ಟಾಟಾ ಹ್ಯಾರಿಯರ್ ಎಸ್‍ಯುವಿ ಮೇಲೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹ್ಯಾರಿಯರ್ ಎಸ್‍‍ಯುವಿಗೆ ಬರೊಬ್ಬರಿ ರೂ.1.75 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಟಾಟಾ ಹ್ಯಾರಿಯರ್ ಎಸ್‍‍ಯುವಿಯು ಟಾಟಾ ಮೋಟಾರ್ಸ್ ಕಂಪನಿಯ ಐಷಾರಾಮಿ ವಾಹನಗಳಲ್ಲಿ ಒಂದಾಗಿದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿದ ಉಂಟಾದಾಗ ಜನಪ್ರಿಯ ಕಾರುಗಳ ಮಾರಾಟವು ಕೂಡ ಇಳಿಕೆಯಾಗಿತ್ತು. ಆದರೆ ಹಬ್ಬಗಳ ಸೀಸನ್‍‍ನಲ್ಲಿ ಭರ್ಜರಿ ಆಫರ್‍‍ಗಳು ಘೋಷಿಸಿರುವುದರಿಂದ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿತ್ತು. ಆದರೆ ಕೆಲವು ಕಂಪನಿಗಳ ಕಾರು ಮಾರಾಟದಲ್ಲಿ ಇನ್ನೂ ಕೂಡ ಚೇತರಿಕೆಯನ್ನು ಕಂಡಿಲ್ಲ. ಟಾಟಾ ಮೋಟಾರ್ಸ್ ಬಿಎಸ್-4 ಮಾದರಿಗಳ ಸ್ಟಾಕ್‍‍ಗಳನ್ನು ಮಾರಾಟ ಮಾಡಲು ಈ ಭರ್ಜರಿ ಆಫರ್ ಅನ್ನು ಘೋಷಿಸಲಾಗಿದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಈ ಎಸ್‍ಯುವಿನಲ್ಲಿ ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋವನ್ನು ಅಳವಡಿಸಲಾಗಿದೆ. ಟಾಟಾ ಹ್ಯಾರಿಯರ್ ಕಾರುಗಳನ್ನು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಈ ಎಸ್‍ಯುವಿನಲ್ಲಿ ಆ್ಯಪಲ್ ಕಾರ್ ಪ್ಲೇನಂತಹ ಫೀಚರ್ಸ್‍‍ಗಳಿವೆ. ಇದರೊಂದಿಗೆ 320 ವ್ಯಾಟ್ ಆ‍‍ರ್‍ಎಂಎಸ್ ಜಿ‍‍ಬಿಎಲ್ ಆಡಿಯೋ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿನಲ್ಲಿ ಉನ್ನತ ಮಟ್ಟದ ಪ್ರೀಮಿಯಂ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಹ್ಯಾರಿಯರ್ ಎಸ್‌ಯುವಿನಲ್ಲಿ 2 ಲೀಟರ್ 4 ಸಿಲಿಂಡರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಆರು ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಗಳನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಟಾ ಹ್ಯಾರಿಯರ್ ಎಸ್‍‍ಯುವಿಗೆ ರೂ.20.47 ಲಕ್ಷಗಳಾಗಿದೆ. ಇದೀಗ ಈ ಹ್ಯಾರಿಯರ್ ಎಸ್‍‍ಯುವಿಗೆ ರೂ.1.75 ಲಕ್ಷ ರಿಯಾಯಿತಿಯನ್ನು ಘೋಷಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ ಕಾರು ಗ್ರಾವಿಟಾಸ್ ಹೆಸರಿನೊಂದಿಗೆ ಮಾರುಕಟ್ಟೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಬಿಎಸ್-6 ಎಂಜಿನ್ ಹೊಂದಿರುವ ಹೊಸ ಟಾಟಾ ಹ್ಯಾರಿಯರ್ ಅನ್ನು ಬಿಡುಗಡೆಗೊಳಿಸಲಿದೆ. ಹೊಸ ಟಾಟಾ ಹ್ಯಾರಿಯರ್‍ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ. ಹೊಸ ಟಾಟಾ ಹ್ಯಾರಿಯರ್‍ ಬೆಲೆಯು ಮಾರುಕಟ್ಟೆಯಲ್ಲಿರುವ ಹ್ಯಾರಿಯರ್ ಎಸ್‍‍ಯುವಿಗಿಂತ ಹೆಚ್ಚಿರಲಿದೆ.

Article Published On: Thursday, December 12, 2019, 9:00 [IST]
English summary
Up to Rs 1.7 lakh off on Tata Harrier - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+