ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಪೂರ್ಣಪ್ರಮಾಣದ ಎಲೆಕ್ಟ್ರಿಕ್ ಫೋರ್ಡ್ ಆಸ್ಪೈರ್ ವಾಹನವು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಇದು ನಾವು ಭಾರತದ ರಸ್ತೆಗಳಲ್ಲಿ ನೋಡುವ ಕಾಂಪ್ಯಾಕ್ಟ್ ಸೆಡಾನ್ ಆಗಿರದೇ, ಫುಲ್ ಸೈಜಿನ ಸೆಡಾನ್ ಆಗಿರಲಿದ್ದು, ಇದು ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳ ಸಹಭಾಗಿತ್ವದಲ್ಲಿ, ಎರಡೂ ಕಂಪನಿಗಳೂ ಜಂಟಿಯಾಗಿ ಅಭಿವೃದ್ಧಿಪಡಿಸಿದ ಮೊದಲ ವಾಹನವಾಗಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಮಾಡಿದ್ದವು. ಈ ವರ್ಷದ ಆರಂಭದಲ್ಲಿ ಸಹಭಾಗಿತ್ವದ ಬಗ್ಗೆ ಘೋಷಣೆ ಮಾಡಿದವು. ಈ ಸಹಭಾಗಿತ್ವವು ವಾಹನದ ಪ್ಲಾಟ್‍‍ಫಾರಂ ಹಂಚಿಕೆ, ಎಂಜಿನ್, ಎಲೆಕ್ಟ್ರಿಕ್ ಪವರ್‍‍ಟ್ರೇನ್ ಟೆಕ್ನಾಲಜಿ, ಕನೆಕ್ಟಿವಿಟಿ ಮತ್ತು ಎಕ್ವಿಪ್‍‍ಮೆಂಟ್‍‍ಗಳನ್ನು ಒಳಗೊಂಡಿರುತ್ತದೆ. ಈ ಸಹಭಾಗಿತ್ವದಲ್ಲಿ ತಯಾರಾದ ಮೊದಲ ಪ್ರಾಡಕ್ಟ್ ಎಲೆಕ್ಟ್ರಿಕ್ ಪವರ್‍‍ಟ್ರೇನ್ ಟೆಕ್ನಾಲಜಿಯಲ್ಲಿ ಮೂಡಿಬಂದಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದು, ಇದುವರೆಗೂ - ಇ ವೆರಿಟೊ, ಇ ಸುಪ್ರೊ, ಇ 20- ಸೇರಿದಂತೆ ಸಾವಿರಾರು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಇನ್ನೊಂದೆಡೆ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿದ ಅನುಭವವನ್ನು ಹೊಂದಿಲ್ಲದ ಕಾರಣ, ಮಹೀಂದ್ರಾ ಕಂಪನಿಯ ಸಹಕಾರವನ್ನು ಕೋರಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಆಟೋಕಾರ್ ಫೋರ್ಡ್ ಆಸ್ಪೈರ್‍‍ನ ಚಿತ್ರವನ್ನು ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಕಾರಿನ ಮೂಲ ಮಾದರಿಯನ್ನು ಚಲಾಯಿಸಿರುವುದಾಗಿ ಹೇಳಿಕೊಂಡಿದೆ. ಪೂರ್ಣ ಪ್ರಮಾಣದ ಫೋರ್ಡ್ ಆಸ್ಪೈರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಹೊಂದಿದ್ದು ಪ್ರಪಂಚದಾದ್ಯಂತ ಇರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ಫೋರ್ಡ್ ಆಸ್ಪೈರ್ ವಾಹನವನ್ನು ತೆರಿಗೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಂಪ್ಯಾಕ್ಟ್ ಸೆಡಾನ್‍ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಭಾರತ ಸರ್ಕಾರವು 4 ಮೀಟರ್‍‍ಗಳಿಗಿಂತ ಹೆಚ್ಚು ಉದ್ದವಿರುವ ವಾಹನಗಳ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆಗಳನ್ನು ವಿಧಿಸುತ್ತದೆ. ಭಾರತದಲ್ಲಿ ಮಾರಾಟವಾಗುವ ಫೋರ್ಡ್ ಆಸ್ಪೈರ್ 3,995 ಎಂಎಂ ಉದ್ದವಿದ್ದು, ಸರ್ಕಾರವು ನಿಗದಿಪಡಿಸಿರುವ 4,000 ಎಂಎಂ ಅಳತೆಗಿಂತ 5 ಎಂಎಂ ಕಡಿಮೆ ಅಳತೆ ಹೊಂದಿದೆ. ಇದರ ಆಧಾರದ ಮೇಲೆ ಫೋರ್ಡ್ ಆಸ್ಪೈರ್‍‍ನ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ನಿಗದಿಪಡಿಸಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಎಲೆಕ್ಟ್ರಿಕ್ ಕಾರುಗಳ ವಿಷಯಕ್ಕೆ ಬಂದರೆ, ಸರ್ಕಾರವು ಅಳತೆಯ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸುವುದಿಲ್ಲ. ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಮೇಲೆ 12% ಜಿ‍ಎಸ್‍‍ಟಿಯನ್ನು ನಿಗದಿಪಡಿಸಲಾಗಿದ್ದು, ಅಳತೆಯನ್ನಾಗಲಿ, ಸ್ಟೈಲ್ ಆಗಲಿ, ಸೆಗ್ಮೆಂಟನ್ನಾಗಲಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದ ಕಾರಣ ಫೋರ್ಡ್ ತನ್ನ ಗ್ರಾಹಕರ ಹಣಕ್ಕೆ ಹೆಚ್ಚು ಬೆಲೆಯನ್ನು ಕೊಡುವ ಉದ್ದೇಶದಿಂದ ದೊಡ್ಡ ಗಾತ್ರದ ಸೆಡಾನ್ ಅನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಫೋರ್ಡ್ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್‍‍ನ ಉದ್ದ 3,995 ಎಂಎಂ ಉದ್ದವಿದ್ದು, 1,704 ಎಂಎಂ ಅಗಲ ಮತ್ತು 1,525 ಎಂಎಂ ಎತ್ತರವಿದೆ. ಪೂರ್ಣ ಪ್ರಮಾಣದ ಫೋರ್ಡ್ ಆಸ್ಪ್ರೈರ್‍‍ನ ಉದ್ದವು 4,254 ಎಂಎಂ ಉದ್ದ, 1,695 ಅಗಲ ಮತ್ತು 1,525 ಎಂಎಂ ಎತ್ತರವಿರುತ್ತದೆ. ಇದರಿಂದಾಗಿ ಬೂಟ್ ಸ್ಪೇಸ್ 359 ರಿಂದ 445 ಲೀಟರ್‍‍ಗಳಷ್ಟು ಹೆಚ್ಚಾಗಿದೆ.

MOST READ: ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಡ್ರೈವ್‍‍ಟ್ರೇನ್‍‍ನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಫೋರ್ಡ್, ತನ್ನ ಹೊಸ ವಾಹನಕ್ಕಾಗಿ ಡ್ರೈವ್‍‍ಟ್ರೇನ್ ಅನ್ನು ಮಹೀಂದ್ರಾದ ಇ ವೆರಿಟೊ ವಾಹನದಿಂದ ಪಡೆಯುತ್ತಿಲ್ಲ. ಬದಲಿಗೆ ಮಹೀಂದ್ರಾ ತನ್ನ ಮುಂಬರುವ ಎಲೆಕ್ಟ್ರಿಕ್ ಸೆಡಾನ್ ಮತ್ತು ಎಸ್‍‍ಯು‍‍ವಿಗಳಿಗಾಗಿ ಅಭಿವೃದ್ಧಿಪಡಿಸಿರುವ ಡ್ರೈವ್‍‍ಟ್ರೇನ್ ಅನ್ನು ಬಳಸಲಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಈ ಡ್ರೈವ್‍‍ಟ್ರೇನ್ 380ವಿ ನಿಕ್ಕಲ್ ಮ್ಯಾಂಗನೀಸ್ ಕೋಬಾಲ್ಟ್ ಬ್ಯಾಟರಿಯನ್ನು ಬಳಸಲಿದ್ದು, ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 50 ಕೆಡಬ್ಲು (67 ಬಿಹೆಚ್‍‍ಪಿ) ಪವರ್ ಉತ್ಪಾದಿಸುತ್ತದೆ. ಫೋರ್ಡ್ ಆಸ್ಪೈರ್ ಇವಿಯಲ್ಲಿರುವ ಬ್ಯಾಟರಿಯು ಮುಂಭಾಗದ ವ್ಹೀಲ್‍‍ಗಳನ್ನು ಚಲಾಯಿಸಲಿದ್ದು, ಸುಮಾರು 150 ಕಿ.ಮೀ ದೂರದವರೆಗೂ ಕ್ರಮಿಸುತ್ತದೆ. ಈ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 110.ಕಿ.ಮೀ ಆಗಿರಲಿದೆ.

ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಅಭಿವೃದ್ಧಿಪಡಿಸಲಿದೆ ಮಹೀಂದ್ರಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಿಶ್ವದಾದ್ಯಂತವಿರುವ ಆಟೋ ಮೋಬೈಲ್ ಮಾರುಕಟ್ಟೆಯು ಎಲೆಕ್ಟ್ರಿಕ್ ಕಾರುಗಳತ್ತ ಗಮನಹರಿಸುತ್ತಿದ್ದು, ಈಗಿನ ಸರದಿ ಭಾರತದ್ದು. ಮಹೀಂದ್ರಾ ಮತ್ತು ಟಾಟಾ ಕಂಪನಿಗಳು ಮಾತ್ರ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿವೆ.

ಮಾರುತಿ ಸುಜುಕಿ ಕಂಪನಿಯು ತನ್ನ ವ್ಯಾಗನ್ ಆರ್ ಮಾದರಿಯನ್ನು ಎಲೆಕ್ಟ್ರಿಕ್‍‍ನಲ್ಲಿ ಬಿಡುಗಡೆ ಮಾಡುವ ಹಂತದಲ್ಲಿದೆ. ಎಲ್ಲಾ ಕಾರು ತಯಾರಕರು ಇದನ್ನೇ ಅನುಸರಿಸುವ ಸಾಧ್ಯತೆಗಳಿವೆ. ಫೋರ್ಡ್ ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಟ್ಟಿದ್ದು ತನ್ನ ವಾಹನಗಳಲ್ಲಿ ಮಹೀಂದ್ರಾ ಕಂಪನಿಯು ಅಭಿವೃದ್ಧಿಪಡಿಸಿರುವ ಇವಿ ಪವರ್‍‍ಟ್ರೇನ್‍‍ಗಳನ್ನು ಬಳಸಲಿದೆ.

Most Read Articles

Kannada
Read more on ಫೋರ್ಡ್ ford
English summary
Ford Aspire Electric Sedan To Be Powered By Mahindra Electric Drivetrain - Read in kannada
Story first published: Thursday, May 9, 2019, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X