ಭಾರತಕ್ಕೂ ಲಗ್ಗೆಯಿಟ್ಟ ಮಿನಿ ಜಾನ್ ಕೂಪರ್ ಕಾರು
ಭಾರತದಲ್ಲಿರುವ ಬಿಎಂಡಬ್ಲೂ ಗ್ರೂಪ್ ಇತ್ತೀಚಿಗಷ್ಟೇ ಮಿನಿ ಜಾನ್ ಕೂಪರ್ ವರ್ಕ್ಸ್ ಹ್ಯಾಚ್‍ಬ್ಯಾಕ್ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹ್ಯಾಚ್‍ಬ್ಯಾಕ್ ವಾಹನವನ್ನು ಭಾರತದಲ್ಲಿರುವ ಬಿಲ್ಟ್ ಯೂನಿಟ್‍ನಲ್ಲಿ ತಯಾರಿಸಲಾಗಿದೆ. ಮಿನಿ 2017ರಲ್ಲಿ ಕೇವಲ 20 ಜಾನ್ ಕೂಪರ್ ವರ್ಕ್ಸ್ (ಜೆಸಿಡಬ್ಲೂ)ಪ್ರೋ ಎಡಿಷನ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು.

ಮಿನಿ ಜೆಸಿಡಬ್ಲೂ 2.0 ಲೀಟರಿನ 4 ಸಿಲಿಂಡರಿನ ಹೈಪರ್ಫಾಮೆನ್ಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 228 ಬಿಹೆಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಆಕರ್ಷಕವಾಗಿ ಕಾಣುವ ಈ ಹ್ಯಾಚ್‍ಬ್ಯಾಕ್ ವಾಹನವು ತನ್ನ ಅತ್ಯಾಧುನಿಕ ಎಂಜಿನ್‍ನಿಂದಾಗಿ 0-60 ಕಿ.ಮೀ ವೇಗವನ್ನು 6.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಎಂಜಿನ್‍ನಲ್ಲಿ 8 ಸ್ಪೀಡಿನ ಸ್ಪೋರ್ಟ್ಸ್ ಸ್ಟೆಪ್‍ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಭಾರತದಲ್ಲಿರುವ ವಾಹನಗಳಲ್ಲಿರುವ ಎಂಜಿನ್‍ನಲ್ಲಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಿಲ್ಲ.

ಮಿನಿ ಕಂಪನಿಯು, ಮಿನಿ ಜಾನ್ ಕೂಪರ್ ವರ್ಕ್ಸ್ ನಲ್ಲಿ - ಪರಿಷ್ಕೃತ ಚಾಸೀಸ್, ಸ್ಪೋರ್ಟ್ಸ್ ಬ್ರೇಕಿಂಗ್ ಸಿಸ್ಟಂ ಮತ್ತು ಸ್ಲಿಪ್ ಡಿಫರೆಂಶಿಯಲ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಈ ವಾಹನದಲ್ಲಿ ಅಪ್‍ಡೇಟೆಡ್ ಸ್ಪ್ರಿಂಗ್ಸ್, ಡ್ಯಾಂಪರ್ಸ್ ಮತ್ತು ಲೈಟೆಡ್ ಸಸ್ಪೆಂಷನ್‍ಗಳನ್ನು ಅಳವಡಿಸಲಾಗಿದೆ.

2019ರ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ನಲ್ಲಿ ಹೊಸ ಅಯಾಂಟಿ ರೋಲ್ ಬಾರ್, ಲೈಟ್ ವೇಟ್ ಸಪೋರ್ಟ್ ಬೇರಿಂಗ್ಸ್ ಮತ್ತು ಟ್ರಿಪಲ್ ಪಾಥ್ ಸ್ಟ್ರಟ್ ಮೌಂಟ್‍ಗಳನ್ನು ಅಳವಡಿಸಲಾಗಿದೆ. ಈ ವಾಹನದಲ್ಲಿ ಸ್ಪೋರ್ಟ್, ಕಾಂಫಿ ಮತ್ತು ಎಫಿಷಿಯನ್ಸಿ ಎಂಬ ಮೂರು ಡ್ರೈವಿಂಗ್ ಮೋಡ್‍ಗಳಿದ್ದು, ಈ ವಾಹನವನ್ನು ಆಫ್ ರೋಡ್‍ಗಳಲ್ಲೂ ಚಲಾಯಿಸಬಹುದಾಗಿದೆ.

ಒಟ್ಟಾರೆಯಾಗಿ ಜಾಸ್ತಿ ಬದಲಾವಣೆ ಮಾಡಲಾಗಿಲ್ಲ, ಆದರೆ ಕಾರಿನ ಮುಂಭಾಗದಲ್ಲಿರುವ ವ್ಹೀಲ್‍ಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದು, ಹೆಚ್ಚುವರಿಯಾಗಿ ಯೂನಿಯನ್ ಜ್ಯಾಕ್ ಟೇಲ್ ಲ್ಯಾಂಪ್ಸ್ ಅಳವಡಿಸಲಾಗಿದೆ. ಇಂಟಿರಿಯರ್‍ನಲ್ಲಿ ಆಲ್ ಬ್ಲಾಕ್ ಬಣ್ಣವಿದ್ದು, ಜೆಸಿಡಬ್ಲೂ ಸ್ಪೋರ್ಟ್ಸ್ ಸೀಟುಗಳಿವೆ. ಈ ವಾಹನದಲ್ಲಿ ಎಬಿಎಸ್, ಕಾರ್ನರಿಂಗ್ ಎಬಿಎಸ್, ಅಯಾಂಟಿ ಕ್ರಾಶ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್ ಮತ್ತು ಹೊಸದಾಗಿ ಫ್ಯುಯಲ್ ಫಿಲ್ಟರ್‍ಗಳನ್ನು ಹೊಂದಿದೆ. ಈ ಫಿಲ್ಟರ್‍ನಿಂದಾಗಿ ಹೆಚ್ಚು ಶಬ್ದ ಬಂದರೂ ಮಿನಿಯ ಪರ್ಫಾಮೆನ್ಸ್ ಗೆ ಯಾವುದೇ ತೊಂದರೆಯಾಗುವುದಿಲ್ಲ.
MOST READ: ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

2019ರ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ವಾಹನದ ದರವು ಭಾರತದ ಎಕ್ಸ್ ಶೋರೂಂನಲ್ಲಿರುವಂತೆ ರೂ.43.5 ಲಕ್ಷಗಳಾಗಿದ್ದು, ಈ ವಾಹನವು ಮರ್ಸಿಡಿಸ್ ಎ ಕ್ಲಾಸ್ ಮತ್ತು ವೊಲ್ವೊ ವಿ40 ಗಳಿಗೆ ಪೈಪೋಟಿ ನೀಡಲಿದೆ.

ಟ್ರಿವಿಯಾ
ಜಾನ್ ಕೂಪರ್ ವರ್ಕ್ಸ್ ಹ್ಯಾಂಪ್‍ಷೈರ್‍ನಲ್ಲಿರುವ ಬ್ರಿಟಿಷ್ ಕಾರು ತಯಾರಕ ಕಂಪನಿಯಾಗಿದೆ. ಈ ಕಂಪನಿಯನ್ನು ರೇಸಿಂಗ್‍ನ ದಂತಕಥೆ ಜಾನ್ ಕೂಪರ್‍ರವರ ಮಗ ಮೈಖೆಲ್ ಕೂಪರ್ ಸ್ಥಾಪಿಸಿದರು. ಜಾನ್ ಕೂಪರ್‍ರವರು, ಕೂಪರ್ ಕಾರು ಕಂಪನಿಯ ಸಹ ಸ್ಥಾಪಕರಾಗಿದ್ದಾರೆ. ಅವರನ್ನು ರೇರ್ ಎಂಜಿನ್ ಚಾಸೀಸ್ ಡಿಸೈನ್‍ನ ಪಿತಾಮಹ ಎಂದು ಕರೆಯಲಾಗುತ್ತದೆ. ಜಾನ್ ಕೂಪರ್ ವರ್ಕ್ಸ್ ಕಂಪನಿಯು ಬಿಎಂಡಬ್ಲೂ ವಾಹನಗಳಿಗಾಗಿ ಟ್ಯೂನಿಂಗ್ ಭಾಗಗಳನ್ನು ಮತ್ತು ಆಕ್ಸೆಸರೀಸ್‍ಗಳನ್ನು ತಯಾರಿಸುತ್ತಿದೆ.


Click it and Unblock the Notifications








