ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಸಂಸ್ಥೆಯ ಜೊತೆಗೂಡಿ ಕಾರುಗಳ ನಿರ್ಮಾಣದಲ್ಲಿ ಹೊಸ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ನಂತರ ಮತ್ತೆ ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಹ್ಯಾರಿಯರ್ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಾಟಾ ಸಂಸ್ಥೆಯು ಮುಂದಿನ ತಿಂಗಳು ಮಾರ್ಚ್‌ನಲ್ಲಿ ಆರಂಭವಾಗುವ ಜಿನೇವಾ ಆಟೋ ಮೇಳ ದಲ್ಲಿ ಮತ್ತೆ ನಾಲ್ಕು ಹೊಸ ಕಾರು ಮಾದರಿಗಳ ಉತ್ಪಾದನಾ ಆವೃತ್ತಿಗಳನ್ನು ಪ್ರದರ್ಶನ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಆಟೋ ಉದ್ಯಮದಲ್ಲಿ ತ್ರೀವ ಬೆಳವಣಿಗೆ ಕಾಣುತ್ತಿರುವ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 15 ವಿನೂತನ ಮಾದರಿಯ ಕಾರುಗಳು ರಸ್ತೆಗಿಳಿಯಲಿವೆ ಎಂದಿದ್ದಾರೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಇದರಲ್ಲಿ ನಾಲ್ಕು ಪ್ರಮುಖ ಕಾರುಗಳು ಮುಂದಿನ 1 ವರ್ಷದ ಅವಧಿಯಲ್ಲಿ ಬಿಡುಗಡೆಗೆ ನಿರ್ಧರಿಸಿದ್ದು, ಜೀನೆವಾ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದ ನಂತರವಷ್ಟೇ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಬಿಡುಗಡೆಯಾಗಲಿರುವ ಹೊಸ ಕಾರುಗಳ ಬಗೆಗೆ ಪೂರ್ಣ ಮಾಹಿತಿ ಇಲ್ಲವಾದರೂ ಸಹ ಕೆಲವು ಮೂಲಗಳ ಪ್ರಕಾರ, ಜಿನೇವಾ ಆಟೋ ಮೇಳದಲ್ಲಿ 7 ಸೀಟರ್ ಹ್ಯಾರಿಯರ್, ಹಾರ್ನ್‌ಬಿಲ್ ಕಾನ್ಸೆಪ್ಟ್, 45ಎಕ್ಸ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು 45ಎಕ್ಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಪ್ರದರ್ಶನ ಮಾಡಲಿದ್ದಾರೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಇದೀಗ ಖರೀದಿ ಲಭ್ಯವಿರುವ 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ 7 ಸೀಟರ್ ಹ್ಯಾರಿಯರ್ ಕೂಡಾ ಸದ್ದು ಮಾಡಲು ಸಿದ್ದಗೊಂಡಿದ್ದು, ಇದು ಫಾರ್ಚೂನರ್, ಅಲ್ಟುರಾಸ್ ಜಿ4 ಮತ್ತು ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಹಾರ್ನ್‌ಬಿಲ್ ಕಾನ್ಸೆಪ್ಟ್ ಕಾರು ಕೂಡಾ ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿಯಲಿದ್ದು, 2020ರ ಆರಂಭದಲ್ಲಿ ಈ ಹೊಸ ಮಾರಾಟಕ್ಕೆ ಲಭ್ಯವಾಗಲಿದೆ ಎನ್ನಲಾಗಿದೆ. ಇದು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಹ್ಯುಂಡೈ ಕಾರ್ನಿನೋ ಕಾರುಗಳಿಗೆ ಪೈಪೋಟಿ ನೀಡಲಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಇನ್ನು 45ಎಕ್ಸ್ ಪ್ರೀಮಿಯಂ ಕಾನ್ಸೆಪ್ಟ್ ಮಾದರಿಯನ್ನು ಈಗಾಗಲೇ 2018ರಲ್ಲೇ ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರುವ ಟಾಟಾ ಸಂಸ್ಥೆಯು ಹೊಸ ಕಾರಿನ ವಿನ್ಯಾಸಗಳನ್ನು ಇಂಪ್ಯಾಕ್ಟ್ ಡಿಸೈನ್ 2.0 ಡಿಸೈನ್ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ 45ಎಕ್ಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.

MOST READ: ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿವಿಧ ಮಾದರಿಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ವರದಿಗಳ ಪ್ರಕಾರ, 45ಎಕ್ಸ್ ಕಾರು ಮಾದರಿಯಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.

MOST READ: ಟೊಯೊಟಾ ಇನೋವಾ ಜನಪ್ರಿಯತೆಗೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ?

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ತದನಂತರ ಆಟೋ ಮೂಡ್ ಮೂಲಕ ತನ್ನಷ್ಟೇ ತಾನೇ ಎಲೆಕ್ಟ್ರಿಕ್ ಮೋಟಾರ್‌ನಿಂದ ಪೆಟ್ರೋಲ್ ಎಂಜಿನ್‌ಗೆ ವರ್ಗಾವಣೆಗೊಳ್ಳುವ ಕಾರಿನ ಎಂಜಿನ್ ಅನವಶ್ಯಕವಾಗಿ ಇಂಧನ ವ್ಯರ್ಥವಾಗುವುದನ್ನು ತಪ್ಪಿಸುತ್ತೆ. ಈ ಮೂಲಕ ಕಾರಿನ ಮೈಲೇಜ್ ಪ್ರಮಾಣವು ಹೆಚ್ಚಾಗುವುದಲ್ಲದೇ ಮಾಲಿನ್ಯ ಪ್ರಮಾಣ ಕೂಡಾ ತಗ್ಗುವುದು.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಜೊತೆಗೆ ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್‌ನೊಂದಿಗೆ ಸ್ಲಿಕ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಸೇರಿದಂತೆ ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

ಮಾರ್ಚ್ ಆರಂಭದಲ್ಲಿ ಮತ್ತೆ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ ಟಾಟಾ

ಹಾಗೆಯೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಮಾದರಿಯನ್ನು ಹೊರ ತರಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಇದುವರೆಗೂ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಜಿನೇವಾ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ಟಾಟಾ ನಿರ್ಮಾಣದ 4 ಹೊಸ ಕಾರುಗಳ ಬಗೆಗೆ ಸಾಕಷ್ಟು ಕುತೂಹಲವಿದೆ ಎನ್ನಬಹುದು.

Most Read Articles

Kannada
English summary
Tata Motors To Debut Four New Models In 2019 — Will Be Showcased At Geneva Motor Show. Read in Kannada.
Story first published: Monday, February 4, 2019, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X