ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಕಳೆದ ಅಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಗೊಂಡಿದ್ದ ಟ್ರೈಬರ್ ಎಂಪಿವಿ ಕಾರು ರೆನಾಲ್ಟ್ ನಿರ್ಮಾಣದ ಕಾರುಗಳ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ್ದು, ಅತಿ ಕಡಿಮೆ ಅವಧಿ ಹೆಚ್ಚು ಮಾರಾಟವಾದ ರೆನಾಲ್ಟ್ ಕಾರುಗಳ ಪೈಕಿ ಟ್ರೈಬರ್ ಕಾರು ಅಗ್ರಸ್ಥಾನ ಪಡೆದಿದೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಆಕರ್ಷಕ ಬೆಲೆಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟ್ರೈಬರ್ ಎಂಪಿವಿ ಆವೃತ್ತಿಯು ರೆನಾಲ್ಟ್ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಕ್ವಿಡ್ ಮತ್ತು ಡಸ್ಟರ್ ಕಾರುಗಳನ್ನು ಮಾರಾಟ ಪ್ರಮಾಣದಲ್ಲಿ ಹಿಂದಿಕ್ಕಿದೆ. ಸೆಪ್ಟೆಂಬರ್ ಅವಧಿಯಲ್ಲಿ 4,710 ಯುನಿಟ್ ಮಾರಾಟವಾಗುವ ಮೂಲಕ ಎಂಟ್ರಿ ಲೆವೆಲ್ ಎಂಪಿವಿ ಕಾರುಗಳಲ್ಲಿ ಉತ್ತಮ ಬೇಡಿಕೆ ದಾಖಲಿಸಿದ್ದು, ಕ್ವಿಡ್ ಮತ್ತು ಡಸ್ಟರ್ ಕಾರುಗಳು ಕ್ರಮವಾಗಿ 2,995 ಯುನಿಟ್ ಮತ್ತು 544 ಯುನಿಟ್ ಮಾರಾಟಗೊಂಡಿವೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿರುವ ಟ್ರೈಬರ್ ಕಾರು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ಹಲವು ವಿಭಿನ್ನ ವೈಶಿಷ್ಟಯತೆಗಳನ್ನು ಹೊಂದಿದ್ದು, 4 ಮೀಟರ್‌ನಲ್ಲಿಯೇ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಗೊಳಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಈ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ವಿಭಿನ್ನ ಎನ್ನಿಸುವ ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಟ್ರೈಬರ್ ವೈಶಿಷ್ಟ್ಯತೆಗಳು

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಇನ್ನು ಹೊಸ ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

MOST READ: ಭಾರತಕ್ಕೆ ಬಂದಿಳಿದ ಚೀನಾ ಅಧ್ಯಕ್ಷರ ಅಧಿಕೃತ ಕಾರಿನ ಸ್ಪೆಷಲ್ ಏನು?

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದು. ಹೀಗಾಗಿ ಮೂರನೇ ಸಾಲನ್ನು ಮಡಿಕೆ ಮಾಡಿದ್ದಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದ್ದು, ಬೇಡವಾದಲ್ಲಿ 84-ಲೀಟರ್‌ನಷ್ಟು ಸ್ಥಳಾವಕಾಶ ಸಿಗಲಿದೆ.

MOST READ: ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಐಷಾರಾಮಿ ಕಾರುಗಳಿವು

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಎಂಜಿನ್ ಸಾಮರ್ಥ್ಯ

ಸದ್ಯಕ್ಕೆ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಎಂಪಿವಿ ನಂ.1

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

Article Published On: Saturday, October 12, 2019, 11:16 [IST]
English summary
Triber Becomes best-selling Renault car in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+