ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಎಂಜಿ ಮೋಟಾರ್ ಸಂಸ್ಥೆಯು ಹೆಕ್ಟರ್ ಬಿಡುಗಡೆಯ ಯಶಸ್ವಿ ನಂತರ ಮತ್ತೊಂದು ಆಕರ್ಷಕ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಅತ್ಯತ್ತಮ ಬೆಲೆಗಳಲ್ಲಿ ಅತಿಹೆಚ್ಚು ಮೈಲೇಜ್ ನೀಡಬಲ್ಲ ಇಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ ಇಜೆಡ್ಎಸ್ ಕಾರನ್ನು ಸದ್ಯ ರೋಡ್ ಟೆಸ್ಟಿಂಗ್‌ ನಡೆಸಲಾಗುತ್ತಿದ್ದು, ಎಸ್‌ಯುವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಭಾರತದಲ್ಲಿ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಈಗಾಗಲೇ ಯುರೋಪಿನ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, ಭಾರತೀಯ ಬೆಲೆಗಳಲ್ಲಿ ರೂ.18.36 ಲಕ್ಷದಿಂದ ರೂ.20.07 ಲಕ್ಷ ಬೆಲೆ ಹೊಂದಿದೆ. ಇದೇ ಕಾರು ಇದೀಗ ಭಾರತದಲ್ಲೂ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದ್ದು, ಹ್ಯುಂಡೈ ಸಂಸ್ಥೆಯ ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಎಂಜಿ ಇಜೆಡ್ಎಸ್ ಕಾರು 2019ರ ಡಿಸೆಂಬರ್ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎನ್ನಲಾಗಿದ್ದು, ಯುಕೆನಲ್ಲಿ ಬಿಡುಗಡೆ ಮಾಡಲಾದ ಇಜೆಡ್ಎಸ್ ಕಾರು 44.5kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯದೊಂದಿಗೆ 50kW ಪ್ಲಗ್ ಮೂಲಕ ಕೇವಲ 43 ನಿಮಿಷಗಳಲ್ಲಿ ಶೇ.80 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದು ಈ ಸೌಲಭ್ಯವು ಈ ಕಾರಿನಲ್ಲಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಈ ಮೂಲಕ 141-ಬಿಎಚ್‌ಪಿ ಮತ್ತು 352-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ತೊರಬಲ್ಲ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಾಗಿ ಹೊರಹೊಮ್ಮಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 262 ಕಿ.ಮಿ ಮೈಲೇಜ್ ಹಿಂದಿರುಗಿಸುವುದಾಗಿ ಎಂಜಿ ಮೋಟಾರ್ ಸಂಸ್ಥೆಯು ಭರವಸೆ ನೀಡಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಹಾಗೆಯೇ ಇಜೆಡ್ಎಸ್ ಮಾದರಿಯ ಮೇಲೆ ಎಂಜಿ ಮೋಟಾರ್ ಸಂಸ್ಥೆಯು ಗರಿಷ್ಠ 7 ವರ್ಷಗಳ ಕಾಲ ವಾರಂಟಿ ನೀಡಲಿದ್ದು, ಕಾರಿನಲ್ಲಿ ಐಷಾರಾಮಿ ಚಾಲನಾ ಅನುಭವಕ್ಕಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಆಕ್ಟಿವ್ ಎರ್ಮಜೆನ್ಸಿ ಬ್ರೆಕಿಂಗ್, ಲೆನ್ ಕಿಪಿಂಗ್ ಅಸಿಸ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್, ಇಂಟಲಿಜೆಂಟ್ ಸ್ಪೀಡ್ ಲಿಮಿಟ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಂ ಸೌಲಭ್ಯವನ್ನು ಪಡೆದುಕೊಂಡಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಯುಕೆನಲ್ಲಿ ಮಾರಾಟ ಮಾಡಲಾಗುತ್ತಿರುವ ಮಾದರಿಯನ್ನೇ ಭಾರತದಲ್ಲೂ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಇಜೆಡ್ಎಸ್ ಕಾರಿನ ಉತ್ಪಾದನೆಗೆ ಚಾಲನೆ ನೀಡುವುದರ ಮೂಲಕ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸಹ ಅಂತಿಮಗೊಳಿಸುತ್ತಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಮಾಹಿತಿಗಳ ಪ್ರಕಾರ, ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬಿಡುಗಡೆಯಾಗಲಿರುವ ಇಜೆಡ್ ಕಾರಿನ ತಾಂತ್ರಿಕ ಅಂಶಗಳಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಗಳಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ 452 ಕಿ.ಮಿ ಮೈಲೇಜ್ ಸಾಮಾರ್ಥ್ಯದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿ ಸ್ಪರ್ಧಿಯಾಗಿ ಬೆಲೆಯಲ್ಲಿ ಭಾರೀ ಬದಲಾವಣೆ ತರಲಾಗುತ್ತಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಭಾರತದಲ್ಲಿ ಬಿಡುಗಡೆಯಾಗಲಿರುವ ಇಜೆಡ್ಎಸ್ ಮಾದರಿಯು ಪ್ರತಿಚಾರ್ಜ್‌ಗೆ 320ರಿಂದ 350ಕಿ.ಮಿ ಮೈಲೇಜ್ ಸಾಮಾರ್ಥ್ಯವನ್ನು ಒದಗಿಸುವ ಬ್ಯಾಟರಿ ಬಳಕೆಯ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ರೂ.19 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಇದಲ್ಲದೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಹಾಗೆಯೇ ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಶೇ. 12ರಿಂದ ಇದೀಗ ಶೇ.5 ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ. ಈ ಬಗ್ಗೆ ಎಲೆಕ್ಟ್ರಕ್ ವಾಹನ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದು, ಇವಿ ವಾಹನ ಖರೀದಿಸುವ ಗ್ರಾಹಕರನ್ನು ಸೆಳೆಯಲು ಜಿಎಸ್‌ಟಿ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಮೊದಲ ದಿಟ್ಟಹೆಜ್ಜೆ ಎಂದು ಹೇಳಲಾಗಿದೆ.

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ಎಂಜಿ ಇಜೆಡ್ಎಸ್ ಬಿಡುಗಡೆಗೆ ಸಜ್ಜು..!

ಇದರಿಂದ ಬಿಡುಗಡೆ ಹಂತದಲ್ಲಿರುವ ಎಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗಲಿದ್ದು, ಎಂಜಿ ಮೋಟಾರ್ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಮುಂಬರುವ ಮುಂದಿನ ಕೆಲವೇ ದಿನಗಳಲ್ಲಿ ಹಲವು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಉತ್ಸಾಹದಲ್ಲಿವೆ.

Article Published On: Wednesday, September 18, 2019, 12:28 [IST]
English summary
MG eZS SUV Spied Testing Ahead Of Launch In India: Will Rival Hyundai Kona EV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+