ರಸ್ತೆಗಿಳಿದ ಹೊಚ್ಚ ಹೊಸ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರು...
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಬಲೆನೊ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾದಲಾಗಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 5.45 ಲಕ್ಷದ ಪ್ರಾರಂಭಿಕ ಬಲೆಯನ್ನು ಪಡೆದುಕೊಂಡಿದೆ. ಇಂದಿನ ಲೇಖನದಲ್ಲಿ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಿರಿ.

ಬುಕ್ಕಿಂಗ್ ಶುರು
ಗ್ರಾಹಕರ ನಿರಿಕ್ಷೆಯ ಅನುಸಾರ ಸಂಸ್ಥೆಯು ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಮಾರುತಿ ಸುಜುಕಿ ಸಂಸ್ಥೆಯು ಪ್ರಾರಂಭಿಸಲಾಗಿದ್ದು, ಆಸಕ್ತ ಗ್ರಾಹಕರು ಹೊಸ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಡೀಲರ್‍ನ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಮಾದರಿಗಳನ್ನು ಮತ್ತಷ್ಟು ಉನ್ನತ ದರ್ಜೆಯಲ್ಲಿ ಪರಿಚಯಿಸಲು ಯೋಜನೆ ರೂಪಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೇಸ್‌ಲಿಫ್ಟ್ ಬಲೆನೊ ಮಾದರಿಯನ್ನು ಸಂಸ್ಥೆಯ ಹಾರ್ಟ್‍ಟೆಕ್ಟ್ ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ಸಿದ್ದಗೊಳಿಸಲಾಗುತ್ತಿದೆ.

| Variant | Petrol | Diesel |
| Sigma | Rs 5.45 lakh | Rs 6.60 lakh |
| Delta | Rs 6.16 lakh | Rs 7.31 lakh |
| Zeta | Rs 6.84 lakh | Rs 7.99 lakh |
| Alpha | Rs 7.45 lakh | Rs 8.60 lakh |
| Sigma CVT | Rs 7.48 lakh | N.A. |
| Zeta CVT | Rs 8.16 lakh | N.A. |
| Alpha CVT | Rs 8.77 lakh | N.A. |

ವೇರಿಯಂಟ್‍ಗಳು
ಹೊಸ ಬಲೆನೊ ಫೇಸ್‍ಲಿಫ್ಟ್ ಕಾರುಗಳು ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೇಶದಲ್ಲಿರುವ ಎಲ್ಲಾ ಪ್ರೀಮಿಯಂ ನೆಕ್ಸಾ ಬ್ರಾಂಡ್ ಶೋರಂಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಹಲವಾರು ಬದಲಾವಣೆಗಳನ್ನು ಪಡೆದು ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರು ಈ ಬಾರಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಗ್ರಿಲ್ ಇನ್ಸರ್ಟ್, ನವೀಕರಿಸಲಾದ ಫ್ರಂಟ್ ಬಂಪರ್ ಮತ್ತು ಅಗಲವಾದ ಏರ್‍ಡ್ಯಾಮ್‍ನ ಜೊತೆಗೆ ಹೊಸ ಫಾಗ್ ಲ್ಯಾಂಪ್ ಮತ್ತು 16 ಇಂಚಿನ ಅಲಾಯ್ ವ್ಹೀಲ್‍ಗಳನ್ನು ನೀಡಲಾಗಿದೆ.

ಇನ್ನುಕಾರಿನ ಒಳಭಾಗದಲ್ಲಿ ಫ್ಯಾಬ್ರಿಕ್ ಸೀಟ್‍ಗಳನ್ನು ಪಡೆದುಕೊಂಡಿದ್ದು, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7.0 ಇಂಚಿನ 'ಸ್ಮಾರ್ಟ್‍ಪ್ಲೇ ಸ್ಟೂಡಿಯೊ' ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿದ್ದು, ಈ ವೈಶಿಷ್ಟ್ಯತೆಯನ್ನು ಇತ್ತೀಚೆಗೆ ಬಿಡುಗಡೆಗೊಂಡ ವ್ಯಾಗನ್ ಆರ್ ಕಾರಿನಲ್ಲಿ ಕೂಡಾ ಕಾಣಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಲಭ್ಯವಿರುವ 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್200 ಡೀಸೆಲ್ ಎಂದಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಪೆಟ್ರೋಲ್ ಎಂಜಿನ್ ಆಧಾರಿತ ಬಲೆನೊ ಕಾರು 89ಬಿಹೆಚ್‍ಪಿ ಮತ್ತು 115ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.
MOST READ: ಒಂದು ಲೀಟರ್‍ಗೆ ಸುಮಾರು 48.2 ಕಿಲೋಮೀಟರ್ ಮೈಲೇಜ್ ನೀಡುತ್ತಂತೆ ಈ ಸ್ವಿಫ್ಟ್ ಕಾರು..!

ಇನ್ನು ಡೀಸೆಲ್ ಆಧಾರಿತ ಬಲೆನೊ ಕಾರುಗಳು 75ಬಿಹೆಚ್‍ಪಿ ಮತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯಾಗಿ ಸಿವಿಟಿ ಗೇರ್‍ಬಾಕ್ಸ್ ಜೋಡಣೆಯೊಂದಿಗೆ ಪಡೆಯಬಹುದಾಗಿದೆ.

ಹೀಗಾಗಿ ಫೇಸ್‌ಲಿಫ್ಟ್ ಬಲೆನೊ ಕಾರುಗಳು ಸಾಮಾನ್ಯ ಬಲೆನೊ ಕಾರುಗಳಿಂತ ತಾಂತ್ರಿಕವಾಗಿ ಮತ್ತಷ್ಟು ಬಲಿಷ್ಠವಾಗಿರಲಿದ್ದು, ಹೊಸ ನಿಯಮಾವಳಿಗೆ ಅನುಸಾರವಾಗಿ ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರಿನ ಎಂಜಿನ್ ಅಭಿವೃದ್ಧಿ ಮಾಡಲಾಗಿದೆ.

ಸುರಕ್ಷಾ ಸಾಧನಗಳು
2019ರ ಹೊಸ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫ್ರಂಟ್ ಪ್ಯಾಸೆಂಜರ್ ಸೀಟ್‍ಬೆಲ್ಟ್ ರಿಮೈಂಡರ್ ಸಿಸ್ಟಂ, ಹೈ-ಸ್ಪೀಡ್ ಅಲರ್ಟ್ ಸಿಸ್ಟಂ, ರಿವರ್ಸ್ ಮಾರ್ಕಿಂಗ್ ಸೆನ್ಸಾರ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಗಿದ್ದು, ಜೊತೆಗೆ ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ, ಪ್ರೀ ಟೆನ್ಷರ್ಸ್ ಮತ್ತು ಫೋರ್ಸ್ ಲಿಮಿಟರ್ ಸೀಟ್‍ಬೆಲ್ಟ್ಸ್ ಹಾಗು ಐಎಸ್ಒ ಚೈಲ್ಡ್ ಸೀಟ್ ಆಂಕರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಲಭ್ಯವಿರುವ ಬಣ್ಣಗಳು
ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರು ಫೀನಿಕ್ಸ್ ರೆಡ್, ಮ್ಯಾಗ್ಮಾ ಗ್ರೇ, ಪರ್ಲ್ ಆರ್ಕಟಿಕ್ಟ್ ವೈಟ್, ಪ್ರೀಮಿಯಂ ಸಿಲ್ವರ್, ನೆಕ್ಸಾ ಬ್ಲೂ ಮತ್ತು ಆಟಮ್ನ್ ಆರೆಂಜ್ ಎಂಬ 6 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಬಿಡುಗಡೆ ಮಾಡಿದ ಪ್ರೀಮಿಯಂ ಕಾರುಗಳಲ್ಲಿ ಬಲೆನೊ ಕೂಡಾ ಒಂದು ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದ ಬಲೊನೊ ಕಾರುಗಳು ಇದೀಗ ಫೇಸ್‍ಲಿಫ್ಟ್ ಮಾದರಿಯಲ್ಲಿ ಬಿಡಗಡೆಯಾಗಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡೈ ಐ20 ಎಲೈಟ್ ಮತ್ತು ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








