ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ದೆಹಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣವು ವಿಪರೀತವಾಗಿ ಏರಿಕೆಯಾಗಿದೆ. ದೆಹಲಿ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ವಾಹನಗಳ ಸಮ - ಬೆಸ ನಿಯಮವು ಒಂದು.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಈ ನಿಯಮದ ಪ್ರಕಾರ ನಂಬರ್‍‍ಪ್ಲೇಟ್‍‍‍ನಲ್ಲಿ 0,2,4,6,8 ಸಂಖ್ಯೆಯಿಂದ ಕೊನೆಗೊಳ್ಳುವ ವಾಹನಗಳು ತಿಂಗಳಲ್ಲಿ ಬರುವ 2,4,6,8 ಸಮ ಸಂಖ್ಯೆಯ ದಿನಗಳಂದು ರಸ್ತೆಗಿಳಿಯಬೇಕು. ಅದೇ ರೀತಿ 1,3,5,7,9 ಸಂಖ್ಯೆಯಿಂದ ಕೊನೆಯಾಗುವ ವಾಹನಗಳು ತಿಂಗಳಲ್ಲಿ ಬರುವ 1,3,5,7,9,11 ಮುಂತಾದ ದಿನಾಂಕಗಳಂದು ರಸ್ತೆಗಿಳಿಯಬೇಕು.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಕೆಲ ವರ್ಷಗಳ ಹಿಂದೆ ದೆಹಲಿ ಸರ್ಕಾರವು ಈ ನಿಯಮವನ್ನು ಜಾರಿಗೊಳಿಸಿತ್ತು. ಈಗ ದೆಹಲಿಯಲ್ಲಿನ ಮಾಲಿನ್ಯವು ಹದಗೆಟ್ಟಿರುವ ಕಾರಣಕ್ಕೆ ಮತ್ತೊಮ್ಮೆ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಯಮವು ನವೆಂಬರ್ 4ರಿಂದ ನವೆಂಬರ್ 11ರವರೆಗೆ ಜಾರಿಯಲ್ಲಿರಲಿದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಈ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರನ್ವಯ ವಾಹನ ಚಲಾಯಿಸುವ ಮಹಿಳೆಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗುವುದು. ಸಾರಿಗೆ ಇಲಾಖೆಯ ಪ್ರಕಾರ ಖಾಸಗಿ ಸಿ‍ಎನ್‍ಜಿ ವಾಹನಗಳಿಗೆ ವಿನಾಯಿತಿ ನೀಡಲಾಗುವುದಿಲ್ಲ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಸಂಚಾರ ದಟ್ಟಣೆಯ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೂ ಈ ನಿಯಮದಿಂದ ವಿನಾಯಿತಿ ನೀಡಲಾಗುವುದು. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‍ರವರು ಸಾರಿಗೆ ಇಲಾಖೆಯಿಂದ ಸಮ-ಬೆಸ ಸಂಖ್ಯೆಯ ಅನುಷ್ಟಾನಕ್ಕಾಗಿ ಕೆಲವು ಸಲಹೆಗಳನ್ನು ಕೇಳಿದ್ದರು.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳು ಬೆಳಿಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕೆಂದು ಸಾರಿಗೆ ಇಲಾಖೆಯು ಸಲಹೆ ನೀಡಿದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಮಾಲಿನ್ಯದಿಂದಾಗಿ ಹಾಗೂ ಅಕ್ಕ ಪಕ್ಕದ ರಾಜ್ಯಗಳಿಂದ ಉಂಟಾಗುತ್ತಿರುವ ಹೊಗೆಯನ್ನು ನಿಭಾಯಿಸಲು ಬೆಸ-ಸಮ ನಿಯಮವನ್ನು ನವೆಂಬರ್‌ನಲ್ಲಿ ಜಾರಿಗೆ ತರಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದ್ದರು. ಚಳಿಗಾಲದ ಕ್ರಿಯಾ ಯೋಜನೆಯ ಭಾಗವಾಗಿ ಬೆಸ-ಸಮ ಯೋಜನೆಯನ್ನು ಘೋಷಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಇಲಾಖೆ ನೀಡಿದ ಸಲಹೆಗಳನ್ನು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅನುಮೋದಿಸಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಲಹೆಗಳನ್ನು ನೀಡುವ ಮೊದಲು ಇಲಾಖೆಯು ಎಲ್ಲಾ ವರ್ಗದ ವಾಹನಗಳ ಬಗ್ಗೆ ಚರ್ಚೆ ನಡೆಸಿದೆ. ಸುರಕ್ಷತಾ ಕಾರಣಕ್ಕೆ ಮಹಿಳಾ ಚಾಲಕರಿಗೆ ಈ ಯೋಜನೆಯಿಂದ ವಿನಾಯಿತಿ ನೀಡಲಾಗುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಬೆಸ-ಸಮ ಯೋಜನೆಯಿಂದ ಮಹಿಳೆಯರಿಗೆ ವಿನಾಯಿತಿ ನೀಡುವ ಹಿಂದಿನ ಕಾರಣವೆಂದರೆ, ಮಹಿಳೆಯರು ತಮ್ಮ ವಾಹನಗಳಲ್ಲಿ ಸುರಕ್ಷತೆಯ ಭಾವನೆ ಹೊಂದಿದ್ದಾರೆ. ಅವರಿಗೆ ಸುರಕ್ಷಿತ ಸಾರಿಗೆ ವಿಧಾನವನ್ನು ತೆಗೆದುಕೊಳ್ಳುವ ಅವಕಾಶವನ್ನು ನೀಡಬೇಕು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಮಹಿಳೆಯರು ಚಾಲನೆ ಮಾಡುವ ಎಲ್ಲಾ ವಾಹನಗಳು, ಮಹಿಳಾ ಪ್ರಯಾಣಿಕರನ್ನು ಹೊಂದಿರುವ ವಾಹನಗಳು ಹಾಗೂ ಸ್ಕೂಲ್ ಯೂನಿಫಾರಂನಲ್ಲಿರುವ 12 ವರ್ಷ ವಯಸ್ಸಿನ ಶಾಲಾ ಮಕ್ಕಳಿರುವ ವಾಹನಗಳಿಗೆ ಈ ಯೋಜನೆಯಿಂದ ವಿನಾಯಿತಿ ನೀಡಬೇಕು ಎಂದು ಸಾರಿಗೆ ಇಲಾಖೆ ಸಲಹೆ ನೀಡಿದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಬೆಸ-ಸಮ ಯೋಜನೆಯ ಹಿಂದಿನ ಆವೃತ್ತಿಗಳಲ್ಲಿ ಎಲ್ಲಾ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಸಾರಿಗೆ ಇಲಾಖೆಯು ಈ ಬಾರಿ ವಿಭಿನ್ನವಾಗಿ ಯೋಚಿಸಿದ್ದು, ದ್ವಿಚಕ್ರ ವಾಹನಗಳಿಗೆ ಸಂಚಾರ ದಟ್ಟಣೆಯ ಸಮಯವಾದ ಬೆಳಿಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 5ರಿಂದ ರಾತ್ರಿ 8ರವರೆಗೆ ಮಾತ್ರ ವಿನಾಯಿತಿ ನೀಡಬೇಕೆಂದು ಸೂಚಿಸಿದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲು ಕಾರಣವೆಂದರೆ, ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ಹೊರುವಷ್ಟು ಸಮರ್ಥವಾಗಿಲ್ಲ. ದೆಹಲಿಯಲ್ಲಿ 70 ಲಕ್ಷ ದ್ವಿಚಕ್ರ ವಾಹನಗಳಿವೆ. ವಿನಾಯಿತಿ ನೀಡದಿದ್ದರೆ 35 ಲಕ್ಷಕ್ಕೂ ಹೆಚ್ಚು ಸವಾರರು ಹಾಗೂ ಲಕ್ಷಾಂತರ ಹಿಂಬದಿ ಸವಾರರು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕಾಗುತ್ತದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಈ ದಟ್ಟಣೆಯನ್ನು ನಿಭಾಯಿಸಲು ಮೆಟ್ರೋ ಹಾಗೂ ಇತರ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಸಿದ್ಧವಾಗಿಲ್ಲ. ಎಲ್ಲಾ ಸಿಎನ್‌ಜಿ ವಾಹನಗಳಿಗೆ ಕಳೆದ ಬಾರಿ ವಿನಾಯಿತಿ ನೀಡಲಾಗಿತ್ತು. ಆದರೆ ಈ ಬಾರಿ ನಿಯಮವು ಬದಲಾಗಬಹುದು. ಕಮರ್ಷಿಯಲ್ ಅಲ್ಲದ ಸಿಎನ್‌ಜಿ ವಾಹನಗಳನ್ನು ಬೆಸ-ಸಮ ನಿರ್ಬಂಧಗಳಿಂದ ಹೊರಗಿಡಬಾರದು ಎಂದು ಸಾರಿಗೆ ಇಲಾಖೆ ಸೂಚಿಸಿದೆ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಈ ಹಿಂದೆ ಈ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಸಿಎನ್‌ಜಿ ವಾಹನಗಳನ್ನು ದೂರದಿಂದ ಗುರುತಿಸುವುದು ಸಂಚಾರ ಪೊಲೀಸ್ ಸಿಬ್ಬಂದಿಗೆ ಕಷ್ಟವಾಗುತ್ತದೆ. ಏಕೆಂದರೆ ವಾಹನವು ಹತ್ತಿರ ಬರುವವರೆಗೂ ಗ್ಲಾಸುಗಳ ಮೇಲಿರುವ ಸಿಎನ್‌ಜಿ ಸ್ಟಿಕ್ಕರ್‌ಗಳು ಕಣ್ಣಿಗೆ ಕಾಣುವುದಿಲ್ಲ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ರಾಷ್ಟ್ರಪತಿ, ಉಪಾಧ್ಯಕ್ಷ, ಪ್ರಧಾನಿ, ಕೇಂದ್ರ ಸಚಿವರು, ಭಾರತದ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಪಾಲರು, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ರಾಯಭಾರಿಗಳ ವಾಹನಗಳು ಹಾಗೂ ರಕ್ಷಣಾ ಸಚಿವಾಲಯದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗುವುದು.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ದೆಹಲಿ ಸರ್ಕಾರವು 2016ರ ಜನವರಿ ಮತ್ತು ಏಪ್ರಿಲ್‍ನಲ್ಲಿ ಈ ನಿಯಮವನ್ನು ಜಾರಿಗೆ ತಂದಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದ್ವಿಚಕ್ರ ವಾಹನಗಳನ್ನು ಈ ಯೋಜನೆಯಿಂದ ವಿನಾಯಿತಿ ನೀಡಲು ನಿರಾಕರಿಸಿದ ನಂತರ 2017ರ ಡಿಸೆಂಬರ್‌ನಲ್ಲಿ ಜಾರಿಗೆ ತರಲು ನಿರ್ಧರಿಸಿದ್ದ ಯೋಜನೆಯನ್ನು ರದ್ದುಗೊಳಿಸಬೇಕಾಯಿತು.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಹಿಳಾ ಚಾಲಕರು, ಅವರಲ್ಲಿ ಮಕ್ಕಳಿರುವ ವಾಹನಗಳು ಮತ್ತು ಮಿಲಿಟರಿ ನಂಬರ್ ಪ್ಲೇಟ್‍‍ಗಳನ್ನು ಹೊಂದಿರುವ ಎಲ್ಲಾ ವಾಹನಗಳಿಗೆ ಈ ನಿಯಮದಿಂದ ವಿನಾಯಿತಿ ನಿಯಮವು ಸರಿಯಾಗಿದೆ. ಆದರೆ ವಿನಾಯಿತಿ ನೀಡುವ ಇತರ ನಿಯಮಗಳು ಸರಿಯಲ್ಲ.

ಮಹಿಳಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ದೆಹಲಿ ಸರ್ಕಾರ

ದೇಶ ಹಾಗೂ ರಾಜ್ಯಗಳ ನಾಯಕರಿಗೆ ಈ ನಿಯಮದಿಂದ ವಿನಾಯಿತಿ ನೀಡುವುದು ಸರಿಯಲ್ಲ. ಅವರೂ ಸಹ ಈ ದೇಶದ ನಾಗರಿಕರಾಗಿದ್ದಾರೆ. ಇದರ ಜೊತೆಗೆ ಸರ್ಕಾರಿ ಕಚೇರಿಗಳ ಕೆಲಸದ ಸಮಯದ ಬದಲಾವಣೆಯಲ್ಲಿಯೂ ಯಾವುದೇ ಅರ್ಥವನ್ನು ಕಾಣುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಅರ್ಧದಷ್ಟು ಸಮಯ ಇರುವುದಿಲ್ಲ ಮತ್ತು ಉಳಿದಾರ್ಧದಲ್ಲಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

Most Read Articles

Kannada
English summary
Delhi Odd Even Scheme: Government Announces Exemptions For Women Drivers & Two-Wheelers - Read in Kannada
Story first published: Saturday, October 12, 2019, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more