ಉಚಿತ ತರಬೇತಿಯೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ ಟೊಯೊಟಾ

ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯಿಂದ 10 ಬ್ಯಾಚ್‌ಗಳಿಗೆ ತರಬೇತಿಯನ್ನು ನೀಡಿರುವುದಾಗಿ ಟೊಯೊಟಾ ಕಂಪನಿಯು ಪ್ರಕಟಿಸಿದೆ. ಟಿಟಿಟಿಐನಲ್ಲಿ ಮೂರು ವರ್ಷದ ತರಬೇತಿ ಪೂರ್ಣಗೊಳಿಸಿದ 42 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಆಟೋಮೊಬೈಲ್ ಉದ್ಯಮದಲ್ಲಿ ಉದ್ಯೋಗ ಪಡೆಯುವ ಕೌಶಲ್ಯಗಳನ್ನು ಈ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಆಟೋಮೊಬೈಲ್ ಉದ್ಯಮವು ಭಾರತದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆಯನ್ನು ನೀಡುತ್ತದೆ. ಈ ಉದ್ಯಮಕ್ಕೆ ಅವಶ್ಯಕವಾಗಿರುವುದು ತರಬೇತಿ ಪಡೆದ ಉದ್ಯೋಗಿಗಳು. ಭಾರತದ ಯುವ ಜನತೆ ಈ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ವಾಹನ ಉದ್ಯಮದಲ್ಲಿ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ಅನೇಕ ಮಾರ್ಗಗಳಿವೆ. ದೇಶಾದ್ಯಂತ ನೂರಕ್ಕೂ ಹೆಚ್ಚು ಕಾಲೇಜುಗಳು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೊಮಾಗಳನ್ನು ನೀಡುತ್ತವೆ. ಆದರೆ, ಪ್ರತಿಯೊಬ್ಬರಿಗೂ ಈ ಕೋರ್ಸ್‌ಗಳಿಗೆ ಸೇರಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಈ ಪದವಿಗಳನ್ನು ಪಡೆಯಲು ಸಾಧ್ಯವಿಲ್ಲ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಟೊಯೊಟಾ ಕಂಪನಿಯು ಕೈಗೊಂಡಿರುವ ಸಾಮಾಜಿಕ ಜವಾಬ್ದಾರಿಗಳಿಗೆ ಧನ್ಯವಾದಗಳನ್ನು ಹೇಳಲೇಬೇಕು. ಈ ನಿಟ್ಟಿನಲ್ಲಿ ಭಾರತದಲ್ಲಿ ಕಂಪನಿಯು ಕೈಗೊಂಡಿರುವ ಪ್ರಮುಖ ಯೋಜನೆಯೆಂದರೆ ಟಿಟಿಟಿಐ ಸ್ಥಾಪನೆ. ಟೊಯೊಟಾ ಕಂಪನಿಯು, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ(ಟಿಟಿಟಿಐ)ಯನ್ನು ಹೊಂದಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಈ ತಾಂತ್ರಿಕ ಸಂಸ್ಥೆಯನ್ನು 2007ರಲ್ಲಿ ಸ್ಥಾಪಿಸಲಾಯಿತು. ಆರ್ಥಿಕವಾಗಿ ದುರ್ಬಲರಾಗಿರುವವರ ಅನುಕೂಲಕ್ಕಾಗಿ ಹಾಗೂ ಆಟೋಮೊಬೈಲ್ ಉದ್ಯಮದಲ್ಲಿ ಬೇಕಾಗಿರುವ ಕೌಶಲ್ಯಗಳನ್ನು ನೀಡಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಯೋಜನೆಯು ಅವರಿಗೆ ಆಟೋ‍‍ಮೊಬೈಲ್ ಉದ್ಯಮದಲ್ಲಿ ಉದ್ಯೋಗವನ್ನು ನೀಡುತ್ತದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಟೊಯೊಟಾ ಕಂಪನಿಯು ಇತ್ತೀಚಿಗೆ ಟಿಟಿಟಿಐನ 10 ಬ್ಯಾಚ್‍‍ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಮಾರಂಭವನ್ನು ಆಯೋಜಿಸಿತ್ತು. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆವರಣದೊಳಗಿರುವ ನ್ಯಾಷನಲ್ ಮ್ಯಾನ್‍‍ಪವರ್ ಎಕ್ಸೆಲೆನ್ಸ್ ಸೆಂಟರ್‍‍ನಲ್ಲಿ ನಡೆದ ಸಮಾರಂಭದಲ್ಲಿ 42 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಮೂರು ವರ್ಷದ ಟಿಟಿಟಿಐ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ವಿಜ್ಞಾನ ಹಾಗೂ ಗಣಿತದಲ್ಲಿ ಕನಿಷ್ಠ 45% ಹಾಗೂ ಒಟ್ಟಾರೆ 50%ನೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ವಿದ್ಯಾರ್ಥಿಗಳನ್ನು ಕರ್ನಾಟಕದಾದ್ಯಂತವಿರುವ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗಳು, ಸಂದರ್ಶನಗಳು ಹಾಗೂ ಕುಟುಂಬ ಹಿನ್ನೆಲೆಯನ್ನು ಪರಿಶೀಲಿಸಿದ ನಂತರ ಆಯ್ಕೆ ಮಾಡಲಾಗುವುದು.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಆಯ್ಕೆಯಾದ ವಿದ್ಯಾರ್ಥಿಗಳನ್ನು ಟಿಟಿಟಿಐ ಕಾರ್ಯಕ್ರಮಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ವಸತಿ, ಪುಸ್ತಕಗಳು, ಲ್ಯಾಬ್ ಉಪಕರಣಗಳು, ಯೂನಿಫಾರಂ, ಶೂ ಸೇರಿದಂತೆ ಅವಶ್ಯಕತೆಯಿರುವ ಎಲ್ಲಾ ಸೌಲಭ್ಯಗಳನ್ನು ಟೊಯೊಟಾ ಕಂಪನಿಯೇ ಪೂರೈಸುತ್ತದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಟೊಯೊಟಾ ಟಿಟಿಟಿಐ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದೆ. ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳು ವರ್ಷಕ್ಕೆ ರೂ.9,000ಗಳ ಫೆಲೋಶಿಪ್ ಪಡೆಯುತ್ತಾರೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಟೊಯೊಟಾ ಕಂಪನಿಯು ಈ ತರಬೇತಿಯನ್ನು ಉಚಿತವಾಗಿ ನೀಡುತ್ತದೆ. ಇದರಿಂದಾಗಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಜೊತೆಗೆ ಆಟೋಮೊಬೈಲ್ ಉದ್ಯಮವು ನುರಿತ ಉದ್ಯೋಗಿಗಳನ್ನು ಪಡೆಯುತ್ತದೆ. ಟಿಟಿಟಿಐ 2016-2019ನ 10 ನೇ ಬ್ಯಾಚ್‍‍ನಲ್ಲಿ ಬಡ ಕುಟುಂಬಕ್ಕೆ ಸೇರಿದ 15 ರಿಂದ 17 ವರ್ಷದೊಳಗಿನ 42 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಇವರೆಲ್ಲರಿಗೂ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹಾಗೂ ಟೊಯೊಟಾ ಪೂರೈಕೆದಾರರಲ್ಲಿ ಕೆಲಸ ನೀಡಲಾಗಿದೆ. ಟಿಟಿಟಿಐ ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಪಟ್ಟ ತರಬೇತಿಯನ್ನು ಮಾತ್ರ ನೀಡುವುದಿಲ್ಲ. ಅದರ ಜೊತೆಗೆ ಜೀವನ ಕೌಶಲ್ಯ, ಸಾಂಸ್ಕೃತಿಕ ಮೌಲ್ಯ, ಉದ್ಯೋಗ ಕೌಶಲ್ಯ ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುತ್ತದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಟೊಯೊಟಾ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಟ್ಸುನೋರಿ ಕೋಮಿರವರು ಮಾತನಾಡಿ, ಸುರಕ್ಷಿತವಾದ ಹಾಗೂ ಪರಿಸರ ಸ್ನೇಹಿಯಾದ ಕಾರುಗಳನ್ನು ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಭಾರತದಲ್ಲಿ ನಮಗೆ ಹೆಚ್ಚಿನ ಪಾತ್ರವಿದೆ ಎಂದು ಟೊಯೊಟಾ ಬಲವಾಗಿ ನಂಬಿದೆ. ಇದರಿಂದಾಗಿ ನಮ್ಮ ವ್ಯವಹಾರವನ್ನು ಮೀರಿ ಪ್ರತಿಭೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ನಮ್ಮ ಬದ್ಧತೆಗೆ ಅನುಗುಣವಾಗಿ, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತರಬೇತಿಯನ್ನು ನೀಡುತ್ತಾ ಬಂದಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಪಠ್ಯದ ಮೂಲಕ ಗುಣಮಟ್ಟದ ಪ್ರತಿಭೆಯನ್ನು ರಚಿಸಿ, ಪೋಷಿಸುವುದು ನಮ್ಮ ಉದ್ದೇಶವಾಗಿದೆ. ಈ ಯೋಜನೆಯು ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಜೀವನ ಪಾಠವನ್ನು ಕಲಿಸುತ್ತದೆ. ನಮ್ಮ ಟಿಟಿಟಿಐನಲ್ಲಿ ತರಬೇತಿ ಪಡೆದವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ತೋರಿದಾಗ ಮತ್ತು ವರ್ಲ್ಡ್ ಸ್ಕಿಲ್ ಸ್ಪರ್ಧೆಯಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದಾಗ ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುವ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಟಿಟಿಟಿಐ ಇದುವರೆಗೆ 573 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಹನ ತಯಾರಿಕೆಯ ಬಗ್ಗೆ ತರಬೇತಿ ನೀಡಿದೆ. ಇವರುಗಳಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಹಾಗೂ ಟೊಯೊಟಾ ಗ್ರೂಪ್ ಕಂಪೆನಿಗಳಲ್ಲಿ ಕೆಲಸ ನೀಡಲಾಗಿದೆ.

ಕನ್ನಡಿಗರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಟೊಯೊಟಾ

ಅನೇಕರು ತಮ್ಮ ಕೌಶಲ್ಯಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ. ಟಿಟಿಟಿಐನ ಹಳೆಯ ವಿದ್ಯಾರ್ಥಿಗಳು ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಹಲವಾರು ವಿಶ್ವ ಕೌಶಲ್ಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ, ಮೂರು ಟಿಟಿಟಿಐ ಹಳೆಯ ವಿದ್ಯಾರ್ಥಿಗಳು ರಷ್ಯಾದ ಕಜಾನ್‌ನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಯೋಜನೆಯನ್ನು ಹಮ್ಮಿಕೊಂಡಿದ್ದ ಟೊಯೊಟಾ ಕಂಪನಿಗೆ ಅಭಿನಂದನೆಗಳು. ನೀವೂ ಸಹ ಟಿಟಿಟಿ‍ಐನಲ್ಲಿ ತರಬೇತಿ ಪಡೆಯಿರಿ.

Most Read Articles

Kannada
Read more on ಟೊಯೊಟಾ toyota
English summary
TTTI Celebrates Free-Of-Cost Training In Auto Production For 10 Batches & Over 573 Students - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X