ಇದೇ ವರ್ಷದ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿದೆ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು
ನಿಸ್ಸಾನ್ ಇಂಡಿಯಾ ಸಂಸ್ಥೆಯು ಬಹುದಿನಗಳಿಂದ ತಮ್ಮ ಲೀಫ್ ಎಲೆಕ್ಟ್ರಿಕ್ ಕಾರನ್ನು ದೇಶಿಯ ಮಾರಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲಿದ್ದು, ಈ ಕಾರು ಈಗಾಗಲೇ ವಿದೇಶಿ ಮಾರಕಟ್ಟೆಯಲ್ಲಿ ಮಾರಾಟಗೊಂಡು ಜನಪ್ರೀಯತೆಯನ್ನು ಪಡೆಯುತ್ತಿದೆ. ಅಷ್ಟೇ ಅಲ್ಲದೆಯೆ ನಿಸ್ಸಾನ್ ಸಂಸ್ಥೆಯು ಲೀಫ್ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿರುವ ವಿವಿಧ ರಾಜ್ಯದ ಗವರ್ನರ್‍ಗಳಿಗೆ ಈ ಕಾರನ್ನು ನೀಡಲಾಗಿದೆ.

ನಿಸ್ಸಾನ್ ಇಂಡಿಯಾ ಸಂಸ್ಥೆಯ ಸೇಲ್ಸ್ ನಿರ್ದೇಶಕರಾದ ಹರ್‍ದೀಪ್ ಸಿಂಗ್ ಬ್ರಾರ್‍ರವರು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು 2019ರ ನಾಲ್ಕನೆಯ ತ್ರೈ ಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳುವುದಾಗಿ ಹೆಳಿಕೊಂಡಿದ್ದು, ಎಲ್ಲವೂ ಅಂದುಕೊಂಡದ್ದೆ ಆದಲ್ಲಿ ಲೀಫ್ ಎಲೆಕ್ಟ್ರಿಕ್ ಕಾರು ಈ ವರ್ಷದ ದೀಪಾವಳಿ ಹಬ್ಬದ ಗಡುವಿನಲ್ಲಿ ಬಿಡುಗಡೆಗೊಳ್ಳ್ಳುವ ಸಾಧ್ಯತೆಗಳಿವೆ. ಇನ್ನು ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಸ್ಥೆಯೆಂದೇ ಜನಪ್ರಿಯವಾಗುತ್ತಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಭಾರತದಲ್ಲೂ ತನ್ನ ಯಶಸ್ವಿ ಲೀಫ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಹತ್ತು ಹಲವು ಹೊಸ ಸೌಲಭ್ಯವನ್ನು ಪಡೆದಿರುವ ಈ ಕಾರು ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಸ್ಸಾಸ್ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಹೊಂದಿರುವ ಲೀಫ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಯನ್ನು ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಈ ಕಾರು ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಹಲವು ಐಷಾರಾಮಿ ಕಾರುಗಳನ್ನು ಹಿಂದಿಕ್ಕಿ ಹೊಸ ದಾಖಲೆ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ನಿಸ್ಸಾನ್ ಲೀಫ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆಯು ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಸೆಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್ ಸಂಸ್ಥೆಯು ಇದುವರೆಗೆ ಯಾವುದೇ ಆಟೋ ಉತ್ಪಾದನಾ ಸಂಸ್ಥೆಗಳು ಬಳಸದ ಸುಧಾರಿತ ಮಾದರಿಯ ಎಲೆಕ್ಟ್ರಿಕ್ ಮೋಟಾರ್ ಅನ್ನು ಇದರಲ್ಲಿ ಅಳವಡಿಸಿದೆ.

ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಬರೋಬ್ಬರಿ 400 ಕಿ.ಮೀ ಮೈಲೇಜ್ ನೀಡುವ ಬ್ಯಾಟರಿ ಮಾದರಿಯನ್ನು ಲೀಫ್‌ನಲ್ಲಿ ಅಳವಡಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಹೊಂದಿರುವ ಈ ಕಾರು 380 ಕಿಮಿ ಮೈಲೇಜ್ ರೇಂಜ್ ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿ ಇದಾಗಿದೆ ಎಂದಿದೆ.

ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳಲ್ಲಿ 40kWh ಬ್ಯಾಟರಿ ಬಳಕೆ ಮಾಡಲಾಗಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಮಾಡಲು 8 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತೆ. ಮತ್ತೊಂದು ವಿಶೇಷ ಅಂದ್ರೆ ಕೇವಲ 40 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದ್ದು, 148-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದಲ್ಲದೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಕುರಿತು ಪ್ರಚಾರಕ್ಕಾಗಿ ಎರಡು ಲೀಫ್ ಎಲೆಕ್ಟ್ರಿಕ್ ಕಾರುಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಆಸಕ್ತ ಗ್ರಾಹಕರು ಟೆಸ್ಟ್ ಡ್ರೈವ್ ಮೂಲಕ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅನುಭವ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಚೆನ್ನೈ ಬಳಿ 650 ಎಕರೆ ವಿಸ್ತಿರಣದ ಟ್ರ್ಯಾಕ್ ನಿರ್ಮಾಣ ಮಾಡಿರುವ ನಿಸ್ಸಾನ್ ಸಂಸ್ಥೆಯು ಅಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮತ್ತು ಟೆಸ್ಟ್ ಡ್ರೈವ್ ಕಾರ್ಯವನ್ನು ನಡೆಸುತ್ತಿದೆ.
MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಕಾರು ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ವರದಿಗಳ ಪ್ರಕಾರ ಹೊಚ್ಚ ಹೊಸ ಲೀಫ್ ಕಾರು ಮಾದರಿಯನ್ನು ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯು ರೂ.25 ಲಕ್ಷದಿಂದ ರೂ.30 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಭಾರತದಲ್ಲೇ ಹೊಸ ಕಾರುಗಳು ನಿರ್ಮಾಣವಾದಲ್ಲಿ ಕಾರಿನ ಬೆಲೆಗಳು ಗಣನೀಯವಾಗಿ ತಗ್ಗಬಹುದು ಎನ್ನಲಾಗಿದೆ.
MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಒಟ್ಟಿನಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುತ್ತಿರುವ ಲೀಫ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದ್ದು, ಹ್ಯುಂಡೈ ಸಂಸ್ಥೆಯು ಇಂದು ಬಿಡುಗಡೆ ಮಾಡಿರುವ ಕೋನಾ ಎಲೆಕ್ಟ್ರಿಕ್ ಕಾರಿಗೆ ಲೀಫ್ ಕಾರು ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.


Click it and Unblock the Notifications








