೂರ್ ಖಾನ್ ಬಳಸುತ್ತಿದ್ದ ರೇಂಜ್ ರೋವರ್ ಕಾರಿನಲ್ಲಿ 3.0 ಲೀಟರಿನ ವಿ6 ಎಂಜಿನ್ ಅಳವಡಿಸಲಾಗಿದೆ.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಈ ಎಂಜಿನ್ 255 ಬಿ‍‍ಹೆಚ್‍‍ಪಿ ಹಾಗೂ 600 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಈ ಕಾರು ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಕಾರ್ ಆಗಿದೆ. ಎಸ್‍ಐ‍‍ಟಿ ತಂಡವು, ಮನ್ಸೂರ್ ಖಾನ್‍‍ನ ನೆಚ್ಚಿನ ಕಾರ್ ಎಂದು ಹೇಳಲಾದ ಜಾಗ್ವಾರ್ ಎಕ್ಸ್ ಎಫ್ ಕಾರ್ ಅನ್ನು ಸಹ ವಶಕ್ಕೆ ಪಡೆದಿದೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಈ ಕಾರ್ ಅನ್ನು ಆತನ ಮನೆಯ ಪಾರ್ಕಿಂಗ್‍‍ನಿಂದ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಆತನ ಮನೆಯನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಕಾರನ್ನು ಐ‍ಎಂ‍ಎ ಹಗರಣದ ಪ್ರಮುಖ ಆರೋಪಿಯಾಗಿದ್ದ ಮನ್ಸೂರ್ ಖಾನ್ ಮೂರು ವರ್ಷಗಳ ಹಿಂದೆ ಖರೀದಿಸಿದ್ದ. ಈ ಕಾರು ಲಗ್ಷುರಿ ಸೆಡಾನ್ ಆಗಿದ್ದು, 2.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು 177 ಬಿ‍ಹೆಚ್‍‍ಪಿ ಹಾಗೂ 430 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಈ ಜರ್ಮನ್ ಅಂಬಾಸಿಡರ್‍‍‍ಗೆ ಬಲು ಇಷ್ಟ ನಮ್ಮ ಅಂಬಾಸಿಡರ್ ಕಾರು..!

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಎಸ್‍ಐ‍‍ಟಿ ತಂಡವು ತನಿಖೆಯನ್ನು ತೀವ್ರಗೊಳಿಸಿದ್ದು, ಮನ್ಸೂರ್ ಖಾನ್‍‍ನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಈ ವಾಹನಗಳ ಹೊರತಾಗಿ ಎಸ್‍ಐ‍‍ಟಿ ಇನ್ನಷ್ಟು ಆಸ್ತಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಪೊಲೀಸರು ವಂಚಕರ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ವಿಜಯ್ ಮಲ್ಯರಿಗೆ ಸೇರಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಕಾನೂನು ಭಂಗ ಮಾಡುವವರ ವಾಹನಗಳನ್ನು ವಶಕ್ಕೆ ಪಡೆಯುವುದು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸಲು ವಿಫಲರಾಗುವ ಸಾಮಾನ್ಯ ಜನರ ವಾಹನಗಳನ್ನು ವಶಕ್ಕೆ ಪಡೆದು ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ವಶಕ್ಕೆ ಪಡೆದಿರುವ ಮನ್ಸೂರ್ ಖಾನ್‍ ವಾಹನಗಳನ್ನು ಏನು ಮಾಡಲಾಗುವುದು ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Cop seizes ima scam mansoor khans cars - Read in kannada
Story first published: Friday, June 14, 2019, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X