ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಹೊಸ ವಾಹನಗಳ ಉತ್ಪಾದನಾ ಗುಣಮಟ್ಟದಲ್ಲಿ ಭಾರೀ ಬದಲಾವಣೆ ತರುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸುತ್ತಿವೆ. ಹೀಗಿದ್ದರೂ ಕೂಡಾ ಮಾರುತಿ ಸುಜಕಿ ಸಂಸ್ಥೆಯು ತನ್ನ ಅಗ್ಗದ ಬೆಲೆಯ ಕಾರುಗಳ ಮಾರಾಟ ಭರಾಟೆಯಲ್ಲಿ ಪ್ರಯಾಣಿಕ ಸುರಕ್ಷತೆಯನ್ನು ಕಡೆಗಣಿಸುತ್ತಿದ್ದು, ನ್ಯೂ ಕಾರ್ ಅಸಿಸ್‌ಮೆಂಟ್ ಪ್ರೋಗ್ರಾಂ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಎರ್ಟಿಗಾ ಕಾರು ಕಳಪೆ ಪ್ರದರ್ಶನ ತೋರಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಹೌದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಪ್ರಾಣಹಾನಿಯನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಹೊಸ ಕಾರುಗಳಲ್ಲಿ ಕೆಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆ ಮಾತ್ರ ತನ್ನ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳನ್ನು ಉನ್ನತೀಕರಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಕಾರಣ, ಗ್ಲೋಬಲ್ ಎನ್‌ಸಿಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಅಂಕಗಳಿಗೆ ಕೇವಲ 3 ಅಂಕಗಳನ್ನು ಮಾತ್ರವೇ ಗಿಟ್ಟಿಸಿಕೊಂಡಿರುವುದು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಅದಕ್ಕಾಗಿಯೇ ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಕ್ರ್ಯಾಶ್ ಟೆಸ್ಟ್‌ಗಳನ್ನು ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಯುರೋ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗಾಗಿ ರೇಟಿಂಗ್ ನೀಡುತ್ತವೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಕಾರು ಮಾದರಿಯಾದ ಎರ್ಟಿಗಾ ಎಂಪಿವಿ ಕಾರು ಕೇವಲ 3 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಮಾತ್ರವೇ ಶಕ್ತವಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಿಯಮದ ಪ್ರಕಾರ 4 ಸ್ಟಾರ್ ರೇಟಿಂಗ್‌ಗಿಂತ ಕಡಿಮೆ ರೇಟಿಂಗ್ ಹೊಂದಿರುವ ಕಾರುಗಳಿಂದ ಪ್ರಯಾಣಿಕರಿಗೆ ಗುಣಮಟ್ಟದ ಸುರಕ್ಷತೆ ಒದಗಿಸಲು ಅಸಾಧ್ಯ. ಹೀಗಿದ್ದರೂ ಕೂಡಾ ಮಾರುತಿ ಸುಜುಕಿಯು ಪ್ರಯಾಣಿಕರ ಸುರಕ್ಷತೆ ಬಗೆಗೆ ಹೆಚ್ಚು ಗಮನಹರಿಸದೇ ಅಗ್ಗದ ಬೆಲೆಯಲ್ಲಿ ಹೆಚ್ಚು ಕಾರು ಮಾರಾಟ ಮಾಡುವ ಒಂದೇ ಉದ್ದೇಶ ಹೊಂದಿರುವುದು ಕ್ರ್ಯಾಶ್ ಟೆಸ್ಟ್ ಫಲಿತಾಂಶದಲ್ಲಿ ಸಾಬೀತಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಇನ್ನು ಮಾರುತಿ ಎರ್ಟಿಗಾ ಕಾರು ಡ್ರೈವರ್ ಮತ್ತು ಸಹಪ್ರಯಾಣಿಕ ವಿಭಾಗದಲ್ಲಿ ಎರಡು ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದರು ಅಪಘಾತದಲ್ಲಿ ಗರಿಷ್ಠ ಮಟ್ಟದಲ್ಲಿ ಸುರಕ್ಷತೆ ಒದಗಿಸುವಂತಹ ವಿನ್ಯಾಸ ಹೊಂದಿಲ್ಲ ಎಂಬುವುದನ್ನು ಗ್ಲೋಬಲ್ ಎನ್‌ಸಿಪಿ ಕ್ರ್ಯಾಶ್ ಟೆಸ್ಟ್‌ ಸಂಸ್ಥೆಯು ಎಚ್ಚರಿಕೆ ನೀಡಿದೆ.

ಮಾರುತಿ ಸುಜುಕಿ ಎರ್ಟಿಗಾ ಸುರಕ್ಷತೆಯ ಕುರಿತು ನಡೆಸಲಾದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಸದ್ಯ ಮಾರುಕಟ್ಟೆಯಲ್ಲಿ ಎರ್ಟಿಗಾ ಎಂಪಿವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.21 ಲಕ್ಷ ಬೆಲೆ ಹೊಂದಿದ್ದು, ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗೆ ಎರ್ಟಿಗಾದಲ್ಲೇ ಎಕ್ಸ್ಎಲ್6 ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ.

MOST READ: ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ತಾಂತ್ರಿಕವಾಗಿ ಎರ್ಟಿಗಾ ಕಾರು ಉತ್ತಮ ವಿನ್ಯಾಸ, ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚಗಳಿಂದಾಗಿ ಗ್ರಾಹಕರನ್ನು ಗಮನಸೆಳೆದರೂ ಕೂಡಾ ಪ್ರಯಾಣಿಕ ಸುರಕ್ಷಾ ವಿಚಾರಕ್ಕೆ ಬಂದಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದು ಜಾಗತಿಕವಾಗಿ ಮುಖಭಂಗ ಅನುಭವಿಸುವಂತಾಗಿದೆ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ಕ್ರ್ಯಾಶ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾರುತಿ ಎರ್ಟಿಗಾ ಖರೀದಿಗೆ ಯೋಗ್ಯವೇ?

ಇನ್ನು ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರಲಿದ್ದು, ಪ್ರಯಾಣಿಕ ಸುರಕ್ಷತೆ ಬಗೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಮತ್ತಷ್ಟು ಗಮನಹರಿಸಬೇಕಿದೆ. ಜೊತೆಗೆ ಬಿಎಸ್-6 ನಿಯಮದಿಂದಾಗಿ ಎಂಜಿನ್ ವಿಭಾಗದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಪರಿಣಾಮಕಾರಿಯಾಗಿ ಮಾಲಿನ್ಯ ನಿಯಂತ್ರಣಕ್ಕೆ ಇದು ಸಾಕಷ್ಟು ಸಹಕಾರಿಯಾಗಲಿದೆ.

Most Read Articles

Kannada
English summary
Maruti Ertiga Scores 3 Stars In Global NCAP Crash Test. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X