ಮತ್ತೊಂದು ಐಷಾರಾಮಿ ಕಾರಿನ ಒಡೆಯನಾದ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ
ಫುಟ್‍ಬಾಲ್ ಆಟದ ಪ್ರಸಿದ್ದ ಆಟಗಾರನಾದ ಕ್ರಿಸ್ಟಿಯಾನೋ ರೊನಾಲ್ಡೊ, ಇದೀಗ ಜಗತ್ತಿನಲ್ಲಿರುವ ಶೀಮಂತ ಆಟಗಾರರಲ್ಲಿ ಈತ ಕೂಡ ಒಬ್ಬ. ಕ್ರಿಸ್ಟಿಯಾನೋ ರೊನಾಲ್ಡೊಗೆ ಕೇವಲ ಫುಟ್‍ಬಾಲ್ ಆಟದಲಿ ಮಾತ್ರವಲ್ಲದೆಯೆ ಕಾರುಗಳಲ್ಲಿಯು ಸಹ ಆಸಕ್ತಿ ಇದೆ ಎಂಬುದಕ್ಕೆ ಆತನ ಕಾರ್ ಕಲೆಕ್ಷನ್‍ನಲ್ಲಿರುವ ಐಷಾರಾಮಿ ಕಾರುಗಳೇ ಸಾಕ್ಷಿ.

ಕ್ರಿಸ್ಟಿಯಾನೋ ರೊನಾಲ್ಡೊ ಈಗಾಗಲೇ ಬುಗಾಟಿ ಚಿರೊನ್, ಬುಗಾಟಿ ವೆಯ್ರೊನ್, ಫೆರಾರಿ ಲಾಫೆರಾರಿ, ಫೆರಾರಿ ಎಫ್12 ಟಿಡಿಎಫ್, ಲ್ಯಾಂಬೋರ್ಗಿನಿ ಅವೆಂಟಾಡೊರ್, ಫೋರ್ಚೆ 911 ಟರ್ಬೋ ಎಸ್, ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸ್ಪೀಡ್, ಆಸ್ಟಾನ್ ಮಾರ್ಟಿನ್ ಡಿಬಿ9 ಮತ್ತು ಮೆಕ್‍ಲರೆನ್ ಎಂಪಿ4-12ಸಿ ಎಂಬ ಐಷಾರಮಿ ಕಾರುಗಳು ಇದ್ದು, ಇದೀಗ ರೋಲ್ಸ್ ರಾಯ್ಸ್ ಕಲಿನಲ್ ಕಾರು ಸೇರ್ಪಡೆಯಾಗಿದೆ.

ವರ್ಷಕ್ಕೆ $108 ಮಿಲಿಯನ್ ಸಂಪಾದಿಸುವ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಹೊಸದಾಗಿ ಐಷಾರಾಮಿ ಸಂಸ್ಥೆಯಾದ ರೋಲ್ಸ್ ರಾಯ್ಸ್ ನ ಕಲಿಲನ್ ಎಸ್‍ಯುವಿ ಕಾರನುನ್ ಖರೀದಿಸಿದ್ದು, ಇದೀಗ ಈ ಮಾಹಿತಿಯು ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರು ಭಾರತದಲ್ಲಿ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 6.95 ಕೋಟಿ ಬೆಲೆ ಹೊಂದಿದ್ದು, ಇದು ಆನ್ ರೋಡ್ ಬೆಲೆ ಪ್ರಕಾರ ಇದು ರೂ. 8.50 ಕೋಟಿಯಿಂದ ರೂ.9 ಕೋಟಿ ಬೆಲೆ ಪಡೆದುಕೊಳ್ಳಲಿವೆ.

ಐಷಾರಾಮಿ ಸೆಡಾನ್ ಕಾರುಗಳ ನಿರ್ಮಾಣದಲ್ಲಿ ಹೆಸರುವಾಸಿವಾಗಿರುವ ರೋಲ್ಸ್ ರಾಯ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರು ಅಭಿವೃದ್ಧಿ ಮಾಡಿದ್ದು, ಕೇವಲ ಐಷಾರಾಮಿ ಅಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಕಲಿನಿಯನ್ ಕಾರು ನೂರಕ್ಕೂ ಹೆಚ್ಚು ವಿನೂತನ ಸೌಲಭ್ಯಗಳೊಂದಿಗೆ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಎಸ್‌ಯುವಿ ಕಾರುಗಳಿಂತಲೂ ಇದು ವಿಶೇಷ ಎನ್ನಿಸಲಿದೆ.

ಸುದ್ಧಿ ಮೂಲಗಳ ಪ್ರಕಾರ, ದುಬೈ ಒಂದರಲ್ಲೇ ಶೇ.60ಕ್ಕೂ ಹೆಚ್ಚು ಕಲಿನನ್ ಕಾರುಗಳು ಮಾರಾಟವಾಗಿದ್ದು, ಬೆಲೆ ದುಬಾರಿ ಎನ್ನಿಸಿದರೂ ಸಹ ಕಾರು ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಹರಿದು ಬಂದಿರುವುದು ರೋಲ್ಸ್ ರಾಯ್ಸ್ ಸಂಸ್ಥೆಗೆ ಅಚ್ಚರಿ ಉಂಟುಮಾಡಿದೆ.

ಕಲಿನನ್ ಅಂದ್ರೆ ಏನು?
ರೋಲ್ಸ್ ರಾಯ್ಸ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಮೊದಲ ಎಸ್‌ಯುವಿಗೆ ಕಲಿನನ್ ಎಂದು ನಾಮಕರಣ ಮಾಡಲು ಹಲವು ಕಾರಣಗಳಿದ್ದು, ಕಲಿನನ್ ಎನ್ನುವುದು ಜಗತ್ತಿನ ಅತಿ ದುಬಾರಿ ವಜ್ರದ ಮಾದರಿಯಾಗಿದೆ. ಇದು ಮೊದಲ ಬಾರಿಗೆ 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾಗಿದ್ದಲ್ಲದೆ 3,106 ಕ್ಯಾರೆಟ್ ವೈಶಿಷ್ಟ್ಯತೆಗಳೊಂದಿಗೆ ಜಗತ್ತಿನ ಅತಿ ದುಬಾರಿ ವಸ್ತುಗಳಲ್ಲಿ ಅದು ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು.

ಕಾರಿನ ಡಿಸೈನ್ ಕಲಿನನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ಕಲಿನನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.
MOST READ: ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಕಲಿನನ್ ಕಾರಿನ ಉದ್ದಳತೆ
ಎಸ್‌ಯುವಿ ಹೆಸರಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರುಗಳು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.

ಕಾರಿನ ಒಳವಿನ್ಯಾಸ ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯವನ್ನು ಇದಲ್ಲಿದೆ.

ಎಂಜಿನ್ ಸಾಮರ್ಥ್ಯ
ಕಲಿನನ್ ಕಾರುಗಳು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.


Click it and Unblock the Notifications