ಭಾರತಕ್ಕೆ ಬಂದಿಳಿದ ಚೀನಾ ಅಧ್ಯಕ್ಷರ ಅಧಿಕೃತ ಕಾರಿನ ಸ್ಪೆಷಲ್ ಏನು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‍‍ಪಿಂಗ್‍‍ರವರು ಈ ತಿಂಗಳ 11 ಮತ್ತು 12ರಂದು ಮಮ್ಮಲಾಪುರಂನಲ್ಲಿ ಭೇಟಿಯಾಗಲಿದ್ದಾರೆ. ಈ ಐತಿಹಾಸಿಕ ಭೇಟಿಯ ಹಿನ್ನೆಲೆಯಲ್ಲಿ ಮಮ್ಮಲಾಪುರಂ ಉತ್ಸವವನ್ನು ಆಚರಿಸಲಾಗುವುದು.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಚೀನಾ ಅಧ್ಯಕ್ಷರು ಚೆನ್ನೈನಿಂದ ಮಮ್ಮಲಾಪುರಂಗೆ ಕಾರಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಈ ಕಾರಣಕ್ಕೆ ತಮಿಳುನಾಡು ಸರ್ಕಾರವು ಹಲವಾರು ವ್ಯವಸ್ಥೆಗಳನ್ನು ಒದಗಿಸುತ್ತಿದೆ. ಚೀನಾ ಅಧ್ಯಕ್ಷರು ಪ್ರಯಾಣಿಸುವ ಅಧಿಕೃತ ಕಾರುಗಳನ್ನು ಬೋಯಿಂಗ್ 747 ವಿಮಾನದಲ್ಲಿ ಚೆನ್ನೈ ಏರ್ ಪೋರ್ಟಿಗೆ ತರಲಾಗಿದೆ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಇಂದು ಮಧ್ಯಾಹ್ನ ಚೆನ್ನೈನಲ್ಲಿ ಚೀನಾ ಅಧ್ಯಕ್ಷರ ಕಾರುಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. ಅಂದ ಹಾಗೆ ಚೀನಾ ಅಧ್ಯಕ್ಷರು ಬಳಸುವ ಕಾರುಗಳ ಬಗ್ಗೆ ಹಲವಾರು ಆಸಕ್ತಿಕರ ವಿಷಯಗಳಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿದು ಕೊಳ್ಳೊಣ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಚೀನಾ ಅಧ್ಯಕ್ಷ ಕ್ಸಿ ಜಿನ್‍‍ಪಿಂಗ್‍‍ರವರು ಬಳಸುವ ವಿಶೇಷ ಕಾರುಗಳನ್ನು ಚೀನಾದ ಹಾಂಗ್ ಕಾಂಗ್‍‍ನಲ್ಲಿರುವ ಸಾಂಪ್ರಾದಾಯಿಕ ಕಂಪನಿಯು ತಯಾರಿಸುತ್ತದೆ. 1958ರಲ್ಲಿ ಶುರುವಾದ ಹಾಂಗಿ ಕಾರು ಸದ್ಯಕ್ಕೆ ಎಫ್‍ಎ‍‍ಡಬ್ಲ್ಯು ಆಟೋಮೊಟಿವ್ ಗ್ರೂಪ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಚೀನಾ ಭಾಷೆಯಲ್ಲಿ ಹಾಂಗಿ ಎಂದರೆ ಕೆಂಪು ಕೋಟೆ ಎಂದರ್ಥ. ಚೀನಾದ ಕಮ್ಯುನಿಷ್ಟ್ ನೀತಿಯ ಗೌರವಾರ್ಥವಾಗಿ ಈ ಹೆಸರನ್ನು ಇಡಲಾಗಿದೆ. ಈ ಕಾರಣಕ್ಕಾಗಿ ಕೆಲವರನ್ನು ಹೊರತು ಪಡಿಸಿ, ಚೀನಾದ ಬಹುಪಾಲು ನಾಯಕರು ಈ ಹಾಂಗಿ ಕಾರುಗಳನ್ನು ತಮ್ಮ ಅಧಿಕೃತ ಕಾರುಗಳನ್ನಾಗಿ ಉಪಯೋಗಿಸಿದ್ದಾರೆ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

1981ರವರೆಗೆ ಹಾಂಗ್ ಕಾಂಗ್ ಕಂಪನಿಯು ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಕಾರುಗಳನ್ನು ತಯಾರಿಸುತ್ತಿತ್ತು. 1990ರ ನಂತರ ಸಾರ್ವಜನಿಕರಿಗೂ ಸಹ ಕಾರುಗಳನ್ನು ತಯಾರಿಸಲು ಶುರು ಮಾಡಿತು.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಈಗಿನ ಅಧ್ಯಕ್ಷರಾದ ಕ್ಸಿ ಜಿನ್‍‍ಪಿಂಗ್‍‍ರವರು ಹಾಂಗ್ ಕಾಂಗ್ ಕಂಪನಿಯ ಕಾರುಗಳನ್ನು ಬಳಸುತ್ತಿದ್ದಾರೆ. ಈ ಮೊದಲಿದ್ದ ಅಧ್ಯಕ್ಷರು ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸರ್ಕಾರಿ ಕಾರುಗಳನ್ನು ಬಳಸುತ್ತಿದ್ದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಆದರೆ ಈಗಿನ ಚೀನಾ ಅಧ್ಯಕ್ಷ ಕ್ಸಿ ಜಿನ್‍‍ಪಿಂಗ್‍‍ರವರು ಈ ಪದ್ದತಿಯನ್ನು ಬದಲಿಸಿದರು. ಅವರು ಬೇರೆ ದೇಶಗಳಿಗೆ ಹೋದಾಗಲೂ ಸಹ ಚೀನಾದಲ್ಲಿ ಬಳಸುತ್ತಿರುವ ಕಾರ್ ಅನ್ನೇ ಬಳಸುತ್ತಾರೆ. ಆ ಕಾರುಗಳನ್ನು ವಿಮಾನದಲ್ಲಿ ಆಯಾ ದೇಶಗಳಿಗೆ ಕೊಂಡೊಯ್ಯಲಾಗುತ್ತದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಇದೇ ರೀತಿಯಾಗಿ ಈಗ ಕ್ಸಿ ಜಿನ್‍‍ಪಿಂಗ್‍‍ರವರು ಭಾರತದಲ್ಲಿ ಬಳಸಲಿರುವ ಹಾಂಗಿ ಎಲ್ 5 ಕಾರುಗಳನ್ನು ವಿಮಾನದಲ್ಲಿ ಚೆನ್ನೈಗೆ ತರಲಾಗಿದೆ. ಈ ಕಾರ್ ಅನ್ನು ಮೊದಲಿದ್ದ ಜನಪ್ರಿಯ ಸಿ‍ಎ 770 ಕಾರಿನ ಬದಲಿಗೆ ಬಿಡುಗಡೆಗೊಳಿಸಲಾಗಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಈ ಹಾಂಗಿ ಎಲ್ 5 ಕಾರ್ ಅನ್ನು ಬುಲೆಟ್ ಪ್ರೂಫ್ ಆಗಿ ತಯಾರಿಸಲಾಗಿದೆ. ಈ ಕಾರಿನ ತಳಭಾಗವನ್ನು ಬಾಂಬ್ ಬಿದ್ದರೂ ತಡೆಯುವಂತೆ ತಯಾರಿಸಲಾಗಿದೆ. ಈ ಕಾರಿನಲ್ಲಿರುವ ಫ್ಲಾಟ್ ಟಯರ್‍‍ಗಳು ಪಂಕ್ಚರ್ ಆಗುವುದಿಲ್ಲ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಈ ಕಾರು ದೊಡ್ಡ ಗಾತ್ರವನ್ನು ಹೊಂದಿದೆ. ಈ ಕಾರು 5.55 ಮೀಟರ್ ಉದ್ದ, 2 ಮೀಟರ್ ಅಗಲ ಹಾಗೂ 1.5 ಮೀಟರ್ ಎತ್ತರವನ್ನು ಹೊಂದಿದೆ. ಈ ಕಾರಿನ ವ್ಹೀಲ್ ಬೇಸ್ 3.4 ಮೀಟರ್‍‍ಗಳಾಗಿದೆ. ಕಾರಿನ ಒಳಗಡೆ ವಿಶಾಲವಾದ ಜಾಗವಿದೆ. ಈ ಕಾರಿನ ತೂಕವು 3.15 ಟನ್‍‍ಗಳಾಗಿದೆ.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಲಗ್ಷುರಿ ಸೀಟುಗಳು, ಸ್ಫೇಶಿಯಸ್ ಎ‍‍ಸಿ ಸಿಸ್ಟಂ, ರೋಸ್‍‍ವುಡ್ ವುಡನ್ ಡೆಕ್ಕಿಂಗ್, ಹಿಂಭಾಗದ ಸೀಟುಗಳು 1.1 ಮೀಟರ್‍‍ನಷ್ಟು ಫುಟ್ ಸ್ಪೇಸ್ ಹೊಂದಿದ್ದು, ಹಲವಾರು ಲಗ್ಷುರಿ ಫೀಚರ್‍‍ಗಳನ್ನು ಹೊಂದಿದೆ. ತುರ್ತು ಸಂದರ್ಭಗಳಲ್ಲಿ ಈ ಕಾರಿನಲ್ಲಿ ಕುಳಿತು ಕೊಂಡು ಪ್ರಪಂಚದ ಯಾವುದೇ ಮೂಲೆಗಾದರೂ ಸ್ಯಾಟಲೈಟ್ ಫೋನ್ ಮೂಲಕ ಕರೆ ಮಾಡಬಹುದು.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಇದರ ಜೊತೆಗೆ ಈ ಕಾರು ಹಲವಾರು ರಹಸ್ಯವಾದ ಭದ್ರತಾ ಫೀಚರ್‍‍ಗಳನ್ನು ಹೊಂದಿದೆ. ಈ ಕಾರಿನಲ್ಲಿ ಬಲಿಷ್ಟವಾದ 4.0 ಲೀಟರಿನ ಟ್ವಿನ್ ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 381 ಬಿ‍‍ಹೆಚ್‍‍ಪಿ ಪವರ್ ಹಾಗೂ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿದೆ. ಈ ದೈತ್ಯ ಕಾರು ಕೇವಲ 10 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಮುಟ್ಟಬಲ್ಲದು.

ಹೀಗಿದೆ ನೋಡಿ ಚೀನಾ ಅಧ್ಯಕ್ಷರ ಅಧಿಕೃತ ಕಾರು..!

ಈ ಕಾರಿನಲ್ಲಿರುವ 105 ಲೀಟರಿನ ಫ್ಯೂಯಲ್ ಟ್ಯಾಂಕಿನಲ್ಲಿ ಪೂರ್ತಿಯಾಗಿ ಇಂಧನ ತುಂಬಿಸಿದರೆ 500 ಕಿ.ಮೀವರೆಗೂ ಚಲಿಸುತ್ತದೆ. ಈ ಕಾರು ಚೀನಾದಲ್ಲಿರುವ ದುಬಾರಿ ಬೆಲೆಯ ಕಾರ್ ಆಗಿದೆ. ಈ ಕಾರಿನ ಬೆಲೆಯು ಭಾರತದ ರೂಪಾಯಿ ಮೌಲ್ಯದಲ್ಲಿ ರೂ.5.69 ಕೋಟಿಗಳಾಗುತ್ತದೆ. ಬೇರೆ ವಿದೇಶಿ ಕಾರುಗಳಿಗಿಂತ ಹೆಚ್ಚಿನ ಫೀಚರ್‍‍ಗಳನ್ನು ಈ ಕಾರು ಹೊಂದಿದೆ.

Most Read Articles

Kannada
English summary
Chinese President Xi Jinping's official cars in Chennai - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X