ಬಿಡುಗಡೆಗೆ ದಿನಗಣನೆ- ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಅಧಿಕೃತವಾಗಿಯೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೀಗಾಗಿ ಹೊಸ ಕಾರನ್ನು ಡೀಲರ್ಸ್ ಯಾರ್ಡ್‌ನಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಮೊದಲ ಬಾರಿಗೆ ಹೊಸ ಕಾರಿನ ಒಳಾಂಗಣ ವಿನ್ಯಾಸದ ಮಾಹಿತಿ ಬಹಿರಂಗವಾಗಿದೆ.

ಬಿಡುಗಡೆಗೆ ದಿನಗಣನೆ- ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಟಾಟಾ ವಿನೂತನ ವಿನ್ಯಾಸದ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯ ಉದ್ದೇಶದಿಂದ ದೇಶದ ವಿವಿಧಡೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ. ಎಂಜಿನ್ ಕಾರ್ಯಕ್ಷಮತೆಯಲ್ಲಿ ಹ್ಯಾಚ್‌ಬ್ಯಾಕ್ ಕಾರು ಮಾಲೀಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರು ದೀಪಾವಳಿ ಹೊತ್ತಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಹ್ಯಾರಿಯರ್ ಎಸ್‌ಯುವಿ ಬಿಡುಗಡೆಯ ಯಶಸ್ವಿ ನಂತರ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಡುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದೆ.

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ. ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ.

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ವಿಚಾರ ಅಂದ್ರೆ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಇದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಸುಧಾರಣೆಯಾಗುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

MOST READ:ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ಅಧಿಕೃತ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.7.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.

MOST READ:ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೋಜ್ ಕಾರುನ್ನು ಸಹ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಆಲ್‌ಟ್ರೊಜ್ ಕಾರು ಹ್ಯುಂಡೈ ಐ20 ಮತ್ತು ಮಾರುತಿ ಬಲೆನೊ ಕಾರುಗಳಿಗೆ ಟಕ್ಕರ್ ನೀಡಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬಿಡುಗಡೆಗೆ ದಿನಗಣನೆ - ಡಿಲರ್ಸ್ ಯಾರ್ಡ್ ತಲುಪಿದ ಟಾಟಾ ಆಲ್‌ಟ್ರೊಜ್

ಹಾಗೆಯೇ ಟಾಟಾ ಆಲ್‌ಟ್ರೊಜ್‌ನಲ್ಲಿ ಎಲೆಕ್ಟ್ರಿಕ್ ಮಾದರಿ ಕೂಡಾ ಬಿಡುಗಡೆಯಾಗಲಿದ್ದು, ಈ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಎಲೆಕ್ಟ್ರಿಕ್ ಆಲ್‌ಟ್ರೊಜ್ ಎಲೆಕ್ಟ್ರಿಕ್ ಮಾದರಿಯು ರೂ.10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿದ್ದು, ಪ್ರತಿ ಚಾರ್ಜ್‌ಗೆ ಈ ಕಾರು 180ಕಿ.ಮಿನಿಂದ 220ಕಿ.ಮಿ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

Source: Zigwheels

Article Published On: Saturday, September 14, 2019, 13:51 [IST]
English summary
Tata Altroz Interiors Spied Ahead Of India Launch: Spy Pics & Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+