ಬಿಡುಗಡೆಯ ಸನಿಹದಲ್ಲಿ ಎಂಜಿ ಹೆಕ್ಟರ್ 6 ಸೀಟರ್ ವರ್ಷನ್
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ 5 ಸೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಎಂಜಿ ಮೊಟಾರ್ ಸಂಸ್ಥೆಯು ಹೆಕ್ಟರ್ ಆವೃತ್ತಿಯಲ್ಲಿ 6-ಸೀಟರ್ ವರ್ಷನ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸದ್ಯ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳ ಮಧ್ಯೆ ತೀವ್ರ ಪೈಪೋಟಿಯಿದ್ದು, ಗ್ರಾಹಕರ ಬೇಡಿಕೆಯೆಂತೆ ಎಂಜಿ ಮೋಟಾರ್ ಸಂಸ್ಥೆಯು 6 ಸೀಟರ್ ಆವೃತ್ತಿಯನ್ನು ಅಭಿವೃದ್ದಿಗೊಳಿಸಿ ರೋಡ್ ಟೆಸ್ಟಿಂಗ್ ನಡೆಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಕ್ಟರ್‌ಗಿಂತಲೂ 6 ಸೀಟರ್ ಆವೃತ್ತಿಯು ತುಸು ಹೆಚ್ಚಿನ ಉದ್ದಳತೆ ಹೊಂದಿದ್ದು, ತಾಂತ್ರಿಕವಾಗಿ ಎರಡು ಕಾರುಗಳು ಒಂದೇ ಆಗಿರಲಿವೆ.

6 ಸೀಟರ್ ಆಸನ ಸೌಲಭ್ಯಕ್ಕಾಗಿ ಹೊಸ ಕಾರಿನಲ್ಲಿ ಮೂರನೇ ಸಾಲು ನೀಡಲಾಗಿದ್ದು, ಮೂರು ಜನ ಪ್ರಯಾಣಿಕರು ಕೂರಬಹುದಾಗಿದ್ದ ಮಧ್ಯದ ಆಸನವನ್ನು ವಿಭಜಿಸಿ ಕ್ಯಾಪ್ಟನ್ ಸೀಟ್ ನೀಡಲಾಗಿದೆ. ಹೀಗಾಗಿ ಚಾಲಕ ಸೇರಿ ಒಟ್ಟು ಆರು ಜನ ಮಾತ್ರವೇ ಇದರಲ್ಲಿ ಪ್ರಯಾಣಿಸಬಹುದಾಗಿದೆ.

ಮಧ್ಯದ ಸೀಟು ವಿಭಜನೆ ಮಾಡಿರುವುದರಿಂದ ಮೂರನೇ ಸಾಲಿನ ಸೀಟಿನಲ್ಲಿ ಕೂರುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದ್ದು, ಹೊಸ ಕಾರು ಸಾಮಾನ್ಯ ಕಾರಿಗಿಂತಲೂ ರೂ. 1 ಲಕ್ಷದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಆದರೆ ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಎಂಜಿನ್ ಆಯ್ಕೆಯನ್ನು ಮುಂದುವರಿಸಲಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಟಾ 7 ಸೀಟರ್ ಕ್ಯಾಸಿನಿ ಮತ್ತು ಹ್ಯುಂಡೈ ಕ್ರೆಟಾ 7 ಸೀಟರ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಿದೆ. ಜೊತೆಗೆ ಹೊಸ ಕಾರು ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಎಂಜಿನ್ ಪಡೆದುಕೊಳ್ಳಲಿದ್ದು, ಹೈಬ್ರಿಡ್ ಎಂಜಿನ್ ಆಯ್ಕೆ ಲಭ್ಯವಾಗಲಿದೆ.

ಮಾಹಿತಿಗಳ ಪ್ರಕಾರ, ಹೆಕ್ಟರ್ 6 ಸೀಟರ್ ಹೊಸ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, 7 ಸೀಟರ್ ಎಸ್‌ಯುವಿ ಕಾರುಗಳಿಗೆ ಇದು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಇನ್ನು ಜುಲೈ ಮಧ್ಯಂತರದಲ್ಲಿ ಬಿಡುಗಡೆಗೊಂಡಿದ್ದ ಸಾಮಾನ್ಯ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಹೊಂದಿದೆ.

ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡೆಲ್‍ಗಳಿಗೆ ಹೆಚ್ಚು ಬೇಡಿಕೆಯಿದ್ದು, ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದೆ.
MOST READ: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಹೆಕ್ಟರ್ ಕಾರು ಸದ್ಯ ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
MOST READ: ಭಾರೀ ದಂಡಕ್ಕೆ ಬ್ರೇಕ್ ಹಾಕಿದ ಸಚಿವ ನಿತಿನ್ ಗಡ್ಕರಿ..!

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.
Source: Autocarindia


Click it and Unblock the Notifications








