ಹೊಸ ಮೋಟಾರು ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಭಾರತದಲ್ಲಿ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿರಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ದಂಡವನ್ನು ವಿಧಿಸುವ ಹೊಸ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೊಳಿಸಿತು.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರ ಪ್ರಯತ್ನದ ಫಲವಾಗಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಸಂಸತ್ತಿನಲ್ಲಿ ಅನುಮೋದಿಸಲಾಯಿತು.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಸೆಪ್ಟೆಂಬರ್ 1ರಿಂದ ಜಾರಿಗೊಳಿಸಿದ ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದ ಕಾರಣಕ್ಕೆ ಹೊಸ ಕಾಯ್ದೆಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಕೆಲವು ರಾಜ್ಯ ಸರ್ಕಾರಗಳೂ ಸಹ ಈ ಕಾಯ್ದೆಯನ್ನು ವಿರೋಧಿಸಿದ್ದವು.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಭಾರೀ ಪ್ರಮಾಣದ ದಂಡದಿಂದಾಗಿ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ದಂಡದ ಪ್ರಮಾಣವನ್ನು ಕಡಿಮೆಗೊಳಿಸಲಿಲ್ಲ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಹೊಸ ಕಾಯ್ದೆಯು ಜಾರಿಗೆ ಬಂದ ನಂತರ ಹಲವು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿವೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ನೀಡಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಹೊಸ ಕಾಯ್ದೆಯು ಜಾರಿಗೆ ಬಂದ ನಂತರ ಚಂಡೀಗಢದಲ್ಲಿನ ಅಪಘಾತ ಪ್ರಮಾಣವು 75%ನಷ್ಟು ಕಡಿಮೆಯಾಗಿದೆ. ಈ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಚಂಡೀಗಢದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಕೇಂದ್ರ ಸರ್ಕಾರವು ಹೇಳಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

2018ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ 8 ರಸ್ತೆ ಅಪಘಾತಗಳು ನಡೆದಿದ್ದವು. ಪುದುಚೇರಿಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ರಸ್ತೆ ಅಪಘಾತ ಪ್ರಮಾಣವು 31%ನಷ್ಟು ಕಡಿಮೆಯಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಈ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ರಾಜ್ಯ ಸಭೆಗೆ ಲಿಖಿತ ಹೇಳಿಕೆಯಲ್ಲಿ ನೀಡಿದ್ದಾರೆ. ಉತ್ತರಖಂಡ, ಚಂಡೀಗಢ ಹಾಗೂ ಪುದುಚೇರಿಯಲ್ಲಿ ರಸ್ತೆ ಅಪಘಾತ ಪ್ರಮಾಣವು ಕಡಿಮೆಯಾಗಿದೆ. ಕಳೆದ ವರ್ಷ ಈ ಎರಡು ತಿಂಗಳ ಅವಧಿಯಲ್ಲಿ 78 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಈ ಪ್ರಮಾಣವು ಈ ವರ್ಷ 22%ನಷ್ಟು ಕುಸಿತಗೊಂಡಿದೆ. ಈ ವರ್ಷದ ಇದೇ ಅವಧಿಯಲ್ಲಿ 61 ಜನರು ಮೃತಪಟ್ಟಿದ್ದಾರೆ. ಗುಜರಾತ್‍‍ನಲ್ಲಿ ಈ ಪ್ರಮಾಣವು 14%ನಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 557 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಈ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಗುಜರಾತ್‍‍ನಲ್ಲಿ ರಸ್ತೆ ಅಪಘಾತದಲ್ಲಿ 480 ಜನರು ಮೃತಪಟ್ಟಿದ್ದಾರೆ. ಬಿಹಾರದಲ್ಲಿಯೂ ಈ ಪ್ರಮಾಣವು ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 459 ಜನರು ಬಿಹಾರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಈ ವರ್ಷ 411 ಜನರು ವಿವಿಧ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಬಿಹಾರದಲ್ಲಿನ ರಸ್ತೆ ಅಪಘಾತದ ಪ್ರಮಾಣವು 10.5%ನಷ್ಟು ಕಡಿಮೆಯಾಗಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿನ ರಸ್ತೆ ಅಪಘಾತ ಪ್ರಮಾಣವೂ ಸಹ 10%ನಷ್ಟು ಕಡಿಮೆಯಾಗಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದಲ್ಲಿ 1,503 ಜನರು ಮೃತಪಟ್ಟಿದ್ದರು. ಈ ವರ್ಷದ ಇದೇ ಅವಧಿಯಲ್ಲಿ 1,355 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿಯೂ ರಸ್ತೆ ಅಪಘಾತ ಪ್ರಮಾಣವು ಕಡಿಮೆಯಾಗಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಕೇರಳದಲ್ಲಿ 321 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದರು. ಈ ವರ್ಷದ ಇದೇ ಅವಧಿಯಲ್ಲಿ 314 ಜನ ಸಾವನ್ನಪ್ಪಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2.1%ನಷ್ಟು ಕಡಿಮೆಯಾಗಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದಾಗ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಆದರೆ ಈಗ ರಸ್ತೆ ಅಪಘಾತ ಪ್ರಮಾಣವು ಕುಸಿದಿರುವ ಕಾರಣಕ್ಕೆ ಕೇಂದ್ರ ಸರ್ಕಾರದ ಕ್ರಮವು ಸರಿಯಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಕಾಯ್ದೆಯ ನಂತರ ಕಡಿಮೆಯಾಯಿತೇ ಅಪಘಾತ ಪ್ರಮಾಣ?

ಭಾರೀ ಪ್ರಮಾಣದ ದಂಡಕ್ಕೆ ಹೆದರಿರುವ ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಕಾರಣಕ್ಕೆ ರಸ್ತೆ ಅಪಘಾತ ಪ್ರಮಾಣವು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Road accident deaths reduced drastically post new motor vehicle act nitin gadkari - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X