ಮಾರಾಟದಲ್ಲಿ ಟಾಟಾ ಹ್ಯಾರಿಯರ್ ಹಿಂದಿಕ್ಕಿದ ರೆನಾಲ್ಟ್ ಡಸ್ಟರ್
ರೆನಾಲ್ಟ್ ಡಸ್ಟರ್ ವಾಹನದ ಮಾರಾಟವು ಆಗಸ್ಟ್ ತಿಂಗಳಿನಲ್ಲಿ 58%ನಷ್ಟು ಏರಿಕೆಯನ್ನು ಕಂಡಿದೆ. ರೆನಾಲ್ಟ್ ಕಂಪನಿಯು ಕೆಲ ತಿಂಗಳ ಹಿಂದಷ್ಟೇ ಈ ಎಸ್‍ಯುವಿಯ ನವೀಕೃತ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಆಗಸ್ಟ್ ತಿಂಗಳಿನಲ್ಲಿ ಈ ವಾಹನದ 967 ಯುನಿಟ್‍ಗಳನ್ನು ಮಾರಾಟ ಮಾಡಲಾಗಿದೆ.

ಹೊಸ ರೆನಾಲ್ಟ್ ಡಸ್ಟರ್ ನವೀಕೃತ ಮಾದರಿಯನ್ನು ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ನವೀಕೃತ ಎಸ್‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.7.99 ಲಕ್ಷಗಳಾಗಿದೆ. ನವೀಕೃತ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ ನಂತರ ಡಸ್ಟರ್ ಮಾರಾಟವು ಗಣನೀಯವಾಗಿ ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ, ರೆನಾಲ್ಟ್ ಡಸ್ಟರ್ ನವೀಕೃತ ಎಸ್‍ಯುವಿಯು 58%ನಷ್ಟು ಏರಿಕೆಯನ್ನು ಕಂಡಿದೆ. ಈ ಮೂಲಕ ಮಾರಾಟದಲ್ಲಿ ಟಾಟಾ ಹ್ಯಾರಿಯರ್ ಎಸ್‍ಯುವಿಯನ್ನು ಹಿಂದಿಕ್ಕಿದೆ. ಭಾರತದಲ್ಲಿ ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಎಸ್‍ಯುವಿಯ ಕೇವಲ 635 ಯುನಿಟ್‍ಗಳು ಆಗಸ್ಟ್ ತಿಂಗಳಿನಲ್ಲಿ ಮಾರಾಟವಾಗಿವೆ.

ಹ್ಯಾರಿಯರ್, ಟಾಟಾ ಮೋಟಾರ್ಸ್‌ನ ಜನಪ್ರಿಯ ಕೊಡುಗೆಯಾಗಿದೆ. ಆದರೆ, ಆಟೋ ಮೊಬೈಲ್ ಉದ್ಯಮದಲ್ಲಿನ ನಿಧಾನಗತಿಯ ಪರಿಣಾಮವು ಈ ಎಸ್‍ಯುವಿಯ ಮೇಲಾಗಿದೆ. ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿ ಹೊಸ ಬಗೆಯ ಸ್ಟೈಲಿಂಗ್ ಹಾಗೂ ಹಿಂದಿನ ಮಾದರಿಯ ಎಸ್‍ಯುವಿಗಳಿಗಿಂತ ಹೆಚ್ಚಿನ ಫೀಚರ್‍ಗಳನ್ನು ಹೊಂದಿದೆ.

ಆದರೆ ಹಿಂದಿನ ಮಾದರಿಯಲ್ಲಿದ್ದ ಮೆಕಾನಿಕಲ್ ಅಂಶಗಳನ್ನೇ ಹೊಂದಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ರೆನಾಲ್ಟ್ ಡಸ್ಟರ್, ಕ್ರೋಮ್ ಸ್ಟಡ್ಡ್ ಅಂಶಗಳಿರುವ ಫ್ರಂಟ್ ಗ್ರಿಲ್‌ಗಳನ್ನು ಹೊಂದಿದೆ. ಇದರಿಂದಾಗಿ ಎಸ್‍ಯುವಿಯು ಪ್ರೀಮಿಯಂ ಲುಕ್ ಅನ್ನು ಹೊಂದಲಿದೆ.

ರೆನಾಲ್ಟ್, ಈ ಎಸ್‍ಯುವಿಯಲ್ಲಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಸಹ ನವೀಕರಿಸಿದೆ. ಈಗ ಎಲ್ಇಡಿ ಡಿಆರ್‌ಎಲ್‌ಗಳನ್ನು ಮುಖ್ಯ ಯುನಿಟ್‍ನಲ್ಲಿ ಇಂಟಿಗ್ರೇಟ್ ಮಾಡಲಾಗಿದೆ. ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನವೀಕರಿಸಿದ ಫಾಗ್ ಲ್ಯಾಂಪ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್, ಫಾಕ್ಸ್ ಸ್ಕಫ್ ಪ್ಲೇಟ್ ಹಾಗೂ ಎಲ್‌ಇಡಿ ಟೇಲ್ ಲೈಟ್‌ಗಳಿವೆ.

ಹೊಸ ರೆನಾಲ್ಟ್ ಡಸ್ಟರ್ ನವೀಕೃತ ಎಸ್‍ಯುವಿಯು ಅಪ್‍ಡೇಟೆಡ್ ಕ್ಯಾಬಿನ್ ಅನ್ನು ಸಹ ಹೊಂದಿದೆ. ಇವುಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಡ್ಯಾಶ್ ಬೋರ್ಡ್, ಪರಿಷ್ಕೃತ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಸೆಂಟ್ರಲ್ ಕಂಸೋಲ್ ಮೇಲೆ ಹೊಸ ಟಚ್ ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಡಿಸ್‍ಪ್ಲೇಗಳಿವೆ.
MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಮೆಕ್ಯಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಹೊಸ ರೆನಾಲ್ಟ್ ಡಸ್ಟರ್ ಎಸ್‍ಯುವಿಯಲ್ಲಿ, ಹಳೆಯ ಮಾದರಿಯ ಎಸ್‍ಯುವಿಯಲ್ಲಿದಂತಹ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ಗಳಿವೆ. ಈ ಎರಡೂ ಎಂಜಿನ್‌ಗಳು ಬಿಎಸ್4 ಆಗಿವೆ.
MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬರುವ ಮುನ್ನ ರೆನಾಲ್ಟ್ ಈ ಮಾದರಿಯನ್ನು ಮತ್ತೊಮ್ಮೆ ನವೀಕರಿಸಲಿದೆ. ಈ ಎರಡು ಎಂಜಿನ್‍ಗಳು ಐದು-ಸ್ಪೀಡ್ ಮ್ಯಾನುವಲ್, ಆರು-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿವೆ.
MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍ಗೂ ಬಿತ್ತು ಭಾರೀ ದಂಡ..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ರೆನಾಲ್ಟ್ ಡಸ್ಟರ್, ಭಾರತದ ಮೊದಲ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿ ಆರಂಭದಲ್ಲಿ ಭಾರಿ ಯಶಸ್ಸನ್ನು ಕಂಡಿತು. ಆದರೆ ಹೆಚ್ಚಿನ ಸ್ಪರ್ಧೆಯಿಂದಾಗಿ ಡಸ್ಟರ್‍ನ ಮಾರಾಟ ಸಂಖ್ಯೆ ಕುಸಿಯಿತು. ಈಗ ನವೀಕೃತ ಆವೃತ್ತಿಯ ಎಸ್‍ಯುವಿಯು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications