ಭಾರತದಲ್ಲಿ ಮೆರೆದು ಮರೆಯಾದ ಎಸ್‍ಯುವಿಗಳಿವು
ಎಸ್‌ಯುವಿಗಳು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ವಾಹನಗಳಾಗಿವೆ. ಕೆಲವು ದೇಶಗಳು ಎಸ್‌ಯುವಿಗಳನ್ನು ಹೆಚ್ಚು ಮಾರಾಟವಾಗುವ ವಾಹನಗಳೆಂದು ನೋಂದಾಯಿಸಿವೆ. ಭಾರತದಲ್ಲಿಯೂ ಸಹ ಎಸ್‌ಯುವಿಗಳು ಸಾಕಷ್ಟು ಜನಪ್ರಿಯವಾಗಿವೆ. ಆದ್ದರಿಂದ ಹಲವು ಕಾರು ತಯಾರಕ ಕಂಪನಿಗಳು ಹೊಸ ಎಸ್‌ಯುವಿಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಕಾಲಿಡುತ್ತಿವೆ.

ಕೆಲವು ಎಸ್‌ಯುವಿಗಳು ದೇಶಿಯ ಮಾರುಕಟ್ಟೆಗೆ ಕಾಲಿಟ್ಟರೂ ಆಷ್ಟೇನೂ ಜನಪ್ರಿಯವಾಗದೇ, ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು. ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯ ಭಾಗವಾಗಿ ಮರೆಯಾದ 17 ಎಸ್‌ಯುವಿಗಳ ಪಟ್ಟಿ ಇಲ್ಲಿದೆ.
ಟಾಟಾ ಸಫಾರಿ ಪೆಟ್ರೋಲ್
ಸಫಾರಿ ಎಸ್‌ಯುವಿಯನ್ನು ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟವಾಗಿದೆಯೆಂದು ತೋರುತ್ತದೆಯಾದರೂ, ಟಾಟಾ ಪೆಟ್ರೋಲ್ ಎಂಜಿನ್‌ನೊಂದಿಗೂ ಸಫಾರಿಯನ್ನು ಮಾರಾಟ ಮಾಡಿತ್ತು. 2000ರ ದಶಕದ ಆರಂಭದಲ್ಲಿ ಸಫಾರಿ ಪೆಟ್ರೋಲ್ ಮಾರಾಟದಲ್ಲಿತ್ತು. 2 ಲೀಟರ್‍ನ ಎಂಜಿನ್ 135 ಬಿಎಚ್‌ಪಿ ಉತ್ಪಾದಿಸುತ್ತಿತ್ತು. 2 ಲೀಟರ್‍ನ ಡೀಸೆಲ್ ಎಂಜಿನ್ 90 ಬಿಎಚ್‌ಪಿ ಉತ್ಪಾದಿಸುತ್ತಿತ್ತು. ಇಂಧನ ದಕ್ಷತೆಯು ಉತ್ತಮವಾಗಿಲ್ಲದ ಕಾರಣ ಈ ಎಸ್‌ಯುವಿಯನ್ನು ಸ್ಥಗಿತಗೊಳಿಸಲಾಯಿತು.

ಟಾಟಾ ಸಿಯೆರಾ
ಮತ್ತೊಂದು ಮರೆಯಾದ ಎಸ್‌ಯುವಿ ಟಾಟಾ ಕಂಪನಿಯ ಸಿಯೆರಾ. ಹಲವು ಕಾರು ಪ್ರಿಯರು ಸಿಯೆರಾವನ್ನು ಎರಡು ಡೋರುಗಳ ಎಸ್‌ಯುವಿ ಎಂದು ಇಂದಿಗೂ ನೆನಪಿಸಿಕೊಳ್ಳುತ್ತಾರೆ, ಇದು ಬಾಹ್ಯ ಸ್ಟೈಲಿಂಗ್ ಹಾಗೂ ಇಂಟಿರಿಯರ್ ಹಾಗೂ ಫೀಚರ್‍ಗಳ ವಿಷಯದಲ್ಲಿ ಸಾಕಷ್ಟು ಆಧುನಿಕವಾಗಿತ್ತು. ಫೀಚರ್‍ಗಳ ಕುರಿತು ಹೇಳುವುದಾದರೆ, ಇದು ಪವರ್ ವಿಂಡೋಸ್, ಪವರ್ / ಟಿಲ್ಟ್ ಸ್ಟೀಯರಿಂಗ್ ಹಾಗೂ ಸೆಂಟ್ರಲ್ ಏರ್ ಕಂಡಿಷನ್‍ಗಳನ್ನು ಹೊಂದಿತ್ತು. ಸಿಯೆರಾದಲ್ಲಿ ಅಳವಡಿಸಲಾಗಿದ್ದ 2.0 ಲೀಟರ್‍ನ ಇಂಜೆಕ್ಷನ್ ಡೀಸೆಲ್ ಎಂಜಿನ್ 68 ಬಿಎಚ್‌ಪಿ ಪವರ್ ಹಾಗೂ 110 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

ಹಿಂದೂಸ್ತಾನ್ ಟ್ರೆಕ್ಕರ್
ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್ ಪ್ಲಾಟ್‍ಫಾರಂ ಅನ್ನು ಸಾಕಷ್ಟು ಮಾದರಿಗಳಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿತ್ತು. ಅವುಗಳಲ್ಲಿ ಟ್ರೆಕ್ಕರ್ ಸಹ ಒಂದು. ಇದು ಸಾಕಷ್ಟು ಒರಟಾದ ವಾಹನವಾಗಿದ್ದು, ಅಂಬಾಸಿಡರ್ ಕಾರಿನಲ್ಲಿದ್ದಂತಹ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿತ್ತು. ಈ ಎಂಜಿನ್ 39 ಬಿಹೆಚ್‌ಪಿ ಹಾಗೂ 80 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಕಾರು 51 ಬಿಹೆಚ್‌ಪಿ ಹಾಗೂ 106 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಟ್ರೆಕ್ಕರ್ ಕಾರು ಮಹೀಂದ್ರಾ ಕಾರುಗಳಂತೆ ಜನಪ್ರಿಯವಾಗಲು ವಿಫಲವಾಯಿತು.

ಷೆವ್ರೊಲೆಟ್ ಕ್ಯಾಪ್ಟಿವಾ
ಷೆವ್ರೊಲೆಟ್ ಕ್ಯಾಪ್ಟಿವಾ ದೊಡ್ಡ ಎಸ್‌ಯುವಿ ಆಗಿದ್ದು, ಈಗ ಸ್ಥಗಿತಗೊಂಡಿರುವ ಷೆವರ್ಲೆ ಕಂಪನಿಯ ಪ್ರಮುಖ ವಾಹನವೂ ಆಗಿತ್ತು. ಈ ಪ್ರೀಮಿಯಂ ಎಸ್‌ಯುವಿ 2.2-ಲೀಟರ್ ವಿಸಿಡಿ ಟರ್ಬೊ ಎಂಜಿನ್ ಹೊಂದಿ, ಇದು ಕ್ರೂಜ್‌ನಂತೆ ಕಾಣುತ್ತಿತ್ತು. ಈ ಎಂಜಿನ್ 184 ಬಿಹೆಚ್‌ಪಿ ಪವರ್ ಹಾಗೂ 424 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಕ್ಯಾಪ್ಟಿವಾ ಎಸ್‌ಯುವಿಯನ್ನು ಎಡಬ್ಲ್ಯುಡಿಯೊಂದಿಗೆ ಬಿಡುಗಡೆಗೊಳಿಸಲಾಗಿತ್ತು.

ಷೆವ್ರೊಲೆಟ್ ಟ್ರೇಲ್ ಬ್ಲೇಜರ್
ಷೆವ್ರೊಲೆಟ್ ಟ್ರೇಲ್ ಬ್ಲೇಜರ್ ಟೊಯೋಟಾ ಫಾರ್ಚೂನರ್ ಹಾಗೂ ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಪ್ರತಿಸ್ಪರ್ಧಿಯಾಗಿತ್ತು. ಈ ಎಸ್‍ಯುವಿಯಲ್ಲಿ 2.8-ಲೀಟರ್‍ನ ದೊಡ್ಡ ಗಾತ್ರದ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 197 ಬಿಹೆಚ್‌ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಬಿಡುಗಡೆಯಾದ ಕಾಲದಲ್ಲಿ ಬಲಶಾಲಿಯಾದ ಎಸ್‍ಯುವಿಯಾಗಿತ್ತು.

ಷೆವ್ರೊಲೆಟ್ ಫಾರೆಸ್ಟರ್
ಷೆವ್ರೊಲೆಟ್ ಕಂಪನಿಯು ಭಾರತದಲ್ಲಿ ವಿಫಲವಾದ ಎಸ್‍ಯುವಿಗಳ ಸಾಲನ್ನೇ ಹೊಂದಿದೆ. ಷೆವ್ರೊಲೆಟ್ ಫಾರೆಸ್ಟರ್ ಸಹ ವಿಫಲವಾಗಿತ್ತು. ಈ ಎಸ್‍ಯುವಿ ಯುರೋಪ್‌ನಲ್ಲಿ ಮಾರಾಟವಾದ ಸುಬಾರು ಫಾರೆಸ್ಟರ್‍ನ ರಿಬ್ಯಾಡ್ಜ್ ಮಾದರಿಯಾಗಿದೆ. ಫಾರೆಸ್ಟರ್ ಎಸ್‍ಯುವಿ ಬಾಕ್ಸರ್ ಎಂಜಿನ್ ಹೊಂದಿದ್ದ ಬಲಶಾಲಿ ವಾಹನವಾಗಿತ್ತು. ಕಾರುಗಳಂತಹ ಚಾಲನಾ ಡೈನಾಮಿಕ್ಸ್ ಹೊಂದಿತ್ತು. ಫಾರೆಸ್ಟರ್ ಎಡಬ್ಲ್ಯುಡಿ ವ್ಯವಸ್ಥೆಯನ್ನು ಹೊಂದಿದ್ದರೂ, ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಜಿಎಂ ಕಂಪನಿಯು ಸುಬಾರುವಿನಲ್ಲಿದ್ದ ತನ್ನ ಪಾಲನ್ನು ಮಾರಾಟ ಮಾಡಿದ ನಂತರ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಯಿತು.

ಹ್ಯುಂಡೈ ಟೆರಾಕನ್
ಟೆರಾಕನ್ ಭಾರತಕ್ಕಾಗಿ ಹ್ಯುಂಡೈನ ಪೋರ್ಟ್‍ಫೋಲಿಯೋದ ಪ್ರಮುಖ ಕಾರ್ ಆಗಿದೆ. ಬಿಡುಗಡೆಯಾದಾಗ ಇದು ದೇಶದಲ್ಲಿ ಮಾರಾಟವಾಗುತ್ತಿದ್ದ ಟಾರ್ಕಿಯೆಸ್ಟ್ ಪೂರ್ಣ ಗಾತ್ರದ ಎಸ್‍ಯುವಿಯಾಗಿತ್ತು. ಟೆರಾಕನ್ ಎಸ್‍ಯುವಿಯಲ್ಲಿ 2.9ಲೀಟರ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 148 ಬಿಹೆಚ್‌ಪಿ ಪವರ್ ಹಾಗೂ 343 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಟೆರಾಕನ್ ಫ್ರೇಮ್ ಚಾಸಿಸ್ ಮೇಲೆ ಲ್ಯಾಡರ್ ಹಾಗೂ ಎಡಬ್ಲ್ಯೂಡಿ ಸಿಸ್ಟಂ ಹೊಂದಿತ್ತು.

ಹ್ಯುಂಡೈ ಟಕ್ಸನ್ (ಮೊದಲ ತಲೆಮಾರು)
ಮೊದಲ ತಲೆಮಾರಿನ ಟಕ್ಸನ್ ಅನ್ನು ಭಾರತದಲ್ಲಿ ಅಲ್ಪಾವಧಿಗೆ ಮಾರಾಟ ಮಾಡಲಾಯಿತು. ಇದರಲ್ಲಿದ್ದ 2.0ಲೀಟರ್ ಟರ್ಬೊ ಡೀಸೆಲ್ ಎಂಜಿನ್, 120 ಬಿಹೆಚ್‌ಪಿ ಪವರ್ ಹಾಗೂ 270 ಎನ್‌ಎಂ ಟಾರ್ಕ್ ಉತ್ಪಾದಿಸುತಿತ್ತು. ಈ ಎಸ್‍ಯುವಿ 4 ವ್ಹೀಲ್ ಡ್ರೈವ್ ಒದಗಿಸುತಿತ್ತು.

ಮಾರುತಿ ಗ್ರ್ಯಾಂಡ್ ವಿಟಾರಾ ಎಕ್ಸ್ಎಲ್ 7
ಮಾರುತಿ ಗ್ರ್ಯಾಂಡ್ ವಿಟಾರಾ ಎಕ್ಸ್‌ಎಲ್ 7 ಎಸ್‍ಯುವಿ, ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯ ಅತಿ ದೊಡ್ಡ ಫ್ಲಾಪ್ ಆಗಿದೆ. ಈ ಎಸ್‍ಯುವಿ 7 ಸೀಟುಗಳನ್ನು ಹೊಂದಿತ್ತು. 2.8-ಲೀಟರ್‍ನ ವಿ6 ಪೆಟ್ರೋಲ್ ಎಂಜಿನ್ 168 ಬಿಹೆಚ್‌ಪಿ ಪವರ್ ಹಾಗೂ 236 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಎಸ್‍ಯುವಿ ಸಹ 4 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿತ್ತು.

ಮಾರುತಿ ಗ್ರ್ಯಾಂಡ್ ವಿಟಾರಾ
ಎಕ್ಸ್‌ಎಲ್ -7 ಎಸ್‍ಯುವಿಯ ಬದಲಿಗೆ ಗ್ರ್ಯಾಂಡ್ ವಿಟಾರಾ ಬಿಡುಗಡೆಗೊಳಿಸಲಾಗಿತ್ತು. ಈ ಎಸ್‍ಯುವಿಯಲ್ಲಿ ಅಳವಡಿಸಲಾಗಿದ್ದ 2.4 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 164 ಬಿಹೆಚ್‌ಪಿ ಪವರ್ ಹಾಗೂ 225 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಇದು ಹೆಚ್ಚಿನ ಹಾಗೂ ಕಡಿಮೆ ಅನುಪಾತದ ಆಯ್ಕೆಗಳೊಂದಿಗೆ ಪೂರ್ಣ ಪ್ರಮಾಣದ 4×4 ಹೊಂದಿತ್ತು.

ಮಹೀಂದ್ರಾ ಇನ್ವೇಡರ್
ಮಹೀಂದ್ರಾ ಕಂಪನಿಯ ಜನಪ್ರಿಯ ಎಸ್‍ಯುವಿ ಬೊಲೆರೊಗೆ ಲೈಫ್‍ಸ್ಟೈಲ್ ನೀಡಲು ಬಯಸಿ, ಇನ್ವೇಡರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇನ್ವೇಡರ್ ಎರಡು ಡೋರುಗಳನ್ನು ಹೊಂದಿದ್ದ ಬೊಲೆರೊದ ಮೃದು ಆವೃತ್ತಿಯಾಗಿತ್ತು. ಈ ಎಸ್‍ಯುವಿಯನ್ನು ಆಫ್ ರೋಡ್ ಪ್ರಿಯರಿಗಾಗಿ ಬಿಡುಗಡೆಗೊಳಿಸಲಾಗಿತ್ತು. ಈ ಎಸ್‍ಯುವಿಯಲ್ಲಿದ್ದ 2.5 ಲೀಟರ್‍ನ ಆಯಿಲ್ ಬರ್ನರ್ ಎಂಜಿನ್ 63 ಬಿಹೆಚ್‌ಪಿ ಹಾಗೂ 177 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

ಮಹೀಂದ್ರಾ ಲೆಜೆಂಡ್
ಮಹೀಂದ್ರಾ ಲೆಜೆಂಡ್ ಎಂಎಂ -540 / 550 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಲೈಫ್‍ಸ್ಟೈಲ್ ಎಸ್‍ಯುವಿಯಾಗಿದ್ದು, ಇದು ವಿಲ್ಲೀಸ್ ಜೀಪ್‍ನ ಮೇಲೆ ಆಧಾರಿತವಾಗಿದೆ. ಈ ಎಸ್‍ಯುವಿಯನ್ನು ಥಾರ್‌ನ ಆಧ್ಯಾತ್ಮಿಕ ಪೂರ್ವವರ್ತಿ ಎಂದು ಪರಿಗಣಿಸಬಹುದು. ಈ ವಾಹನದಲ್ಲಿ 2.5-ಲೀಟರ್‍ನ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 58 ಬಿಹೆಚ್‌ಪಿ ಉತ್ಪಾದಿಸುತ್ತಿತ್ತು.

ಪ್ರೀಮಿಯರ್ ರಿಯೊ
ಪ್ರೀಮಿಯರ್ ರಿಯೊ ಭಾರತದ ಮೊದಲ ಸಬ್4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ. ಈ ಎಸ್‍ಯುವಿ ಈಗ ಹೆಚ್ಚು ಜನಪ್ರಿಯವಾಗಿರುವ ಎಸ್‍ಯುವಿ ಸೆಗ್‍ಮೆಂಟಿಗೆ ನಾಂದಿ ಹಾಡಿತ್ತು. ರಿಯೊ ತನ್ನ ಮೂಲವನ್ನು ಡೈಹತ್ಸು ಟೆರಿಯೊಸ್‌ನಲ್ಲಿ ಹೊಂದಿದೆ. ಪ್ರೀಮಿಯರ್ ರಿಯೊವನ್ನು, 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗಿತ್ತು. ನಂತರ, ರಿಯೊದಲ್ಲಿ ಫಿಯೆಟ್ ಮಲ್ಟಿಜೆಟ್ 1.3 ಲೀಟರ್ ಡೀಸೆಲ್ ಎಂಜಿನ್ ಕೂಡ ಅಳವಡಿಸಲಾಯಿತು.

ಸಾಂಗ್‌ಯಾಂಗ್ ರೆಕ್ಸ್ಟನ್
ದಕ್ಷಿಣ ಕೊರಿಯಾದ ಕಂಪನಿಯನ್ನು ಮಹೀಂದ್ರಾ ಖರೀದಿಸಿದ ನಂತರ ರೆಕ್ಸ್ಟನ್ ಭಾರತದಲ್ಲಿ ಬಿಡುಗಡೆಯಾದ ಸ್ಯಾಂಗ್‍ಯಾಂಗ್ ವಾಹನವಾಗಿದೆ. 7 ಆಸನಗಳನ್ನು ಹೊಂದಿದ್ದ ಈ ಎಸ್‍ಯುವಿಯಲ್ಲಿ 2.7ಲೀಟರ್ ಎಂಜಿನ್ ಅಳವಡಿಸಲಾಗಿತ್ತು. ರೆಕ್ಸ್ಟನ್ ಎಂದಿಗೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಬೇಡಿಕೆ ಕಡಿಮೆಯಾದ ಕಾರಣ ಈ ಕಾರಿನ ಮಾರಾಟವನ್ನು ನಿಲ್ಲಿಸಲಾಯಿತು. ಮಹೀಂದ್ರಾ ಕಂಪನಿಯು ಇತ್ತೀಚಿಗೆ ರೆಕ್ಸ್ಟನ್ ಬದಲಿಗೆ ಆಲ್ಟುರಾಸ್ ಜಿ4 ಬಿಡುಗಡೆಗೊಳಿಸಿದೆ. ಸಾಂಗ್‌ಯಾಂಗ್ ನೇಮ್‌ಪ್ಲೇಟ್ ಅನ್ನು ತೆಗೆದುಹಾಕಿ, ತನ್ನ ಬ್ಯಾಡ್ಜ್ ಅನ್ನು ಅಳವಡಿಸಿದೆ.

ರೆನಾಲ್ಟ್ ಕೊಲಿಯೊಸ್
ರೆನಾಲ್ಟ್ ಕಂಪನಿಯು ಭಾರತದಲ್ಲಿ ತನ್ನ ಎಸ್‍ಯುವಿಗಳ ಯುಗವನ್ನು ಕೊಲಿಯೊಸ್‌ನೊಂದಿಗೆ ಪ್ರಾರಂಭಿಸಿತು. ಆದರೆ ಈ ಎಸ್‍ಯುವಿ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಕೊಲಿಯೊಸ್ 4×2 ಮ್ಯಾನುವಲ್, 4×2ಆಟೋ ಹಾಗೂ 4×4ಆಟೋ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. 2.0 ಲೀಟರ್ ಎಂಜಿನ್ ಹೊಂದಿದ್ದ ಕೊಲಿಯೊಸ್ ಅನ್ನು ಅದ್ಭುತವಾಗಿ ತಯಾರಿಸಲಾಗಿತ್ತು. ಬೋಸ್‌ನ ಸ್ಪ್ಲಿಟ್ ಟೇಲ್‌ಗೇಟ್ ಹಾಗೂ ಆಡಿಯೊ ಸಿಸ್ಟಂ ಅಳವಡಿಸಲಾಗಿತ್ತು. ಈ ಎಸ್‍ಯುವಿಯಲ್ಲಿದ್ದ ಎಂಜಿನ್ 170 ಬಿಎಚ್‌ಪಿ ಪವರ್ ಹಾಗೂ 360 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

ಫೋರ್ಸ್ ಒನ್
ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಅಮಿತಾಬ್ ಬಚ್ಚನ್ ರವರನ್ನು ಹೊಂದಿದ್ದರೂ, ಫೋರ್ಸ್ ಒನ್ ದೇಶಿಯ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಇದು ಫೋರ್ಸ್‌ನ ಮೊದಲ ಎಸ್‍ಯುವಿ. ಈ ಎಸ್‍ಯುವಿ ಹಳೆಯ ತಲೆಮಾರಿನ ಫೋರ್ಡ್ ಎಂಡೀವರ್ ಮೇಲೆ ಆಧಾರಿತವಾಗಿದೆ. ಈ ವಾಹನದಲ್ಲಿ ಅಳವಡಿಸಲಾಗಿದ್ದ 2.2 ಲೀಟರ್‍ನ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 139 ಬಿಎಚ್‌ಪಿ ಪವರ್ ಹಾಗೂ 321 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.

ನಿಸ್ಸಾನ್ ಎಕ್ಸ್-ಟ್ರಯಲ್
ನಿಸ್ಸಾನ್ ಎಕ್ಸ್-ಟ್ರಯಲ್ ಭಾರತದಲ್ಲಿ ಬಿಡುಗಡೆಯಾದ ನಿಸ್ಸಾನ್ ಕಂಪನಿಯ ಮೊದಲ ಎಸ್‍ಯುವಿ. ಇದು ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಫೀಚರ್‍ಗಳನ್ನು ಹೊಂದಿತ್ತು. ಎಕ್ಸ್-ಟ್ರಯಲ್‍ನಲ್ಲಿ ಬಲಶಾಲಿಯಾದ 2 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 150 ಬಿಎಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು.


Click it and Unblock the Notifications