TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಟೊಯೊಟಾ ಇನೋವಾ ಜನಪ್ರಿಯತೆಗೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ?
ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾರಾಟ ವಿಭಾಗದಲ್ಲಿ ಟೊಯೊಟಾ ಇನೋವಾ ಮಾದರಿಯು ಸಾಧಿಸಿರುವಷ್ಟು ಜನಪ್ರಿಯತೆಯನ್ನು ಮತ್ಯಾವದೇ ಕಾರು ಮುಂಚೂಣಿ ಸಾಧಿಸುವುದು ಕಷ್ಟ ಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಬೆಲೆಗಳಿಗೆ ತಕ್ಕಂತೆ ಅತ್ಯುತ್ತಮ ಗುಣಮಟ್ಟದ ಕಾರುಗಳನ್ನು ಸಿದ್ದಗೊಳಿಸುವ ಟೊಯೊಟಾ ಜನಪ್ರಿಯತೆ ಹೇಗಿದೆ ಅನ್ನುವುದಕ್ಕೆ ಇನೋವಾ ನಿರ್ಮಾಣದ ಯಶಸ್ವಿಯೇ ಸ್ಪಷ್ಟ ನಿದರ್ಶನ.
ಹೌದು, ಟೊಯೊಟಾ ಸಂಸ್ಥೆಯು ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವಾದ್ಯಂತ ಹಲವು ಮಾದರಿಯ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಇನೋವಾ ಕಾರು ನಿರ್ಮಾಣವು ಟೊಯೊಟಾ ಸಂಸ್ಥೆಗೆ ಅತಿ ಹೆಚ್ಚು ಲಾಭ ತಂದುಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನದಿಂದಲೂ ಇದುವರೆಗೂ ಅದೇ ಪ್ರಮಾಣದಲ್ಲಿ ಬೇಡಿಕೆ ಹೊಂದಿರುವ ಇನೋವಾ ಕಾರುಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.
ಭಾರತದಲ್ಲಿ 2005ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿರುವ ಇನೋವಾ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾವಣೆಯಾಗಿದ್ದು, ಬಿಡುಗಡೆಯಾಗಿ 15 ವರ್ಷ ಕಳೆದರೂ ಸಹ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ.
ಸಾಮಾನ್ಯವಾಗಿ ಬಹುತೇಕ ಕಾರು ಮಾಲೀಕರು ತಾವೂ ಖರೀದಿಸಿದ ಕಾರುಗಳನ್ನು ಹೆಚ್ಚೆಂದರೆ 50 ಸಾವಿರದಿಂದ 1 ಲಕ್ಷ ಕಿ.ಮಿ ಚಾಲನೆಯ ನಂತರ ಬದಲಾವಣೆ ಮಾಡುವುದನ್ನ ನಾವು ನೋಡಿದ್ದೇವೆ. ಇನ್ನು ಕೆಲವರು ಹೆಚ್ಚೆಂದರೆ 3 ಲಕ್ಷದಿಂದ 4 ಲಕ್ಷ ಕಿ.ಮಿ ಚಾಲನೆಯ ನಂತರ ಅಂತಹ ಕಾರುಗಳನ್ನು ಬಳಕೆ ಮಾಡುವುದಕ್ಕೂ ಹಿಂದೇಟು ಹಾಕುತ್ತಾರೆ.
ಅಷ್ಟೊತ್ತಿಗೆ ಕಾರುಗಳ ಆಯಸ್ಸು ಕೂಡಾ ಕುಗ್ಗಿಹೋಗುವುದಲ್ಲದೇ ಗುಜರಿ ಸೇರುವ ಮಟ್ಟಕ್ಕೆ ಬಂದಿರುತ್ತವೆ. ಆದ್ರೆ ಇಲ್ಲೊಂದು 2005ರ ಇನೋವಾ ಮಾದರಿಯು ಬರೋಬ್ಬರಿ 6 ಲಕ್ಷ ಕಿ.ಮಿ ಓಡಿದ್ದರೂ ಸಹ ಇನ್ನು ಕೂಡಾ ತಾಂತ್ರಿಕವಾಗಿ ಗಟ್ಟಿಮುಟ್ಟಾಗಿದೆ ಅಂದ್ರೆ ನೀವು ನಂಬಲೇಬೇಕು.
2005ರಿಂದಲೂ ಇದುವರೆಗೂ ಟೂರಿಸ್ಟ್ ವಿಭಾಗದಲ್ಲಿ ಓಡುತ್ತಿರುವ ಈ ಕಾರು ಬರೋಬ್ಬರಿ 6 ಲಕ್ಷ ಕಿ.ಮಿ ದೂರವನ್ನು ಕ್ರಮಿಸಿದ್ದು, ಹೊಸ ಕಾರು ಖರೀದಿ ಮಾಡುವಾಗ ಇದ್ದ ಕಾರಿನ ಎಂಜಿನ್ ಗಮ್ಮತ್ತು ಇದುವರೆಗೂ ಕಳೆಗುಂದಿಲ್ಲ ಎನ್ನುತ್ತಾರೆ ಕಾರು ಮಾಲೀಕ ಎಂಪಿ ಗೋಪಿನಾಥನ್.
ಮೂಲತಃ ಕೆರಳದವರಾದ ಗೋಪಿನಾಥನ್ ಅವರು 2005ರಲ್ಲಿ ಫಸ್ಟ್ ಜನರೇಷನ್ ಇನೋವಾ ಖರೀದಿ ಮಾಡಿದ್ದಲ್ಲದೇ ಇದೇ ಕಾರಿನ ಮೂಲಕ ಅವರು ಲಕ್ಷ ಲಕ್ಷ ಸಂಪಾದನೆ ಮಾಡಿದ್ದಾರೆ. 6 ಲಕ್ಷ ಕಿ.ಮಿ ಕ್ರಮಿಸಿದ್ದರೂ ಸಹ ಕಾರು ಇನ್ನು ಕೂಡಾ ಗಟ್ಟಿಮುಟ್ಟಾಗಿರುವುದಕ್ಕೆ ಅನೇಕ ಕಾರು ಮಾಲೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇವಲ ಕಾರು ಮಾಲೀಕರು ಅಷ್ಟೇ ಅಲ್ಲದೇ ಟೊಯೊಟಾ ಸಂಸ್ಥೆಯು ಸಹ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ ಕಾರು ಮಾಲೀಕ ಗೋಪಿನಾಥನ್ ಅವರ ಕಾರು ನಿರ್ವಹಣಾ ಪರಿಯನ್ನು ಮೆಚ್ಚಿ ಸನ್ಮಾನ ಮಾಡಿದೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ 2005ರ ಈ ಕಾರಿಗೆ ಇನ್ನು ಕೂಡಾ ಶೇ.70ರಷ್ಟು ರೀ ಸೆಲ್ ವ್ಯಾಲ್ಯೂ ಹೊಂದಿದೆ ಎನ್ನಲಾಗಿದ್ದು, ಒಂದು ವೇಳೆ ಕಾರು ಮಾಲೀಕ ಗೋಪಿನಾಥನ್ ಈ ಕಾರುನ್ನು ಇದೀಗ ಮರುಮಾರಾಟ ಮಾಡಿದರು ಸಹ ಮೂಲಬೆಲೆಯ ಅರ್ಧಕ್ಕಿಂತಲೂ ಹೆಚ್ಚು ಹಣ ವಾಪಸ್ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಬರುತ್ತಿದೆ 9 ಸೀಟರ್ ಕಿಯಾ ಕಾರ್ನಿವಾಲ್
6 ಲಕ್ಷ ಕಿ.ಮಿ ಕ್ರಮಿಸಿದರೂ ಸಹ ಕಾಲ ಕಾಲಕ್ಕೆ ತಕ್ಕಂತೆ ಸರ್ವಿಸ್ ಮತ್ತು ಬಿಡಿಭಾಗಗಳನ್ನು ಸರಿಯಾಗಿ ನಿರ್ವಹಣೆ ಮಾಡಿರುವುದರಿಂದ ಕಾರಿನ ಎಂಜಿನ್ ದಕ್ಷತೆ ಮತ್ತು ಇಂಧನ ಕ್ಷಮತೆಯು ಸಮತೋನದಲ್ಲಿದ್ದು, ಬಲಿಷ್ಠ ಬಾಡಿ ಕಿಟ್ ನೀಡಿರುವುದು ಕಾರಿನ ಆಯಸ್ಸು ಹೆಚ್ಚಿದೆ ಎನ್ನಬಹುದು.
ಇನ್ನು ಈ ಕಾರು ಫಸ್ಟ್ ಜನರೇಷನ್ ಇನೋವಾ ಮಾದರಿಯಾಗಿದ್ದು, 2.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಆದ್ರೆ 2015ರಲ್ಲಿ ಇನೋವಾ ಮಾರಾಟದಲ್ಲಿ ಬದಲಾವಣೆ ತಂದಿರುವ ಟೊಯೊಟಾ ಸಂಸ್ಥೆಯು ಸದ್ಯ ಸೇಕೆಂಡ್ ಜನರೇಷನ್ ಇನೋವಾ ಕ್ರಿಸ್ಟಾ ಹೆಸರಿನೊಂದಿಗೆ ಮಾರಾಟ ಮಾಡುತ್ತಿದೆ.
MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳು..!
ಸದ್ಯ 2.5-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ ಹೊಸ ಬದಲಾವಣೆಗಳನ್ನು ತರಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.7-ಲೀಟರ್ ಪೆಟ್ರೋಲ್ ಎಂಜಿನ್, 2.4-ಡೀಸೆಲ್ ಡೀಸೆಲ್ ಎಂಜಿನ್ ಇಲ್ಲವೇ 2.8-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಮಾರಾಟ ಮಾಡುತ್ತಿದೆ.
ಒಟ್ಟು 14 ವೆರಿಂಟ್‌ಗಳಲ್ಲಿ ಇನೋವಾ ಕ್ರಿಸ್ಟಾ ಕಾರುಗಳು ಮಾರಾಟಗೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.14.64 ಲಕ್ಷಕ್ಕೆ ಮತ್ತು ಟಾಪ್ ವೆರಿಯೆಂಟ್‌ಗಳು ರೂ.23.04 ಲಕ್ಷಕ್ಕೆ ಮಾರಾಟಗೊಳ್ಳುತ್ತಿವೆ. ಬೆಲೆಗಳು ದುಬಾರಿ ಎನ್ನಿಸಿದರೂ ಸಹ ಎಂಪಿವಿ ವಿಭಾಗದಲ್ಲಿ ಇತರೆ ಅಗ್ಗದ ಕಾರುಗಳ ಭರಾಟೆ ನಡೆವೆಯೂ ಇನೋವಾ ಕ್ರಿಸ್ಟಾಗೆ ಮತ್ತೊಂದು ಸರಿಸಾಟಿಯಿಲ್ಲ ಎನ್ನುವುದು ವಾಸ್ತವ.
Image Courtesy: ModsOwnCountry Whatsapp Group