ಹಾಟ್ ಲುಕ್ ಹೊಂದಿದೆ ಮಾಡಿಫೈ ಆದ ಈ ಹೋಂಡಾ ಸಿವಿಕ್ ಕಾರು
ಹೋಂಡಾ ಕಂಪನಿಯು ಕೆಲ ತಿಂಗಳ ಹಿಂದಷ್ಟೇ 10ನೇ ತಲೆಮಾರಿನ ಹೋಂಡಾ ಸಿವಿಕ್ ಸೆಡಾನ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಸ್ಟೈಲಿಶ್ ಆದ ಈ ಬಹುನಿರೀಕ್ಷಿತ ಕಾರು, ತನ್ನ ಸೆಗ್‍ಮೆಂಟಿನ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ.

8ನೇ ತಲೆಮಾರಿನ ಹೋಂಡಾ ಸಿವಿಕ್ ಕಾರ್ ಅನ್ನು ಭಾರತದಲ್ಲಿ ಕೊನೆಯದಾಗಿ ಮಾರಾಟ ಮಾಡಲಾಗಿತ್ತು. ಈ ಕಾರು ತನ್ನ ಹೊಸ ಬಗೆಯ ವಿನ್ಯಾಸ, ಎಂಜಿನ್ ಹಾಗೂ ಇತರ ಅಂಶಗಳಿಂದಾಗಿ ಕಾರು ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿತ್ತು. ಈಗ ಬಿಡುಗಡೆಯಾಗಿರುವ 10ನೇ ತಲೆಮಾರಿನ ಕಾರು ಹೆಚ್ಚು ಐಷಾರಾಮಿಯಾಗಿದೆ. ದೇಶದಲ್ಲಿ ಹಲವಾರು ಹಳೆಯ ಹೋಂಡಾ ಸಿವಿಕ್ ಕಾರುಗಳನ್ನು ಮಾಡಿಫೈಗೊಳಿಸಲಾಗಿದೆ. ಈ ಲೇಖನದಲ್ಲಿ ಮಾಡಿಫೈಗೊಳಿಸಿರುವ 10ನೇ ತಲೆಮಾರಿನ ಹೋಂಡಾ ಸಿವಿಕ್ ಹೇಗೆ ವಿಭಿನ್ನವಾಗಿ, ಆಕರ್ಷಕವಾಗಿ ಕಾಣುತ್ತದೆ ಎಂಬುದನ್ನು ನೋಡೋಣ.

ಎಲ್ಲಾ ಭಾಗಗಳಲ್ಲಿ ಕಪ್ಪು ಬಣ್ಣವನ್ನು ಹೊಂದಿರುವ, ಮಾಡಿಫೈಗೊಂಡಿರುವ ಈ ಕಾರು ಭಾರತದಲ್ಲಿ ಇದುವರೆಗೂ ಮಾಡಿಫೈಗೊಳಿಸಲಾದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಈ ಮಾಡಿಫೈ ಕಾರ್ಯವನ್ನು 360 ಮೋಟಾರಿಂಗ್ ಮಲಪ್ಪುರಂ ಮಾಡಿದೆ.

ಮುಂಭಾಗದಲ್ಲಿ ಹೊಸ ಬಂಪರ್ ಅಳವಡಿಸಲಾಗಿದೆ. ಈ ಹೊಸ ಬಂಪರ್‍ನಲ್ಲಿ ಲಿಪ್ ಸ್ಪಾಯ್ಲರ್, ಫೇಕ್ ಏರ್ ಸ್ಕೂಪ್ ಸೇರಿದಂತೆ ಹಲವಾರು ಸ್ಪೋರ್ಟಿ ಅಂಶಗಳಿವೆ. ಗ್ರಿಲ್‌ನ ಮೇಲಿನ ಭಾಗವು ರೆಡ್ ಕೋಟಿಂಗ್ ಹೊಂದಿದ್ದು, ಹೆಡ್‌ಲ್ಯಾಂಪ್‌ಗಳವರೆಗೆ ಚಾಚಿಕೊಂಡಿದೆ.

ಬಾನೆಟ್ ಏರ್ ಸ್ಕೂಪ್ ಹೊಂದಿದೆ. ಸೈಡಿನಿಂದ ನೋಡಿದಾಗ, ಸಾಧಾರಣವಾದ ಟಯರ್‍ಗಳು ಅತ್ಯುತ್ತಮವಾದ ಅಲಾಯ್ ವ್ಹೀಲ್‍ಗಳನ್ನು ಹೊಂದಿರುವುದನ್ನು ಕಾಣಬಹುದು. ಇದರಿಂದಾಗಿ ಈ ಸಿವಿಕ್ ಕಾರು ಬೇರೊಂದು ಆಯಾಮವನ್ನು ಪಡೆಯುತ್ತದೆ.

ಹಿಂಭಾಗದಲ್ಲಿ ಪ್ರಮುಖವಾದ ಅಪ್‍ಡೇಟ್‍ಗಳನ್ನು ಮಾಡಲಾಗಿದೆ. ಹೊಸ ಸ್ಪೋರ್ಟಿ ಬಂಪರ್ ಹಾಗೂ ಸಿವಿಕ್ ಟೈಪ್ ಆರ್‍ನಿಂದ ಪ್ರೇರಿತವಾಗಿರುವ ಎಕಾಸ್ಟ್ ಹೌಸಿಂಗ್‍ಗಳಿವೆ. ಇವು ಫೇಕ್ ವೆಂಟ್‍ಗಳಾಗಿವೆ. ಹಿಂಭಾಗದಲ್ಲಿರುವ ಡಿಫ್ಯೂಸರ್ ರೆಡ್ ಲೈನ್ ಹೊಂದಿದ್ದು, ಕಾರಿನ ಸ್ಪೋರ್ಟಿ ಲುಕ್ ಅನ್ನು ಎತ್ತಿ ತೋರಿಸುತ್ತದೆ.

ಯಾವುದೇ ಕಾರಿನಲ್ಲಾದರೂ ಬೂಟ್‌ನ ಮೇಲ್ಭಾಗದಲ್ಲಿರುವ ಸ್ಪಾಯ್ಲರ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಈ ಕಾರಿನಲ್ಲಿ ಸ್ಪಾಯಿಲರ್ ಅಳವಡಿಸಲಾಗಿಲ್ಲ. ನೀವೂ ಸಹ ನಿಮ್ಮ ಕಾರ್ ಅನ್ನು 360 ಮೋಟಾರಿಂಗ್ ಮಲಪ್ಪುರಂರವರನ್ನು ಸಂಪರ್ಕಿಸಿ ಮಾಡಿಫೈಗೊಳಿಸಿ ಕೊಳ್ಳಬಹುದಾಗಿದೆ.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಚಿತ್ರಗಳಲ್ಲಿ ಕಾಣುವಂತೆ, ಬಾಡಿ ಕಿಟ್‍ಗಳನ್ನು ಹೊಂದಿರುವ ಸಾಕಷ್ಟು ಸ್ಪಾಯ್ಲರ್ ಲಭ್ಯವಿದೆ. ಇನ್ನು ಹೊಸ 10ನೇ ತಲೆಮಾರಿನ ಹೋಂಡಾ ಸಿವಿಕ್ ಬಗ್ಗೆ ಹೇಳುವುದಾದರೆ, ಈ ಸ್ಟೈಲಿಶ್ ಸೆಡಾನ್ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಲಾಂಟ್ರಾ, ಸ್ಕೋಡಾ ಆಕ್ಟೇವಿಯಾ ಹಾಗೂ ಟೊಯೊಟಾ ಕರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. 1.8 ಲೀಟರಿನ ಪೆಟ್ರೋಲ್ ಎಂಜಿನ್ 139 ಬಿಹೆಚ್‍ಪಿ ಪವರ್ ಹಾಗೂ 174 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡಲಾಗುತ್ತದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

1.6 ಲೀಟರಿನ ಡೀಸೆಲ್ ಎಂಜಿನ್ ಅರ್ಥ್ ಡ್ರೀಮ್ಸ್ ಯೂನಿಟ್ ಆಗಿದ್ದು, 118 ಬಿಎಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ ಮಾದರಿಯ ಕಾರುಗಳು ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಮಾತ್ರ ಹೊಂದಿರಲಿವೆ.


Click it and Unblock the Notifications








