ದೇಶಿಯ ಮಾರುಕಟ್ಟೆಗೆ ರೀ ಎಂಟ್ರಿ ಕೊಟ್ಟ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್
ಹೊಸ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2019ರ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ಅನ್ನು ಜೆ-ಅಪ್ಷನಲ್ ಮತ್ತು ವಿ-ಅಪ್ಷನಲ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದ ಎಕ್ಸ್ ಶೋ ರೂಂ ಪ್ರಕಾರ ಆರಂಭಿಕ ಬೆಲೆ ರೂ.8.65 ಲಕ್ಷ ದರ ವಾಗಿದೆ.

ಟೊಯೊಟಾ ಯಾರಿಸ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 106 ಬಿಎಚ್‍ಪಿ ಪವರ್ ಮತ್ತು 140 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಿದೆ. ಹೊಸ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ನಲ್ಲಿ ಜೆ-ಅಪ್ಷನಲ್ ಕಾರು ಮ್ಯಾನುವಲ್ ಮತ್ತು ಸಿಪಿಟಿ ಎರಡು ಅಫರ್ ಅನ್ನು ನೀಡುತ್ತಿದೆ. ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಮ್ಯಾನುವಲ್ ರೂಪಾಂತರ ಕಾರಿಗೆ ರೂ. 8.65 ಲಕ್ಷ ಆದರೆ ಸಿವಿಟಿ ಹೊಂದಿರುವ ಕಾರಿಗೆ ರೂ.9.35 ಲಕ್ಷ ದರ ಹೊಂದಿದೆ.

ಹೊಸ ವಿ-ಅಪಕ್ಷನಲ್ ಕಾರಿನಲ್ಲಿಯೂ ಸಹ ಮ್ಯಾನುವಲ್ ಮತ್ತು ಸಿವಿಟಿ ಈ ಎರಡು ಆಯ್ಕೆಗಳನ್ನು ಹೊಂದಿದ್ದು, ಡ್ಯುಯಲ್ ಟೋನ್ ಎಕ್ಸ್ಟೀರಿಯರ್ ಮತ್ತು ಹೊಸದಾಗಿ ವಿನ್ಯಾಸ ಮಾಡಲಾದ ಡೈಮಂಡ್ ಕಟ್ ಅಲಾಯ್ ವ್ಹೀಲ್ ಅನ್ನು ಜೋಡಿಸಲಾಗಿದೆ. ವಿ-ಅಪಕ್ಷನಲ್ ಮ್ಯಾನುವಲ್ ಅಥವಾ ಸಿವಿಟಿ ಆಯ್ಕೆಯನ್ನು ಹೊಂದಿರುವ ರೂಪಾಂತರ ಕಾರಿಗೆ ಭಾರತೀಯ ಶೋ ರೂಂ ಪ್ರಕಾರ ರೂ.11.97 ದರ ಹೊಂದಿದ್ದು, ಎರಡು ಆಯ್ಕೆಯನ್ನು ಹೊಂದಿರುವ ಕಾರಿಗೆ ರೂ.13.17 ಲಕ್ಷ ದರವಿದೆ.

ಹೊಸ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ಹೊಸ ವೈಶಿಷ್ಟ್ಯಗಳನ್ನು ಹೊತ್ತು ತಂದಿದೆ, ಜೊತೆಗೆ ಸುರಕ್ಷತೆಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗಿದೆ. ಕಾರಿಗೆ ಹೊಸ ಫೀಚರ್ಸ್‍ಗಳನ್ನು ಅಳವಡಿಸಿದ್ದು, ಅವುಗಳು ಡ್ಯುಯಲ್ ಟೋನ್, ಎಕ್ಸ್ಟಿರಿಯರ್ ಬಣ್ಣ, ಪಿಯಾನೋ ಬ್ಲ್ಯಾಕ್ ಫಿನಿಶ್ ಗ್ರೀಲ್, ಒಆರ್‍ವಿಎಂ ಮತ್ತು ಫಾಗ್ ಬೆಜೆಲ್, ಪ್ರೋಜೆಕ್ಟರ್ ಹೆಡ್‍ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‍ಎಲ್ಎಸ್, ಒಆರ್‍ವಿಎಂ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ ಮತ್ತು ಡೈಮೆಂಡ್ ಕಟ್ ಅಲಾಯ್ ವ್ಹೀಲ್ ಹೊಂದಿದೆ.

ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ಒಳಾಂಗಣ ಭಾಗದಲ್ಲಿ ಹಲವಾರು ನವೀಕರಣಗಳೊಂದಿಗೆ ಲಗ್ಗೆ ಇಟ್ಟಿದೆ. ಇದರಲ್ಲಿ ಪ್ರೀಮಿಯಂ ಲೆದರ್ ಸೀಟ್, ಲೆದರ್‍ನಿಂದ ಕೂಡಿದ ಸ್ಟ್ರೀರಿಂಗ್ ವ್ಹೀಲ್ ಮತ್ತು ಗೇರ್ ಶಿಫ್ಟ್ ನಾಬ್, ಇನ್ಸ್ಟ್ರುಮೆಂಟ್ ಪ್ಯಾನೆಲ್, 7.0 ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಜೊತೆಗೆ ಎಚ್‍ಡಿಎಂಐ, ವೈಫೈ, ಯುಎಸ್‍ಬಿ, ರೂಫ್-ಮೌಂಟೆಡ್ ಸೌಲಭ್ಯ ಒದಗಿಸಲಾಗಿದೆ.

ಕಂಪನಿಯು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ 7 ಏರ್‍ಬ್ಯಾಗ್, ಹಿಲ್-ಸ್ಟಾರ್ಟ್ ಕಂಟ್ರೋಲ್, ಎಬಿಎಸ್ ಮತ್ತು ಇಬಿಡಿ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಸೌಲಭ್ಯವನ್ನು ನೀಡಿದೆ.

ಟೊಯೊಟಾ ಯಾರಿಸ್ 10 ಲಕ್ಷಕ್ಕಿಂತ ಕಡಿಮೆ 7 ಸ್ಪೀಡ್ ಸಿವಿಟಿ ಆಯ್ಕೆಯನ್ನು ಟೊಯೊಟಾ ಹಲವು ದಾಖಲೆ ಮೂಲಕ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡಿದೆ. ನಾವು ಸ್ವಿಕರಿಸಿದ ಪ್ರತಿಕ್ರಿಯೆ ಮತ್ತು ಗ್ರಾಹಕರ ನಿರೀಕ್ಷೆ ತಕ್ಕಂತೆ ಟೊಯೊಟಾ ಯಾರಿಸ್ ಬಿಡುಗಡೆಗೊಳಿದ್ದೇವೆ. ಈ ಕಾರು ಸುರಕ್ಷತೆ ಮತ್ತು ಗ್ರಾಹಕರ ಸೌಕರ್ಯಗಳಿಗೆ ಧಕ್ಕೆಯಾಗದಂತೆ ಹಣದ ಮೌಲ್ಯಕ್ಕೆ ಹೊಂದಿರುವ ಸೆಡಾನ್ ಕಾರು ಇದಾಗಿದೆ. ಗ್ರಾಹಕರ ವೈಯಕ್ತಿಕ ಅಗತ್ಯತೆಗಳು ಮತ್ತು ಆದ್ಯತೆಗಳ ಆಧಾರದ 3 ಅಥವಾ 7 ಏರ್‍ಬ್ಯಾಗ್‍ಗಳ ಆಯ್ಕೆಗಳನ್ನು ನೀಡುತ್ತದೆ. ಈ ಕಾರು ಸುಧಾರಿತ ವೈಶಿಷ್ಟ್ಯಗಳು, ಸುರಕ್ಷತೆ, ಐಷಾರಾಮಿ ಲುಕ್, ವಿನ್ಯಾಸ ಮತ್ತು ಸೌಕರ್ಯಗಳಿಂದ ಗ್ರಾಹಕರ ಗಮನಸೆಳೆಯುವ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಎಂಡಿ, ಎನ್ ರಾಜಾ ಹೇಳಿದ್ದಾರೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ಬುಕ್ಕಿಂಗ್ ಆರಂಭಗೊಂಡಿದ್ದು, ಟೊಯೊಟಾ ಡೀಲರ್‍ಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಡ್ಯುಯಲ್-ಟೋನ್ ಬಣ್ಣದ ಹೊರತಾಗಿ, ಸಿಂಗಲ್ ಟೋನ್ ಬಣ್ಣಗಳ ಶ್ರೇಣೆಯನ್ನು ಸಹ ಮುಂದುವರಿಸಲಿದೆ. ಇದರಲ್ಲಿ ವೈಲ್ಡ್ ಫೈರ್ ರೆಡ್, ಫ್ಯಾಂಟಮ್ ಬ್ರೌನ್, ಪರ್ಲ್ ವೈಟ್, ಸೂಪರ್ ವೈಟ್, ಸ್ವಿಲರ್ ಮತ್ತು ಗ್ರೇ ಬಣ್ಣಗಳು ಸೇರಿವೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಕಳೆದ ವರ್ಷ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದರು, ಟೊಯೋಟಾ ಕಂಪನಿಯ ಸೆಡಾನ್ ವಿಭಾಗದಲ್ಲಿ ಎಟಿಯೋಸ್ ಮತ್ತು ಕೊರೊಲ್ಲಾ ನಂತರದ ಸ್ಥಾನದಲ್ಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ರಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ. ಹೊಸ ಪೇಸ್‍ಲಿಫ್ಟ್ ಆವೃತ್ತಿಯ ಬಿಡುಗಡೆಯೊಂದಿಗೆ, ಟೊಯೊಟಾ ಹೊಸ ಸೆಡಾನ್ ವಿಭಾಗದಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಮೂಲಕ ಮಾರಾಟದಲ್ಲಿ ಸುಧಾರಣೆ ಮಾಡುವ ಪ್ಲಾನ್ ಅನ್ನು ಹೊಂದಿದೆ.


Click it and Unblock the Notifications