ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಈ ವರ್ಷದ ಆರಂಭದಲ್ಲಿ ಜರ್ಮನ್ ಮೂಲದ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಎಂಬಕ್ಸ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅನಾವರಣಗೊಳಿಸಿತ್ತು. ಎಕನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ, ಈ ಸಿಸ್ಟಂಗಳಲ್ಲಿ ಈಗ ಗೆಸ್ಚರ್ ಕಂಟ್ರೋಲ್‍‍ಗಳನ್ನು ಅಳವಡಿಸಲಾಗಿದೆ.

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಕಂಪನಿಯು ಈ ಗೆಸ್ಚರ್ ಕಂಟ್ರೋಲ್‍‍ಗಳನ್ನು, ತನ್ನ ಬ್ರಾಂಡಿನಲ್ಲಿ ಹೆಚ್ಚು ಮಾರಾಟವಾಗುವ ಜಿ‍ಎಲ್‍ಇ ಎಸ್‍‍ಯು‍‍ವಿ ಹಾಗೂ ಸಿ‍ಎಲ್‍ಎ ಕೂಪೆ ಕಾರುಗಳಲ್ಲಿ ಅಳವಡಿಸಲಿದೆ. ಈ ಗೆಸ್ಚರ್‍‍ಗಳನ್ನು ನಮ್ಮ ಬೆಂಗಳೂರಿನಲ್ಲಿರುವ ಮರ್ಸಿಡಿಸ್ ಬೆಂಝ್‍‍ನ ಆರ್ ಅಂಡ್ ಡಿ ಇಂಡಿಯಾ(ಎಂ‍‍ಬಿ‍ಆರ್‍‍ಡಿ‍ಐ) ಕೇಂದ್ರದಲ್ಲಿ ಸಂಶೋಧಿಸಿ, ಅಭಿವೃದ್ಧಿಪಡಿಸಿ, ಪರೀಕ್ಷಿಸಲಾಗಿದೆ. ಈ ಹೊಸ ಸಿಸ್ಟಂ ಅನ್ನು 2019ರಲ್ಲಿ ತಯಾರಿಸಲಾದ ಈ ಎರಡೂ ಮಾದರಿಯ ಕಾರುಗಳಲ್ಲಿ ಅಳವಡಿಸಲಾಗುವುದು.

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಚಾಲಕನು ತನ್ನ ಕೈಗಳನ್ನು ಇನ್ಫೋಟೇನ್‍‍ಮೆಂಟ್ ಸೆಂಟರ್, ಡ್ಯಾಶ್‍‍ಬೋರ್ಡ್ ಅಥವಾ ಪ್ಯಾಸೆಂಜರ್ ಕಡೆಗೆ ಕೈ ಚಾಚಿದಾಗ ಈ ಗೆಸ್ಚರ್ ಕಂಟ್ರೋಲ್‍‍ನ ಅನುಭವವನ್ನು ಪಡೆಯಬಹುದು. ಗೆಸ್ಚರ್ ಕಂಟ್ರೋಲ್ ಸೌಲಭ್ಯದಿಂದಾಗಿ ಕೆಲವೊಂದು ಫೀಚರ್‍‍ಗಳನ್ನು ಆಕ್ಟಿವೇಟ್ ಮಾಡಬಹುದಾಗಿದೆ.

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಚಾಲಕನು ತನ್ನ ಕೈಗಳನ್ನು ಇನ್ಫೋಟೇನ್‍‍ಮೆಂಟ್ ಸಿಸ್ಟಂ ಬಳಿ ತಂದಾಗ ಮೀಡಿಯಾ ಚಾಲನೆಗೊಳ್ಳಲಿದೆ. ಕೈಗಳನ್ನು ಗ್ಲವ್ ಬಾಕ್ಸ್ ನತ್ತ ಚಾಚಿದಾಗ ಪ್ಯಾಸೆಂಜರ್ ಬಳಿಯ ಲ್ಯಾಂಪ್‍‍ಗಳು ಆಕ್ಟಿವೇಟ್‍‍ಗೊಳ್ಳಲಿವೆ.

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಸೆಂಟರ್ ಕಂಸೊಲ್ ಬಳಿ ಕೈಗಳನ್ನು ವಿ ಶೇಪಿನಲ್ಲಿ ಹಿಡಿದಾಗ, ಪಡಲ್ ಲ್ಯಾಂಪ್ ಕಂಟ್ರೋಲ್ ಹಾಗೂ ನ್ಯಾವಿಗೇಟ್ ಮೀ ಟು ಹೋಂ ಫಂಕ್ಷನ್‍‍ಗಳು ಚಾಲನೆಗೊಳ್ಳುತ್ತವೆ. ಹ್ಯಾಂಡ್ ಗೆಸ್ಚರ್ ಅನ್ನು ಬಳಸಿ ಸೀಟ್ ಮಸಾಜ್ ಫಂಕ್ಷನ್ ಅನ್ನು ಆಕ್ಟಿವೇಟ್ ಮಾಡಬಹುದು. ಕಂಸೊಲ್‍‍ನ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಕಾರಿನ ಚಲನವಲನಗಳನ್ನು ಸೆರೆಹಿಡಿಯುತ್ತದೆ. ಈ ಗೆಸ್ಚರ್ ಕಂಟ್ರೋಲ್ ಸಿಸ್ಟಂ ಚಾಲಕನ ಕೈಗಳನ್ನು ಹಾಗೂ ಪ್ರಯಾಣಿಕರ ಕೈಗಳನ್ನು ಗುರುತಿಸಬಲ್ಲದು.

MOST READ: ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಚಾಲಕ ಹಾಗೂ ಪ್ಯಾಸೆಂಜರ್‍‍ಗಳಿಗೆ ಪ್ರತ್ಯೇಕವಾಗಿ ಫೇವರಿಟ್ ಫಂಕ್ಷನ್‍‍ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಆನ್ ಬೋರ್ಡ್ ಹಾರ್ಡ್‍‍ವೇರಿನಲ್ಲಿರುವ ಡಿವೈಸ್ ತನ್ನದೇ ಆದ ಸೂತ್ರಗಳನ್ನು ಬಳಸಿ ಗೆಸ್ಚರ್‍‍ಗಳನ್ನು ಡಿಕೋಡ್ ಮಾಡುತ್ತದೆ.

MOST READ: ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಗಮನಿಸಬೇಕಾದ ಸಂಗತಿಯೆಂದರೆ, ಮರ್ಸಿಡಿಸ್ ಬೆಂಝ್ ಸೀಟ್ ಮಸಾಜ್ ಫಂಕ್ಷನ್‍‍ಗಳಿಗಾಗಿಯೂ ಗೆಸ್ಚರ್ ಕಂಟ್ರೋಲ್ ಅಳವಡಿಸಿದ್ದು, ಇದನ್ನು ಗೆಸ್ಚರ್‍‍ನಿಂದ ಆಕ್ಟಿವೇಟ್ ಮಾಡಬಹುದಾಗಿದೆ. ಇದರಲ್ಲಿರುವ ಆನ್‍‍ಬೋರ್ಡ್ ಕಂಪ್ಯೂಟರ್ ಆಟೋಮ್ಯಾಟಿಕ್ ಆಗಿ ಯಾವ ಸೀಟುಗಳಿಗೆ ಮಸಾಜ್ ಸಿಸ್ಟಂ ಬೇಕು ಎಂದು ತಿಳಿದು ಆಕ್ಟಿವೇಟ್ ಮಾಡಲಿದೆ.

MOST READ: ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಹೊಸತನದ ಫೀಚರ್‍‍ಗಳನ್ನು ಅಳವಡಿಸಿದ ಮರ್ಸಿಡಿಸ್ ಬೆಂಝ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕನೆಕ್ಟಿವಿಟಿ ಮಾತ್ರ ಸಾಲದು ಎಂಬ ಅಭಿಪ್ರಾಯ ಹೊಂದಿರುವ ಬಹುತೇಕ ಕಂಪನಿಗಳು ಗೆಸ್ಚರ್ ಕಂಟ್ರೋಲ್‍‍ಗಳನ್ನು ಅಳವಡಿಸುತ್ತಿವೆ. ಇದರ ಬದಲು ವಾಯ್ಸ್ ಕಂಟ್ರೋಲ್‍‍ಗಳನ್ನು ಅಳವಡಿಸಬಹುದಿತ್ತು. ಆದರೆ ಭಾರತೀಯರು ಕಾರುಗಳಲ್ಲಿ ಓಡಾಡುವಾಗ ಹೆಚ್ಚಾಗಿ ಮಾತನಾಡುತ್ತಲೇ ಇರುತ್ತಾರೆ. ಇದರಿಂದಾಗಿ ಕಾರುಗಳಲ್ಲಿರುವ ವಾಯ್ಸ್ ಕಂಟ್ರೋಲ್‍ನ ಸಿಸ್ಟಂ ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಆದ ಕಾರಣ ವಾಯ್ಸ್ ಕಂಟ್ರೋಲ್‍‍ನ ಬದಲಿಗೆ ಗೆಸ್ಚರ್ ಕಂಟ್ರೋಲ್‍‍ಗಳನ್ನು ಅಳವಡಿಸಿದೆ. ಈ ಸಿಸ್ಟಂ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡೋಣ.

Most Read Articles

Kannada
English summary
Mercedes Adds Made-In-India Gesture Control — Featured In 2019 GLE And CLA Coupe - Read in kannada
Story first published: Saturday, June 15, 2019, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X