Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣಗೊಂಡ 2020ರ ಹೊಸ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಇಸುಝು ತನ್ನ ಡಿ ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಅನ್ನು ಅಪ್‍ಡೇಟ್‍ಗೊಳಿಸಿದ್ದು, ಹೊಸ ತಲೆಮಾರಿನ ವಾಹನವನ್ನು ಕಳೆದ ಅಕ್ಟೋಬರ್‍ನಲ್ಲಿ ಥೈಲ್ಯಾಂಡ್‍ನಲ್ಲಿ ಪ್ರದರ್ಶಿಸಿತ್ತು.

ಅಪ್‍ಡೇಟ್ ಮಾಡಲಾಗಿರುವ ಹೊಸ ವಾಹನವನ್ನು ಈಗ ನಡೆಯುತ್ತಿರುವ 2019ರ ಥಾಯ್ ಮೋಟಾರ್ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. 2020ರ ಡಿ ಮ್ಯಾಕ್ಸ್ ವಾಹನದ ಹೊರಭಾಗವು ಇಸುಝು ಕಂಪನಿಯ ಇನ್‍ಫೈನೇಟ್ ಪೊಟೆಂಶಿಯಲ್ ಥೀಮ್ ಅನ್ನು ಹೊಂದಿದೆ. ಹೊಸ ವಾಹನದ ಹೊರಭಾಗವು ಮಸ್ಕ್ಯುಲರ್ ಹಾಗೂ ಅಗ್ರೇಸಿವ್ ಲುಕ್ ಜೊತೆಗೆ ಪ್ರೀಮಿಯಂ ಅಂಶಗಳನ್ನು ಹೊಂದಿದೆ.

ಮುಂಭಾಗದಲ್ಲಿ ಟ್ವಿನ್ ಕ್ರೋಮ್ ಸ್ಲಾಟ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೊಂದಿರುವ ಎಲ್‍ಇಡಿ ಹೆಡ್‍ಲ್ಯಾಂಪ್ ಹಾಗೂ ಡಿಆರ್‍ಎಲ್‍ಗಳಿವೆ. ಇದರ ಜೊತೆಗೆ ವರ್ಟಿಕಲ್ ಸ್ಟಾಕ್‍ನ ಡ್ಯುಯಲ್ ಫಾಗ್ ಲ್ಯಾಂಪ್ ಹೊಂದಿರುವ ಹೊಸ ಬಂಪರ್ ಹಾಗೂ ಹೊಸ ಸ್ಕಿಡ್ ಪ್ಲೇಟ್‍ಗಳಿದ್ದು, ಡಿ ಮ್ಯಾಕ್ಸ್ ವಾಹನಕ್ಕೆ ಮೊದಲಿಗಿಂತ ಹೆಚ್ಚಿನ ರಗಡ್ ಲುಕ್ ನೀಡುತ್ತವೆ.

ಈ ಎಕ್ಸ್ ಪೋದಲ್ಲಿ ಅನಾವರಣಗೊಂಡ ಟಾಪ್ ಎಂಡ್ ವಿ ಕ್ರಾಸ್ ಮಾದರಿಯು ಫೆಂಡರ್ ಫ್ಲೇರ್, ಡೋರ್ ಹ್ಯಾಂಡಲ್, ಒಆರ್‍ವಿಎಂ ಹಾಗೂ ರೂಫ್ ರೇಲ್‍ಗಳ ಮೇಲೆ ಗ್ರೇ ಬಣ್ಣವನ್ನು ಹೊಂದಿದೆ. ಹಿಂಬದಿಯಲ್ಲಿ ಸ್ಕ್ವೇರ್ ಶೇಪ್‍ನ ಎಲ್‍ಇಡಿ ಟೇಲ್ ಲ್ಯಾಂಪ್‍ಗಳಿವೆ.

ಹೊಸ ವಾಹನದ ಟೇಲ್‍ಗೇಟ್ ಅನ್ನು ಪರಿಷ್ಕರಿಸಲಾಗಿದೆ. ಹೊಸ ಪಿಕ್‍ಅಪ್ ವಾಹನದಲ್ಲಿ 18 ಇಂಚಿನ ಬ್ಲಾಕ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನದ ಲುಕ್ ಹೆಚ್ಚಿದೆ. ಕ್ಯಾಬಿನ್‍ನೊಳಗೆ ಹಲವಾರು ಹೊಸ ಫೀಚರ್‍ಗಳನ್ನು ಅಳವಡಿಸಲಾಗಿದೆ.

2020ರ ಡಿ ಮ್ಯಾಕ್ಸ್ ಕ್ಯಾಬಿನ್‍ನಲ್ಲಿ ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸದ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ ಟ್ರೈಗ್ಯುಲರ್ ಎಸಿ ವೆಂಟ್ಸ್ ಗಳನ್ನು ಅಳವಡಿಸಲಾಗಿದೆ.

ಇದರ ಜೊತೆಗೆ 4.2 ಇಂಚಿನ ಡಿಜಿಟಲ್ ಡಿಸ್‍ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಥಾಯ್ ಮೋಟಾರ್ ಎಕ್ಸ್ ಪೋದಲ್ಲಿ ಅನಾವರಣಗೊಂಡ ಡಿ ಮ್ಯಾಕ್ಸ್ ವಿ ಕ್ರಾಸ್ ವಾಹನದ ಇಂಟಿರಿಯರ್, ಕ್ರೋಮ್ ಹಾಗೂ ಬ್ರೌನ್ ಅಪ್‍ಹೋಲೆಸ್ಟರಿಯ ಜೊತೆಗೆ ಕಪ್ಪು ಬಣ್ಣವನ್ನು ಹೊಂದಿದೆ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ವಾಹನದಲ್ಲಿರುವ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಈ ವಾಹನದಲ್ಲಿ 6 ಏರ್‍ಬ್ಯಾಗ್, ಸ್ಟಾಬಿಲಿಟಿ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋಮ್ಯಾಟಿಕ್ ಲಾಕಿಂಗ್, ವೆಲ್‍ಕಮ್ ಹಾಗೂ ಫಾಲೋ ಮಿ ಹೋಂ ಲೈಟಿಂಗ್ ಹಾಗೂ ವಾಯ್ಸ್ ಕಂಟ್ರೋಲ್‍ಗಳಿವೆ.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ 2020ರ ಡಿ ಮ್ಯಾಕ್ಸ್ ವಾಹನದಲ್ಲಿ 3.0 ಲೀಟರಿನ ಹೊಸ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 188 ಬಿಹೆಚ್‍ಪಿ ಪವರ್ ಹಾಗೂ 450 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಮಾರುಕಟ್ಟೆಯಲ್ಲಿರುವ ಮಾದರಿಗಿಂತ 13 ಹೆಚ್ಚು ಬಿಹೆಚ್‍ಪಿ ಪವರ್ ಹಾಗೂ 70 ಹೆಚ್ಚು ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.9 ಲೀಟರಿನ ಡೀಸೆಲ್ ಎಂಜಿನ್‍ನೊಂದಿಗೂ ಈ ವಾಹನವನ್ನು ಮಾರಾಟ ಮಾಡಲಾಗುವುದು.

ಈ ಎಂಜಿನ್ 148 ಬಿಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ತಲೆಮಾರಿನ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ ವಾಹನವನ್ನು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಮಾರುಕಟ್ಟೆಯಲ್ಲಿರುವ ಬಿಎಸ್ 4 ಎಂಜಿನ್ ಹೊಂದಿರುವ ಡಿ ಮ್ಯಾಕ್ಸ್ ವಾಹನದ ಉತ್ಪಾದನೆಯನ್ನು ಈ ವರ್ಷಾಂತ್ಯಕ್ಕೆ ಸ್ಥಗಿತಗೊಳಿಸಲಾಗುವುದೆಂದು ಇಸುಝು ಕಂಪನಿಯು ತಿಳಿಸಿದೆ.
Source: IndianAutosBlog