ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳಲ್ಲಿ ಎಂಜಿ (ಮೊರಿಸ್ ಗ್ಯಾರೆಜ್) ಮೋಟಾರ್ ಕೂಡಾ ಒಂದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರಿನ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಹೆಕ್ಟರ್ ಹೆಸರಿನಲ್ಲಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿರುವ ಹೊಸ ಎಂಜಿ ಮೋಟಾರ್ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲಿ ಬಾಡಿ ಕಿಟ್ ಹೊಂದಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯು 160ಬಿಎಚ್‌ಪಿ/200ಎನ್ಎಂ ಮತ್ತು ಡೀಸೆಲ್ ಆವೃತ್ತಿಯು 170ಬಿಎಚ್‌ಪಿ/340ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾದಲ್ಲಿ ವುಲಿಂಗ್ ಅಲ್ಮಾಜ್ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನಲ್ಲಿ ರಸ್ತೆಗಿಳಿಯುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಇನ್ನು 1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಎಸ್‌ಎಐಸಿ( SAIC) ಸಂಸ್ಧೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಈ ಸಂಬಂಧ ತನ್ನ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲು ಭಾರತದಿಂದ ಡ್ರೈವ್‌ಸ್ಪಾರ್ಕ್ ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದ ಎಸ್‌ಎಐಸಿ ಸಂಸ್ಥೆಯು, ಚೀನಾದಲ್ಲಿರುವ ತನ್ನ ಅತಿದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ಕಳೆದ ತಿಂಗಳ ಹಿಂದಷ್ಟೇ ವಿಶೇಷ ಕಾರ್ಯಗಾರ ಹಮ್ಮಿಕೊಂಡಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಈ ವೇಳೆ ಭಾರತದಲ್ಲಿ ತನ್ನ ಭವಿಷ್ಯ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಎಸ್‌ಎಐಸಿ ಸಂಸ್ಥೆಯು, ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಬಹುದೊಡ್ಡ ಬದಲಾವಣೆ ತರುವುದಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಹೀಗಾಗಿಯೇ ಎಲೆಕ್ಟ್ರಿಕ್ ಕಾರುಗಳು ಮತ್ತು ಕಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಜೊತೆಗೆ ಎಂಜಿ ಮೋಟಾರ್ ಸಂಸ್ಥೆಯು 2017ರ ಸಪ್ಟೆಂಬರ್‌ನಲ್ಲಿಯೇ 2 ಸಾವಿರ ಕೋಟಿ ವೆಚ್ಚದಲ್ಲಿ ಗುಜರಾತಿನಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಈಗಾಗಲೇ ಆರಂಭಗೊಳಿಸಿದ್ದು, ಮಧ್ಯಮ ಗಾತ್ರದ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

MOST READ: 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಇದಕ್ಕಾಗಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಲಾಗಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿ ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ ಮೊದಲ ತ್ರೈಮಾಸಿಕ ವೇಳೆಗೆ ತನ್ನ ಹೊಸ ಉತ್ಪನ್ನಗಳನ್ನು ಬಹಿರಂಗಗೊಳಿಸಿ ತದನಂತರವಷ್ಟೇ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಜೊತೆಗೆ ದೇಶಾದ್ಯಂತ ಈಗಾಗಲೇ 45ಕ್ಕೂ ಹೆಚ್ಚು ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು, ಕಾರು ಮಾರಾಟಕ್ಕೆ ಚಾಲನೆ ನೀಡುವ ವೇಳೆಗೆ 100ಕ್ಕೂ ಹೆಚ್ಚು ಡೀಲರ್ಸ್ ಹೊಂದುವ ಸಾಧ್ಯತೆಗಳಿವೆ ಎನ್ನಲಾಗಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಮೊದಲ ಕಾರು ಹೇಗಿರಲಿದೆ?

ಒಟ್ಟಿನಲ್ಲಿ ಮಧ್ಯಮ ಗಾತ್ರದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಪರಿಚಯಿಸುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಚೀನಾದಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಸ್‌ಎಐಸಿ( SAIC) ಸಂಸ್ಧೆಯು ಎಂಜಿ ಮೋಟಾರ್ ಕಾರುಗಳ ಉತ್ಪಾದನೆಯ ಉಸ್ತುವಾರಿ ವಹಿಸಿರುವುದು ಮತ್ತೊಂದು ವಿಶೇಷ ಎನ್ನಬಹುದು.

Article Published On: Thursday, January 10, 2019, 11:04 [IST]
English summary
MG Motor's First SUV For India To Be Called The Hector. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+