ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್
ಫೋರ್ಡ್ ಇಂಡಿಯಾ ಹೊಸ ಮಸ್ಟಾಂಗ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆಟೋಕಾರ್ ಇಂಡಿಯಾದ ಪ್ರಕಾರ ಫೋರ್ಡ್ ಮುಸ್ಟಾಂಗ್ 2020ರ ಏಪ್ರಿಲ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಫೋರ್ಡ್ ಮಸ್ಟಾಂಗ್ ಕಾರು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ, ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೊಸ ಫೋರ್ಡ್ ಮಸ್ಟಾಂಗ್ ಕಾರ್ ಅನ್ನು ಹಿಂದಿನ ಮಾದರಿಗಿಂತ ಸ್ವಲ್ಪ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ ಬೋನೆಟ್, ಎಸಿ ವೆಂಟ್ಸ್ ಗಳನ್ನು ನವೀಕರಿಸಲಾಗಿದೆ.

ಹೊಸ ಮಸ್ಟಾಂಗ್ ಕಾರು ಸಣ್ಣ ಮಟ್ಟದ ನವೀಕರಸಿದ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಹಳೆಯ ಮಾದರಿಗಿಂತ ಹೊಸ ಮಾದರಿಯು ಸ್ಲೀಕರ್ ಆಗಿರಲಿದೆ. ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್‍ಗಳನ್ನು ಅಳವಡಿಸಲಾಗಿದೆ. ಮರು ವಿನ್ಯಾಸಗೊಳಿಸಿದ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ.

ಹೊಸ ಫೋರ್ಡ ಮಸ್ಟಾಂಗ್ ಕಾರಿನ ಇಂಟಿರಿಯರ್‍ನಲ್ಲಿ 12 ಇಂಚಿನ ಎಲ್‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕ್ಯಾಬಿನ್ ಸುತ್ತಲೂ ಸ್ಪಾಟ್ ಟಚ್ ಮ್ಯಾಟಿರಿಯಲ್ ಅನ್ನು ಹೊಂದಿದ್ದು, ವಿಶೇಷವಾಗಿ ಸೆಂಟರ್ ಕನ್ಸೋಲ್ ಮತ್ತು ಡೋರ್‍ಗಳಲ್ಲಿ ಹೊಂದಿದೆ.

ಹೊಸ ಮಸ್ಟಾಂಗ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಲ್‍ಇಡಿ ಲೈಟಿಂಗ್, ಫ್ಲ್ಯಾಟ್ ಬಾಂಟಮ್ ಸ್ಟೀಯರಿಂಗ್ ವ್ಹೀಲ್ ಹಾಗೂ ಇತರ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ.

ಒಂದು ಬಾರಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೊಸ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಅದೇ ಎಂಜಿನ್‍ನ ರಿ-ಟ್ಯೂನ್ ವೆರಿಯಂಟ್ ಅನ್ನು ಬಳಸುತ್ತದೆ. 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 450 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಸ್ಟಾಂಗ್ ಮಾದರಿಗಿಂತ 35 ಬಿಹೆಚ್‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಫೋರ್ಡ್ ಮಸ್ಟಾಂಗ್‍ನಲ್ಲಿ ಎಂಜಿನ್‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಪ್ರಸ್ತುತ ಮಾದರಿಯಲ್ಲಿ ಎಂಜಿನ್‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ಫೋರ್ಡ್ ಮುಸ್ಟಾಂಗ್ ಕಾರಿನಲ್ಲಿ ಫೀಚರ್ಸ್ ಮತ್ತು ವಿನ್ಯಾಸವನ್ನು ನವೀಕರಿಸಲಾಗಿದೆ. ಹೊಸ ರಿ-ಟ್ಯೂನ್ ಎಂಜಿನ್ ಅನ್ನು ಹೊರತುಪಡಿಸಿ ಹೊಸ ಮುಸ್ಟಾಂಗ್‍ನಲ್ಲಿ ಮೂರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಬ್ಲೂ, ಆರೇಂಜ್ ಮತ್ತು ರೆಡ್ ಬಣ್ಣಗಳಾಗಿದೆ. ಹೊಸ ಮಸ್ಟಾಂಗ್‍ನಲ್ಲಿ 19 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿರಲಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಫೋರ್ಡ್ ಮಸ್ಟಾಂಗ್ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಫೋರ್ಡ್ ಕಂಪನಿಯು ವರ್ಷಗಳಲ್ಲಿ ಹಲವಾರು ನವೀಕರಗಳನ್ನು ನಡೆಸಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಫೋರ್ಡ್ ಮಸ್ಟಾಂಗ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು, ಈ ಕಾರು ಭಾರತೀಯರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ. ಹೊಸ ಫೋರ್ಡ್ ಮುಸ್ಟಾಂಗ್ ಪ್ರಸ್ತುತ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರುವ ಸಾಧ್ಯತೆಗಳಿದೆ.


Click it and Unblock the Notifications