ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಪರಿಸರದ ಮೇಲೆ ಮಾನವನ ನಿರಂತರ ದಬ್ಬಾಳಿಕೆಯ ಪರಿಣಾಮ ಜಾಗತಿಕ ತಾಪಮಾನವು ಗರಿಷ್ಠ ಮಟ್ಟದತ್ತ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತುತ್ತಿರುವ ಬಿಸಿಯ ಧಗೆಯು ಅನೇಕ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ. ಹೀಗಾಗಿ ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ತನ್ನ ನೆಚ್ಚಿನ ಗ್ರಾಹಕರಿಗೆ ನಿಸ್ಸಾನ್ ಮತ್ತು ದಟ್ಸನ್ ಸಂಸ್ಥೆಯು ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಕಳೆದ ಕೆಲ ವರ್ಷಗಳಿಂದ ಬೇಸಿಗೆ ಅವಧಿಯಲ್ಲಿ ಜಾಗತಿಕ ತಾಪಮಾನವು ಗರಿಷ್ಠ ಮಟ್ಟದಲ್ಲಿ ದಾಖಲಾಗುತ್ತಿದ್ದು, ದೇಶದ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಹೀಗಿರುವಾಗ ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ಹವಾ ನಿಯಂತ್ರಣ(ಎಸಿ) ಬಳಕೆಯು ಇಂದು ಅತಿಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದು ಸಹ ತಾಪಮಾನ ಏರಿಕೆಗೆ ಪರೋಕ್ಷ ಕಾರಣವಾಗಿದ್ದರೂ ಕೂಡಾ ಎಸಿ ಬಳಕೆ ದಿನನಿತ್ಯದ ಬಳಕೆಯಲ್ಲಿ ಒಂದಾಗಿದ್ದು, ತನ್ನ ಗ್ರಾಹಕರಿಗೆ ನಿಸ್ಸಾನ್ ಮತ್ತು ದಟ್ಸನ್ ಸಂಸ್ಥೆಗಳು ಉಚಿತವಾಗಿ ಕಾರ್ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ ಮಾಡಿವೆ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಬೇಸಿಗೆ ಅವಧಿಯಲ್ಲಿ ಕಾರು ಚಾಲನೆಗೆ ಅತಿಅವಶ್ಯಕವಾಗಿ ಬೇಕಿರುವ ಎಸಿ ವಿಭಾಗದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ದೇಶಾದ್ಯಂತ ಹರಡಿಕೊಂಡಿರುವ ನಿಸ್ಸಾನ್ ಮತ್ತು ದಟ್ಸನ್ ಅಧಿಕೃತ ಡೀಲರ್ಸ್‌ಗಳಲ್ಲಿ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಲಭ್ಯವಿರಲಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಬಗೆಗೆ ನಿಸ್ಸಾನ್ ಸಂಸ್ಥೆಯು ಮಾಹಿತಿ ಹಂಚಿಕೊಂಡಿದ್ದು, ಇದೇ ತಿಂಗಳು ಏಪ್ರಿಲ್ 15ರಿಂದ ಮೇ 31ರ ತನಕ ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರು ಎಸಿ ಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಉಚಿತವಾಗಿ ಸೇವೆ ಪಡೆದುಕೊಳ್ಳಬಹುದು.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಮೋಟಾರ್ಸ್ ಇಂಡಿಯಾ ವಿಭಾಗದ ಜನರಲ್ ಮ್ಯಾನೆಜರ್ ಅತುಲ್ ಅಗರ್‌ವಾಲ್ ಅವರು, ಗ್ರಾಹಕರ ಆದ್ಯತೆ ತಕ್ಕಂತೆ ನಿಸ್ಸಾನ್ ಸಂಸ್ಥೆಯು ಈ ಬಾರಿ ಕಾರ್ ಎಸಿಗೆ ಸಂಬಂಧಿಸಿ ಉಚಿತ ಕಾರ್ಯಾಗಾರ ತೆರೆದಿದ್ದು, ಬೇಸಿಗೆ ಅವಧಿಯಲ್ಲಿ ಮಾಲೀಕರು ತಮ್ಮ ಕಾರುಗಳನ್ನು ಸುಸ್ಥಿತಿಯಲ್ಲಿಡಲು ಇದೊಂದು ಉತ್ತಮ ಆಫರ್ ಎಂದಿದ್ದಾರೆ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಇನ್ನು ನಿಸ್ಸಾನ್ ಅಂಗಸಂಸ್ಥೆಯಾಗಿರುವ ದಟ್ಸನ್ ಸಂಸ್ಥೆಯು ಸದ್ಯ ಭಾರತದಲ್ಲಿ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನಿಸ್ಸಾನ್ ಸಂಸ್ಥೆಯು ಕೂಡಾ ಕಿಕ್ಸ್ ಕಾರಿನ ಮೂಲಕ ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ನಿಸ್ಸಾನ್ ಸಂಸ್ಥೆಯು ಉತ್ತಮವಾದ ಕಾರು ಉತ್ಪನ್ನಗಳನ್ನು ಹೊಂದಿದ್ದರೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಮಟ್ಟದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಅಂಗಸಂಸ್ಥೆಯಾದ ದಟ್ಸನ್ ಸಂಸ್ಥೆಗಿಂತಲೂ ಕಡಿಮೆ ಕಾರು ಮಾರಾಟ ಹೊಂದಿದ್ದ ನಿಸ್ಸಾನ್ ಸಂಸ್ಥೆಗೆ ಇದೀಗ ಕಿಕ್ಸ್ ಕಾರು ಮರುಜೀವ ಕೊಟ್ಟಿದೆ.

MOST READ: 19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಜನವರಿ 22ರಂದು ಭಾರತದಲ್ಲಿ ಬಿಡುಗಡೆಯಾಗಿರುವ ಕಿಕ್ಸ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ನೀರಿಕ್ಷೆಗೂ ಮೀರಿ ಬೇಡಿಕೆ ಗಿಟ್ಟಿಸಿಕೊಂಡಿದ್ದು, ಭಾರತದಲ್ಲಿ ಕಾರು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿದ್ದ ನಿಸ್ಸಾನ್ ಸಂಸ್ಥೆಗೆ ಹೊಸ ಕಿಕ್ಸ್ ಮರುಜೀವ ಕೊಟ್ಟಿದೆ ಎಂದ್ರೆ ತಪ್ಪಾಗುವುದಿಲ್ಲ.

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಕಮಾಲ್ ಮಾಡುತ್ತಿದ್ದು, ಆಕರ್ಷಕ ನೋಟ, ಗಮನಸೆಳೆಯುವ ಎಂಜಿನ್ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಬೆಲೆಗಳೇ ಕಿಕ್ಸ್ ಹೊಸ ಕಾರಿನ ಪ್ರಮುಖ ಹೈಲೆಟ್ಸ್ ಎಂದ್ರೆ ತಪ್ಪಾಗುವುದಿಲ್ಲ.

MOST READ: ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್

ನಿಸ್ಸಾನ್ ಮತ್ತು ದಟ್ಸನ್ ಕಾರು ಮಾಲೀಕರಿಗೆ ಉಚಿತ ಎಸಿ ಚೆಕ್-ಅಪ್ ಕ್ಯಾಂಪ್ ಘೋಷಣೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಕ್ಸ್ ಕಾರುಗಳನ್ನು ಪೆಟ್ರೋಲ್ ವರ್ಷನ್‌ನಲ್ಲಿ ಎರಡು ಮತ್ತು ಡಿಸೇಲ್ ಆವೃತ್ತಿಯಲ್ಲಿ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕಿಕ್ಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.55 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.14.65 ಲಕ್ಷ ಬೆಲೆ ಹೊಂದಿದೆ.

Article Published On: Tuesday, April 16, 2019, 13:34 [IST]
English summary
Nissan India Launches Free AC Check-Up Camp For Nissan & Datsun Cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+