ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಎಸ್-ಪ್ರೆಸ್ಸೊ
ಮಾರುತಿ ಸುಜುಕಿ ಕಂಪನಿಯು ಎಕ್ಸ್ ಎಲ್6 ಪ್ರೀಮಿಯಂ ಎಂಯುವಿಯನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಎಂಯುವಿ ಎರ್ಟಿಗಾ ಕಾರಿಗಿಂತ ಮೇಲಿನ ಸರಣಿಯಲ್ಲಿರಲಿದೆ. ಇದರ ಜೊತೆಗೆ ಭಾರತದ ಅಗ್ರಗಣ್ಯ ಕಾರು ತಯಾರಕ ಕಂಪನಿಯು ಹೊಸ ಎಸ್ ಪ್ರೆಸ್ಸೊ ಹ್ಯಾಚ್‍ಬ್ಯಾಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಈ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾದ ಫ್ಯೂಚರ್ ಎಸ್ ಕಾನ್ಸೆಪ್ಟ್ ನ ಉತ್ಪಾದನಾ ಮಾದರಿಯಾಗಿದೆ. ಉತ್ಪಾದನಾ ಹಂತದಲ್ಲಿರುವ ವಾಹನವನ್ನು ಹಲವಾರು ಬಾರಿ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಬಾರಿ ವಿದಿತ್ ಜೈನ್ ಎಂಬುವವರು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ವಾಹನದ ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಹೊಸ ಎಸ್-ಪ್ರೆಸ್ಸೊವನ್ನು ದೇಶಿಯ ಮಾರುಕಟ್ಟೆಯಲ್ಲಿ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು. ಇದು ಎಸ್‌ಯುವಿಯಿಂದ ಪ್ರೇರಿತವಾದ ವಿನ್ಯಾಸವನ್ನು ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ಹಾಗೂ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ವಾಹನಗಳಿಗೆ ಪೈಪೋಟಿ ನೀಡಲಿದೆ.

ಎಸ್-ಪ್ರೆಸ್ಸೊವನ್ನು ಕಂಪನಿಯ ಅರೆನಾ ಡೀಲರ್‍ಗಳ ಮೂಲಕ ಮಾರಾಟ ಮಾಡಲಾಗುವುದು. ಎಸ್-ಪ್ರೆಸ್ಸೊ ವ್ಯಾಗನ್ಆರ್‍ಗಿಂತ ಮೇಲಿನ ಸರಣಿಯಲ್ಲಿರಲಿದೆ. ಎಸ್-ಪ್ರೆಸ್ಸೊ ಕಾರು ಸುಜುಕಿಯ ಭಾರತೀಯ ಘಟಕವು ಅಭಿವೃದ್ಧಿಪಡಿಸಿದ ಎರಡನೇ ವಾಹನವಾಗಿದೆ.

ಭಾರತೀಯರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಈ ವಾಹನವು ನೀಡುತ್ತದೆ. ಈ ವಾಹನವು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಈ ವಾಹನವನ್ನು ತಯಾರಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ವಿಟಾರಾ ಬ್ರಿಝಾ, ಸುಜುಕಿಯ ಭಾರತೀಯ ಘಟಕವು ಅಭಿವೃದ್ಧಿಪಡಿಸಿದ ಮೊದಲ ವಾಹನವಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ವಾಹನವನ್ನು ಹೆಚ್ಚಿನ ಪ್ರಮಾಣದಲ್ಲಿ ಮರೆಮಾಚಲಾಗಿದೆ.

ಹೊಸ ಎಸ್-ಪ್ರೆಸ್ಸೊ ಆಧುನಿಕ ವಿನ್ಯಾಸವನ್ನು ಹೊಂದಿದ್ದು, ವಾಹನದ ಮುಂಭಾಗದ ತುದಿಯು ಎಲ್ಇಡಿ ಡಿಆರ್‍ಎಲ್‍ಗಳೊಂದಿಗೆ ಕೆಲವು ಆಧುನಿಕ ಬಿಟ್‍ಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂಭಾಗದಲ್ಲಿರುವ, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಆಧುನಿಕ ಡಿಸೈನ್ ಬಿಟ್‌ಗಳನ್ನು ಹೊಂದಿವೆ.

ಹೊಸ ಎಸ್-ಪ್ರೆಸ್ಸೊದ ಇಂಟಿರಿಯರ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ, ಇಂಟಿರಿಯರ್‍ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಹಾಗೂ ಹೆಚ್ಚಿನ ಫೀಚರ್‍ಗಳಿರುವ ಸಾಧ್ಯತೆಗಳಿವೆ.

ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಎಸ್-ಪ್ರೆಸ್ಸೊ ವಾಹನದ ಮುಂಭಾಗದಲ್ಲಿ ಏರ್‌ಬ್ಯಾಗ್‌ಗಳು, ಎಬಿಎಸ್ ಹಾಗೂ ಇಬಿಡಿ, ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಸೇರಿದಂತೆ ಇನ್ನೂ ಹಲವಾರು ಫೀಚರ್‍ಗಳಿರಲಿವೆ.

ಮಾರುತಿ ಸುಜುಕಿಯು ಎಸ್-ಪ್ರೆಸ್ಸೊ ವಾಹನವನ್ನು ಪೆಟ್ರೋಲ್ ಎಂಜಿನ್‍ನಲ್ಲಿ ಮಾತ್ರ ಬಿಡುಗಡೆಗೊಳಿಸಲಿದೆ. ಹೊಸ ವ್ಯಾಗನ್ಆರ್ ಸೇರಿದಂತೆ ಮಾರುತಿ ಸುಜುಕಿಯ ವಿವಿಧ ವಾಹನಗಳಲ್ಲಿ ಅಳವಡಿಸಲಾಗಿರುವ 1.2-ಲೀಟರ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.
MOST READ: ಉಚಿತ ತರಬೇತಿಯೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ ಟೊಯೊಟಾ

ಶೀಘ್ರದಲ್ಲಿಯೇ ಬಿಎಸ್ 6 ನಿಯಮಗಳು ಜಾರಿಯಾಗಲಿರುವುದರಿಂದ, ಮಾರುತಿ ಸುಜುಕಿ ಕಂಪನಿಯು ಬಿಎಸ್ 6 ಎಂಜಿನ್ ಹೊಂದಿರುವ ವಾಹನವನ್ನು ಮಾತ್ರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಎಂಜಿನ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಹೊಂದಿರಲಿದೆ. ಆಟೋಮ್ಯಾಟಿಕ್ ಮಾದರಿಗಳು, ಆಟೋಮ್ಯಾಟೇಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಸಿಸ್ಟಂ (ಎಎಂಟಿ) ಪಡೆಯಲಿವೆ.
MOST READ: ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೊಸ ಹಾರ್ಟ್ ಟೆಕ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವುದರಿಂದ, ವಾಹನವು ಹೆಚ್ಚಿನ ತೂಕವನ್ನು ಹೊಂದುವುದಿಲ್ಲ. ಇದರಿಂದಾಗಿ ಇಂಧನದ ದಕ್ಷತೆಯು ಹೆಚ್ಚಲಿದ್ದು, ಪಿಕ್ ಅಪ್ ಸಹ ಉತ್ತಮವಾಗಲಿದೆ. ಮಾರುತಿ ಮುಂದಿನ ವರ್ಷ ವಿಟಾರಾದಂತಹ ಹೊಸ ವಾಹನ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಯೋಜಿಸುತ್ತಿದೆ.
Source: Cartoq


Click it and Unblock the Notifications