ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರಾ ಸಂಸ್ಥೆಯು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂದಿನ ತಿಂಗಳಿನಿಂದಲೇ ಹೊಸ ದರ ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ಕಾರುಗಳ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರಿನ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಸಂಸ್ಥೆಯು, ಏಪ್ರಿಲ್ 1 ರಿಂದಲೇ ಹೊಸ ದರ ಪಟ್ಟಿಯಂತೆ ಕಾರು ಬೆಲೆಗಳು ಅನ್ವಯವಾಗಿವೆ ಎಂದಿದೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಮಾಹಿತಿಗಳ ಪ್ರಕಾರ, ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಶೇ.0.5 ನಿಂದ ಶೇ.2.7 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಕಾರುಗಳು ಬೆಲೆಯು ಸರಾಸರಿಯಾಗಿ ಆರಂಭಿಕ ರೂ.5 ಸಾವಿರದಿಂದ ರೂ.73 ಸಾವಿರದಷ್ಟು ದುಬಾರಿಯಾಗುವುದು ನಿಚ್ಚಳವಾಗಿದೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಮಹೀಂದ್ರಾ ಸಂಸ್ಥೆಯು ಸದ್ಯ ಆರಂಭಿಕ ಆವೃತ್ತಿಯಾಗಿ ವೆರಿಟೋ ಸೆಡಾನ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೈ ಎಂಡ್ ಮಾದರಿಯಾಗಿ ಅಲ್ಟುರಾಸ್ ಜಿ4 ಕಾರು ಮಾರಾಟಗೊಳ್ಳುತ್ತಿದೆ. ಹೀಗಾಗಿ ಖರೀದಿ ಲಭ್ಯವಿರುವ ಒಟ್ಟು ಮಹೀಂದ್ರಾ 18 ಕಾರುಗಳ ದರಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗಿದೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ವೆರಿಟೊ, ಇ2ಒ ಪ್ಲಸ್, ಬಲೆರೊ ಪವರ್ ಪ್ಲಸ್, ನೊವೊ ಸ್ಪೋರ್ಟ್, ಇ ವೆರಿಟೋ, ಸುಪ್ರೊ, ಟಿಯುವಿ300 ಪ್ಲಸ್, ಜೈಲೊ, ಕೆಯುವಿ100 ನೆಕ್ಸ್ಟ್, ಮಹೀಂದ್ರಾ ಮರಾಜೊ, ಟಿಯುವಿ 300, ಬಲೆರೊ, ಥಾರ್, ಎಕ್ಸ್‌ಯುವಿ300, ಎಕ್ಸ್‌ಯುವಿ500, ಸ್ಕಾರ್ಪಿಯೋ ಮತ್ತು ಅಲ್ಟುರಾಸ್ ಜಿ4 ಕಾರುಗಳು ಸದ್ಯ ಮಾರಾಟಕ್ಕಿದ್ದು, ಇದರಲ್ಲಿ ಬಹುತೇಕ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿದೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಇದೀಗ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದ್ದು, ಮಹೀಂದ್ರಾ ಜೊತೆಗೆ ಟಾಟಾ ಮೋಟಾರ್ಸ್, ರೆನಾಲ್ಟ್, ಟೊಯೊಟಾ ಸಂಸ್ಥೆಗಳು ಶೇ.1ರಿಂದ ಶೇ.3ರಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ಈಗಾಗಲೇ ಅಧಿಕೃತ ಮಾಹಿತಿ ನೀಡಿವೆ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಕಳೆದ 2 ವರ್ಷದಿಂದ ಕಾರು ಉತ್ಪಾದನೆಗೆ ಬೇಕಿರುವ ಬಿಡಿಭಾಗಗಳ ಬೆಲೆಯಲ್ಲಿ ಸತತ ಏರಿಕೆಯು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಏಪ್ರಿಲ್ 1ರಿಂದಲೇ ಬೆಲೆ ಏರಿಕೆ ಮಾಡಲಿವೆ.

MOST READ: ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಕಳೆದ ಜನವರಿ ಆರಂಭದಲ್ಲೂ ಶೇ.2ರಿಂದ ಶೇ.4ರಷ್ಟು ಬೆಲೆ ಹೆಚ್ಚಳ ಮಾಡಿರುವ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳಕ್ಕೆ ಸಿದ್ದತೆ ನಡೆಸಿದ್ದು, ಕಾರು ಖರೀದಿಯ ಪ್ರಕ್ರಿಯೆಗಳು ಮತ್ತಷ್ಟು ದುಬಾರಿಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ.

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಕೆಲವು ಮಾಹಿತಿಗಳ ಪ್ರಕಾರ, ಟೊಯೊಟಾ ಸಂಸ್ಥೆಯು ಸಹ ಕಾರಿನ ಬೆಲೆಯಲ್ಲಿ ಶೇ. 2ರಿಂದ ಶೇ.3ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 15 ಸಾವಿರ ಹೆಚ್ಚಳವಾಗಲಿದ್ದರೆ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 2.50 ಲಕ್ಷ ಹೆಚ್ಚಳಲಾಗಲಿದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಬೆಲೆ ಏರಿಕೆ ಮಾಡಿದ ಮಹೀಂದ್ರಾ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?

ಒಟ್ಟಿನಲ್ಲಿ ಮಾರ್ಚ್ ನಂತರ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದಲ್ಲಿ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳದ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.

Article Published On: Thursday, March 28, 2019, 18:17 [IST]
English summary
Mahindra To Hike Prices From 1st April By Upto Rs 73,000. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+