ದಶಕದ ಹಿಂದಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ವಾಹನ ಮಾಲೀಕರು ಒಂದು ಹೊಸ ವಾಹನ ಖರೀದಿ ಮಾಡಿ ಸುಮಾರು ವರ್ಷಗಳಾದರೂ ಸಹ, ಮನೆಗೆ ಹೊಸ ವಾಹನ ಬಂದಾದ ಮೇಲೆಯೂ ಇನ್ನು ಅದೇ ವಾಹನವನ್ನು ತಮ್ಮತ್ತ ಇರಿಸಿಕೊಳ್ಳಲು ಇಷ್ಟ ಪಡುತ್ತಾರೆ. ಅವುಗಳು ನೋಡಲು ಕೊಂಛ್ಹ ತುಕ್ಕು ಹಿಡಿದಿದ್ದರೂ ಸಹ ಅವುಗಳೊಂದಿಗಿನ ನೆನಪನ್ನು ತಾವು ಮರೆಯಲಾಗದೆಯೆ ಅವುಗಳಿಗೆ ಪದೆ ಪದೆ ರಿಪೇರಿ ಮಾಡಿಸುತ್ತಿರುತ್ತಾರೆ.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಅಂತಹ ಕಾರುಗಳ ವಿಚಾರದ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಆದರೆ ಇಂದು ನಾವು 10 ವರ್ಷದ ಹಿಂದೇ ಖರೀದಿ ಮಾಡಲಾದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಮಾರಲು ಇಷ್ಟವಾಗದ ಕಾರಣ ಅದನ್ನು ಹೊಸತ್ತನ್ನಾಗಿ ಮಾಡಿಸಿಕೊಂಡಿರುವುದರ ಬಗ್ಗೆ ಹೇಳಲಿದ್ದೇವೆ. ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರು ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕಾರಾಗಿದ್ದು, ಸಧ್ಯಕ್ಕೆ ಈ ಕಾರಿನ ಮೂರನೆಯ ತಲೆಮಾರಿನ ಮಾದರಿಯು ಮಾರಾಟವಾಗುತ್ತಿದೆ.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಮಾರುತಿ ಸುಜುಕಿ ಸುಜುಕಿ ಸಂಸ್ಥೆಯಲ್ಲಿನ ಹಾರ್ಟ್‍‍ಟೆಕ್ಟ್ ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಾಣವಾದ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರುಗಳು 2018ರ ಬೆಸ್ಟ್ ಕಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯನ್ನು ಸಹ ತನ್ನದಾಗಿಸಿಕೊಂಡಿತ್ತು. ಹೀಗಿರುವಾಗ ಸುಮಾರು 9 ವರ್ಷದ ಹಿಂದೆ ಸ್ವಿಫ್ಟ್ ಕಾರನ್ನು ಖರೀದಿ ಮಾಡಿದ ಮಾಲೀಕನೊಬ್ಬ ತನ್ನ ಹಳೆಯ ಕಾರನ್ನು ಹೊಸ ಕಾರಿನ ಹಾಗೆ ಮಾರ್ಪಾಡು ಮಾಡಿದ್ದಾನೆ.

ವಿನಯ್ ಕಪೂರ್‍‍ರವರ ವರದಿ ಪ್ರಕಾರ ದಶಕದ ಹಿಂದೆ ಖರೀದಿ ಮಾಡಲಾದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ತುಕ್ಕು ಹಿಡಿದ ಹಾಗೆ, ಪೆಯಿಂಟ್ ಎಲ್ಲವೂ ಮರ್ಯಾದ ಹಾಗೆ ಮತ್ತು ಕಾರಿನ ಬಹುತೇಕ ಭಾಗಗಳಲ್ಲಿ ಗೆರೆಗಳಿದ್ದವು. ಇದಕ್ಕೆ ದೃಢೀಕರಣವೆಂದರೆ ಈ ವಿಡಿಯೋ. ಇದನ್ನು ನೋಡಿದರೆ ನಿಮಗೆ ತಿಳಿಯುತ್ತದೆ ಈ ಹಳೆಯ ಕಾರು ಯಾವ ಪರಿಸ್ಥಿತಿಯಲ್ಲಿತ್ತು ಅಂತ.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಹಳೆಯ ಸ್ವಿಫ್ಟ್ ಕಾರನ್ನು ಹೊಸತರಂತೆ ಕಾಣಲು ಮೊದಲಿಗೆ ಕಾರಿನ ಹಳೆದ ಪೆಯಿಂಟ್ ಅನ್ನು ಮರೆಯಾಗಿಸಿ ಕೆಳಭಾಗವನ್ನು ಮೃದುವಾಗಿಸಿದರು. ಕಾರಿನಲ್ಲಿದ್ದ ಇನ್ನಿತರೆ ಗೆರಗಳನ್ನು ಮೆಕಾನಿಕ್‍ಗಳು ಬಹಳ ಅಚ್ಚುಕಟ್ಟಾಗಿ ಅವುಗಳು ಮತ್ತೆ ಕಾಣದಿರುವ ಹಾಗೆ ಮಾಡಿದ್ದರು.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಇದಾದ ನಂತರ ಹಳೆಯ ಕಾರಿಗೆ ಪ್ರೈಮ್ ಪೆಯಿಂಟ್ ಅನ್ನು ನೀಡಲಾಗಿದ್ದು, ಯಾವುದೇ ರೀತಿಯಾದ ತುಕ್ಕು ಭಾಗಗಳು ಮತ್ತೆ ಕಾಣದಿರುವ ಹಾಗೆ ಮಾಡಲಾಯಿತು. ಕಾರಿನ ಬೇಸ್ ಕೋಟ್‍ಗೆ ಸಹ ಪೆಯಿಂಟ್ ಅನ್ನು ನೀಡಲಾಗಿದ್ದು, ಹೊಸ ತಲೆಮಾರಿನ ಸ್ವೊಹ್ಟ್ ಕಾರಿನ ಹಾಗೆ ಕಾಣಿಸುವಲ್ಲಿ ಸಹಕಾರಿಯಾಗಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಹಾಗೆಯೆ ಕಾರಿನ ಮೇಲ್ಭಾಗ ಅಂದರೆ ಸಿ-ಪಿಲ್ಲರ್ ಹಾಗು ರೂಫ್ ಟಾಪ್‍ಗೆ ಸಹ ಕಪ್ಪು ಬಣ್ಣವನ್ನು ನೀಡಲಾಗಿದ್ದು, ಒಟ್ಟಾರೆಯಾಗಿ ಸಧ್ಯ ಮಾರಾಟವಾಗಿತ್ತಿರುವ ಹೊಸ ತಲೆಮಾರಿನ ಕೆಂಪು ಮತ್ತು ಕಪ್ಪು ಬಣ್ಣದ ಡ್ಯುಯಲೆ ಟೊನ್ ಬಣ್ಣ ಪಡೆದ ಸ್ವಿಫ್ಟ್ ಕಾರಿನಂತೆಯೆ ಕಾಣಿಸುತ್ತದೆ.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ದಶಕದ ಹಿಂದಿನ ಸ್ವಿಫ್ಟ್ ಕಾರಿನ ಹೊರ ಭಾಗದಲ್ಲಿ ಮಾತ್ರವಲ್ಲದೆಯೆ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಒಳಭಾಗದಲ್ಲಿನ ಫ್ಲೋರ್ ಮತ್ತು ಇಂಟೀರಿಯರ್ ಡೋರ್‍‍ಗಳಿಗೆ ಆಂಟಿ-ರಸ್ಟ್ ಪೆಯಿಂಟ್ ಕೋಟ್ ಅನ್ನು ನೀಡಲಾಗಿದೆ. ವಿಡಿಯೋವನ್ನು ಗಮನಿಸಿದ್ದಲ್ಲಿ, ಎಷ್ಟು ಅಚ್ಚುಕಟ್ಟಾಗಿ ಪೆಯಿಂಟ್ ಕೆಲಸವನ್ನು ಮಾಡಲಾಗಿದೆ ಎಂದು ತಿಳಿಯುತ್ತದೆ.

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಹಳೆಯ ಸ್ವಿಫ್ಟ್ ಕಾರಿನ ಎ ಮತ್ತು ಬಿ ಪಿಲ್ಲರ್‍‍ಗೆ ಕೆಂಪು ಬಣ್ಣವನ್ನು ನೀಡಲಾಗಿದ್ದು, ಸಿ ಪಿಲ್ಲರ್‍‍ಗೆ ಮಾತ್ರ ಕಪ್ಪು ಬಣ್ಣವನ್ನು ನೀಡಲಾಗಿದೆ. ಹೀಗೆ ನೀಡಲದ ಕಾರಣ ಈ ಕಾರು ಫ್ಲೋಟಿಂಗ್ ಮಾದರಿಯ ರೂಫ್ ರೈಲ್ ಅನ್ನು ಪಡೆದುಕೊಂಡಿರುವ ಹಾಗೆ ಕಾಣಿಸುತ್ತದೆ. ಕಾರಿನ ಮಿರರ್‍‍ಗಳನ್ನು ಸಹ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

MOST READ: ಪಾರ್ಕಿಂಗ್ ಮಾಡಲಾದ ಕಾರುಗಳ ಮೇಲೆ ಪುಂಡರಿಂದ ಆಸಿಡ್‍ ದಾಳಿ..!

ದಶಕದ ಹಿಂದಿನ ಸ್ವಿಫ್ಟ್ ಕಾರು ಹೊಸ ತಲೆಮಾರಿನ ಕಾರಿನ ಹಾಗೆ ಹೇಗೆ ಮಾರ್ಪಾಡಾಗಿದೆ ನೋಡಿ

ಇಷ್ಟೆ ಅಲ್ಲದೆಯೆ ಆಫ್ಟರ್ ಮಾರ್ಕೆಟ್ ಆಲ್ ಬ್ಲಾಕ್ ಅಲಾಯ್ ವ್ಹೀಲ್‍‍ಗಳನ್ನು ನೀಡಿರಿವುದು ಸಹ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಹಾಗೆ ಕಾಣಿಸುವಲ್ಲಿ ಸಹಕರಿಸುತ್ತದೆ. ಒಟ್ಟಾರೆಯಾಗಿ ಮೊದಲನೆಯ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರಿನ ಹಾಗೆ ಕಾಣಿಸುವ ಹಾಗೆ ಮಾರ್ಪಾದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹೆಚ್ಚಿನ ವಿವರಗಳಿಗಾಗಿ ನೇರವಾಗಿ ವಿನಯ್ ಕಪೂರ್‍‍ರವನ ಯೂಟ್ಯೂಬ್ ಚಾನಲ್‍‍ಗೆ ಭೇಟಿ ನೀಡಬಹುದಾಗಿದೆ.

Most Read Articles

Kannada
English summary
Old Maruti Suzuki Swift Restored With Anti-Rust Paint Job To Look As New. Read In Kannada
Story first published: Tuesday, May 21, 2019, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X