ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ತಮ್ಮ 5 ಸೀಟರ್ ಹ್ಯಾರಿಯರ್ ಎಸ್‍ಯುವಿಯನ್ನು ಪರಿಚಯಿಸಲಾಗಿದ್ದು, ಇದೀಗ 5 ಸೀಟರ್ ಹ್ಯಾರಿಯರ್ ಕಾರಿನ ನಂತರ 7 ಸೀಟರ್ ಹ್ಯಾರಿಯರ್ ಕಾರನ್ನು ಬಿಡುಗಡೆ ಮಾಡಲಿದೆ. ಬಿಡುಗಡೆಯಾಗಲಿರುವ 7 ಸೀಟರ್ ಹ್ಯಾರಿಯರ್ ಕಾರು ಮೊದಲಿಗೆ ಬಝಾರ್ಡ್ ಎಂಬ ಹೆಸರನ್ನು ಪಡೆದುಕೊಂಡಿದ್ದು, ಕೆಲವು ದಿನಗಳ ಹಿಂದಷ್ಟೆ ಕ್ಯಾಸಿನಿ ಎಂದು ಮತ್ತೆ ಹೆಸರಿಡಲಾಗಿತ್ತು.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಮಾರ್ಚ್‍ನಲ್ಲಿ ನಡೆದ 2019ರ ಜೆನೆವಾ ಮೋಟಾರ್ ಶೋನಲ್ಲಿ ಟಾಟಾ ಮೋಟಾರ್ ಸಂಸ್ಥೆಯು ಮಾರಕ್ಟ್ಟೆಯಲ್ಲಿ ತಮ್ಮ 21ವರ್ಷದ ಸಂಪೂರ್ಣಗೊಳಿಸಿದ ಕಾರಣ ಹ್ಯಾರಿಯರ್ ಆಧಾರಿತ 7 ಸೀಟರ್ ಬಝಾರ್ಡ್ (ಕ್ಯಾಸಿನಿ), ಆಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್, ಆಲ್‍ಟ್ರೋಜ್ ಇವಿ ಮತ್ತು ಹೆಚ್‍2ಎಕ್ಸ್ ಎಂಬ ಮೈಕ್ರೋ ಎಸ್‍ಯುವಿ ಕಾರುಗಳನ್ನು ಪ್ರದರ್ಶಿಸಲಾಯಿತು. ಇದೀಗ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಈ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ರಶ್‍ಲೇನ್ ಪ್ರಕಾರ ಹೊಸದಾಗಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಟಾಟಾ ಬಝಾರ್ಡ್ ಕಾರು ಹ್ಯಾರಿಯರ್ ಕಾರಿಗಿಂತಲೂ ವಿಭಿನ್ನವಾದ ಎಲ್ಇಡಿ ಟೈಲ್‍ಲೈಟ್ಸ್ ಅನ್ನು ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಿತ ಹ್ಯಾರಿಯರ್ ಕಾರಿನೊಂದಿಗೆ ಸಧ್ಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಇನ್ನು ಬಝಾರ್ಡ್ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಹ್ಯಾರಿಯರ್‍‍ನಂತೆಯೆ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್ ಜೆಡ್ ಎಂಬ ನಾಲ್ಕು ವೇರಿಯೆಂಟ್‍‍ಗಳಲ್ಲಿ ಬಿಡುಗಡೆಯಾಗಲಿದ್ದು, 18 ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂತ್ ಲಿಡ್ ಮತ್ತು ಟೈಲ್ ಲ್ಯಾಂಪ್ಸ್ ಅನ್ನು ಹೊಂದಿರಲಿದೆ.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಟಾಟಾ ಕ್ಯಾಸಿನಿ (ಬಝಾರ್ಡ್) ಹೊಸ ಎಸ್‍ಯುವಿ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಕಾರಿನ ವಿನ್ಯಾಸ

ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಎಂಜಿನ್ ಸಾಮರ್ಥ್ಯ

ಟಾಟಾ ಬಝರ್ಡ್ ಕಾರುಗಳಲ್ಲಿ ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಇದೀಗ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಮತ್ತು ಬಿಡುಗಡೆಗೊಳ್ಳಲಿರುವ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿರುವ ಟಾಟಾ ಕ್ಯಾಸಿನಿ ಕಾರು, ತನ್ನ ಎದುರಾಳಿಗಳಿಗಿಂತಲೂ ಗಾತ್ರದಲ್ಲಿ ಅಧಿಕವಾಗಿರಲಿದೆಯಂತೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಟಾಟಾ ಹ್ಯಾರಿಯರ್‍‍ಗಿಂತಲೂ ವಿಭಿನ್ನವಾದ ಟೈಲ್‍ಲೈಟ್ ಪಡೆಯಲಿದೆ ಕ್ಯಾಸಿನಿ (ಬಝಾರ್ಡ್)

ಮೂಲಗಳ ಪ್ರಕಾರ, ಬಝರ್ಡ್ ಕಾರು 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.18 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.21 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Tata Buzzard Spied With New LED Tail Lights. Read In Kannada
Story first published: Tuesday, August 13, 2019, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X