ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಮೋಟಾರ್ ವೆಹಿಕಲ್ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಹೊಸ ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಈ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ಹಲವು ಕಡೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಈಗ ಇಂತಹದೇ ಮತ್ತೊಂದು ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಟ್ರಾಕ್ಟರ್ ಚಾಲಕನೊಬ್ಬ ಹಲವಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.59,000 ದಂಡ ವಿಧಿಸಲಾಗಿದೆ. ಇಷ್ಟೊಂದು ಪ್ರಮಾಣದ ದಂಡವನ್ನು ಹೊಸ ಕಾಯ್ದೆಯನ್ವಯ ವಿಧಿಸಲಾಗಿದೆ. ಹೊಸ ಕಾಯ್ದೆಯು ಭಾರೀ ಪ್ರಮಾಣದ ದಂಡವನ್ನು ಹೊಂದಿದ್ದು, ವಾಹನಗಳ ಅಪಘಾತ ಪ್ರಮಾಣ ಕಡಿಮೆಯಾಗಿ, ಜನರು ಸುರಕ್ಷತೆಯಿಂದ ಓಡಾಡುವಂತಾಗಲಿ ಎಂಬ ಉದ್ದೇಶವನ್ನು ಹೊಂದಿದೆ.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಕೆಲ ದಿನಗಳ ಹಿಂದಷ್ಟೇ ಸ್ಕೂಟರ್‍ ಸವಾರನಿಗೆ ರೂ.23,000 ದಂಡ ವಿಧಿಸಲಾಗಿತ್ತು. ಈ ನಿಯಮಗಳನ್ನು ಉಲ್ಲಂಘಿಸಿರುವ ಟ್ರಾಕ್ಟರ್ ಚಾಲಕನಿಗೆ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿ ಟ್ರಾಕ್ಟರ್ ಚಲಾಯಿಸುತ್ತಿದ್ದ ಚಾಲಕನಿಗೆ ಗುರುಗ್ರಾಮದ ನ್ಯೂ ಕಾಲೋನಿಯ ಬಳಿ ದಂಡ ವಿಧಿಸಲಾಗಿದೆ.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಈ ಟ್ರಾಕ್ಟರ್ ಚಾಲಕನು 10 ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಚಾಲನೆ, ಆರ್‍‍ಸಿ ಬುಕ್ ಇಲ್ಲದೇ ಚಾಲನೆ, ವಾಹನದ ಫಿಟ್‍‍ನೆಸ್ ಸರ್ಟಿಫಿಕೆಟ್ ಇಲ್ಲದಿರುವುದು, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದಿರುವುದು, ವಾಯು ಮಾಲಿನ್ಯದ ಉಲ್ಲಂಘನೆ, ಅಪಾಯಕಾರಿ ವಸ್ತುಗಳ ಸಾಗಣೆ, ಅಪಾಯಕಾರಿಯಾಗಿ ಚಾಲನೆ ಮಾಡಿರುವುದು.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಪೊಲೀಸರಿಗೆ ಅಗೌರವ ತೋರಿರುವುದು, ಸಿಗ್ನಲ್ ಜಂಪ್ ಹಾಗೂ ವಾಹನದ ಲೈಟ್‍‍ನ ಉಲ್ಲಂಘನೆ ಸೇರಿದಂತೆ ಒಟ್ಟು 10 ನಿಯಮಗಳ ಉಲ್ಲಂಘನೆಗಾಗಿ ರೂ.59,000 ದಂಡ ವಿಧಿಸಲಾಗಿದೆ. ಗುರುಗ್ರಾಮ ಸಂಚಾರಿ ಪೊಲೀಸರು ದಂಡ ವಿಧಿಸಿ ಟ್ರಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಹೊಸ ನಿಯಮಗಳು ಜಾರಿಯಾದ ನಂತರ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದ್ದು, ಟ್ರಾಕ್ಟರ್ ಮೇಲೆ ದಂಡ ವಿಧಿಸಿರುವುದು ಹೊಸ ಸೇರ್ಪಡೆಯಾಗಿದೆ. ಇದು ಗುರುಗ್ರಾಮ ಪೊಲೀಸರು ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವ ಮೂರನೇ ಪ್ರಕರಣವಾಗಿದೆ. ಮೊದಲನೇ ಪ್ರಕರಣದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಆಟೋ ರಿಕ್ಷಾ ಚಾಲಕನಿಗೆ ರೂ.32,500 ದಂಡ ವಿಧಿಸಲಾಗಿತ್ತು.

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಎರಡನೇ ಪ್ರಕರಣದಲ್ಲಿ ದೆಹಲಿ ನಿವಾಸಿಯೊಬ್ಬರಿಗೆ ರೂ.23,000 ದಂಡ ವಿಧಿಸಲಾಗಿತ್ತು. ಆದರೆ ಅವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬೆಲೆ ರೂ.15,000ಗಳಾಗಿತ್ತು. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಲೇ‍ಔಟ್ ಸಂಚಾರಿ ಪೊಲೀಸರು, ಕುಡಿದು ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರನಿಗೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.17,000 ದಂಡ ವಿಧಿಸಿದ್ದರು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

1988ರ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತಂದು ಸಂಸತ್ತಿನಿಂದ ಅನುಮೋದನೆ ಪಡೆಯಲಾಗಿದೆ. ಅದರಂತೆ ಹೊಸ ಕಾಯ್ದೆಯು ಜಾರಿಗೆ ಬಂದು ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಮೊದಲು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ರೂ.500 ದಂಡ ವಿಧಿಸಲಾಗುತ್ತಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಈಗ ಹೊಸ ಕಾಯ್ದೆಯನ್ವಯ ರೂ.5,000 ದಂಡ ವಿಧಿಸಲಾಗುತ್ತದೆ. ಕುಡಿದು ವಾಹನ ಚಾಲನೆ ಮಾಡುವವರಿಗೆ ಈ ಮೊದಲು ರೂ.2,000 ದಂಡ ವಿಧಿಸಲಾಗುತ್ತಿತ್ತು. ಈಗ ರೂ.10,000 ದಂಡ ವಿಧಿಸಲಾಗುತ್ತದೆ. ಹೊಸ ಕಾಯ್ದೆಯನ್ವಯ ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುವ ನಿಯಮ ಉಲ್ಲಂಘನೆಯೆಂದರೆ ಅದು ಕುಡಿದು ವಾಹನ ಚಲಾಯಿಸುವುದು.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಆದ ಕಾರಣ ರಸ್ತೆಯಲ್ಲಿ ಚಲಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸಿ, ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ಬಿದ್ದು, ನಿಮ್ಮ ವಾಹನವನ್ನೇ ಮಾರಾಟ ಮಾಡಬೇಕಾಗುವ ಸನ್ನಿವೇಶ ಬರಬಹುದು ಅಥವಾ ದಂಡ ಕಟ್ಟಲು ಸಾಲ ಮಾಡಬೇಕಾಗಬಹುದು.

Most Read Articles

Kannada
English summary
Gurugram tractor driver fined Rs 59,000 under new traffic rules for 10 violations - Read in kannada
Story first published: Thursday, September 5, 2019, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X