ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಮಾರುತಿ ಸುಜುಕಿ ಕಂಪನಿಯು ತಿಂಗಳ ಹಿಂದೆ ಎಸ್‍-ಪ್ರೆಸ್ಸೊ ಮಿನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಭಾರತದ ಈ ಮಿನಿ ಎಸ್‍ಯುವಿಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಜನರಿಗಾಗಿ ಕೈಗೆಟಕುವ ದರದಲ್ಲಿ ಈ ಮಿನಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ತಮ್ಮ ಗ್ರಾಹಕರಿಗಾಗಿ ಕಸ್ಟಮೈಸ್ ಆಯ್ಕೆಯನ್ನು ನೀಡುತ್ತದೆ. ಎಸ್‍-ಪ್ರೆಸ್ಸೊ ಮಿನಿ ಎಸ್‍‍ಯುವಿಯನ್ನು ಕಸ್ಟಮೈಸ್ ಮಾಡಲಾದ ವೀಡಿಯೋಂದನ್ನು ಬಹಿರಂಗಪಡಿಸಲಾಗಿದೆ. ಈ ವೀಡಿಯೋವನ್ನು ಕಂಪನಿಯು ತಮ್ಮ ಯುಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍‍ಲೋಡ್ ಮಾಡಿದೆ.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಈ ಎಸ್-ಪ್ರೆಸ್ಸೊದ ಇಂಟಿರಿಯರ್‍‍ನಲ್ಲಿ ಏರ್ ವೆಂಟ್ಸ್ ಮತ್ತು ಸ್ಪೀಡೋಮೀಟರ್ ಮತ್ತು ಇನ್ಫೋಟೇನ್‍‍ಮೆಂಟ್ ಸಿಸ್ಟಂ ಸುತ್ತಲೂ ಕೆಂಪು ಬಣ್ಣವನ್ನು ನೀಡಲಾಗಿದೆ. ಸಾಮಾನ್ಯವಾಗಿ ಆ ಭಾಗ ಸಿಲ್ವರ್ ಬಣ್ಣದಲ್ಲಿರುತ್ತದೆ. ಅದನ್ನು ಬದಲಾಯಿಸಿ ಕೆಂಪು ಬಣ್ಣವನ್ನು ನೀಡಲಾಗಿದೆ.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಇನ್ನೂ ಇಂಟಿರಿಯರ್‍‍ಯಲ್ಲಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕಾರಿನ ಹೊರ ಭಾಗದಲ್ಲಿ ಮುಖ್ಯ ಬದಲಾವಣೆ ಎಂದರೆ ಬ್ಲ್ಯಾಕ್ ರೂಫ್ ಆಗಿದೆ. ರೂಫ್ ಜೊತೆಯಲ್ಲಿ ಎ, ಬಿ ಮತ್ತು ಸಿ ಪಿಲ್ಲರ್‍‍ಗಳು ಕೂಡ ಬ್ಲ್ಯಾಕ್ ಬಣ್ಣವನ್ನು ಹೊಂದಿವೆ.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಎಸ್-ಪ್ರೆಸ್ಸೊ ಬ್ಲ್ಯಾಕ್ ಬಣ್ಣದೊಂದಿಗೆ ರೆಡ್ ಬಣ್ಣವನ್ನು ಹೊಂದಿದೆ. ಎಸ್-ಪ್ರೆಸ್ಸೊ ಈಗ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಮತ್ತು ಸೈಡ್ ಕ್ಲಾಡಿಂಗ್‍‍ನಲ್ಲಿ ಸಿಲ್ವರ್ ಸ್ಟ್ರಿಪ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಫ್ರಂಟ್ ಗ್ರಿಲ್‍‍ನಲ್ಲಿ ಸಿಲ್ವಿರ್ ಇನ್ಸರ್ಟ್ ಮತ್ತು ಬ್ಲ್ಯಾಕ್ ಸ್ಪಾಯ್ಲರ್ ಅನ್ನು ಅಳವಡಿಸಲಾಗಿದೆ.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಇನ್ನೂ ಬಂಪರ್‍‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ಹೊಂದಿದೆ. ಎಸ್-ಪ್ರೆಸ್ಸೊ ಕಾರಿನಲ್ಲಿ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್ ಅನ್ನು ಹೊಂದಿದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಸಾಮಾನ್ಯ ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್‍‍‍ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟ್ಯಾಜೊ ಮೀಟರ್, ಇನ್ಸ್ ಟ್ರೂಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಇನ್ನೂ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರೇರ್ ವೀವ್ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್ ಸಹ ಹೊಂದಿದ್ದು, ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಡ್ಯುಯಲ್ ಟೋನ್‍ನಲ್ಲಿ ಮಿಂಚುತ್ತಿರುವ ಎಸ್-ಪ್ರೆಸ್ಸೊ ವೀಡಿಯೋ ಬಹಿರಂಗ

ಎಸ್-ಪ್ರೆಸೊನಲ್ಲಿ ಕೀ ಲೆಸ್ ಎಂಟ್ರಿ, ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ. ಎಸ್‍‍ಯು‍ವಿ ಡ್ಯುಯಲ್ ಟೋನ್ ಬಣ್ಣದಲ್ಲಿ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇದರ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಎಸ್-ಪ್ರೆಸ್ಸೊ ಡೀಲರ್‍‍ಗಳು ಪ್ರಯ್ನತಿಸುತ್ತಿದ್ದಾರೆ.

Image Courtesy: BMC HD Videos/YouTube

Most Read Articles

Kannada
English summary
Maruti S-Presso Dual Tone - Read in Kannada
Story first published: Saturday, December 28, 2019, 15:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X