ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ತನ್ನ ಹೊಸ ಟಾಟಾ ಹ್ಯಾರಿಯರ್ 7 ಸೀಟ್ ಎಸ್‍‍ಯುವಿಯನ್ನು ಇತ್ತೀಚೆಗೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸ್ಪಾಟ್ ಟೆಸ್ಟ್ ಮಾಡಿದೆ. ಹೊಸ ಟಾಟಾ ಹ್ಯಾರಿಯರ್ 7 ಸೀಟಿನ ಎಸ್‍‍ಯುವಿಯ ಸ್ಪಾಟ್ ಟೆಸ್ಟ್ ನಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿವೆ.

ಹೊಸ ಟಾಟಾ ಹ್ಯಾರಿಯರ್ 7 ಸೀಟ್ ಎಸ್‍‍ಯುವಿ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 5 ಸೀಟಿನ ಟಾಟಾ ಹ್ಯಾರಿಯರ್‍‍ಗೆ ಹೋಲಿಸಿದರೆ ಹೊಸ ಎ‍‍ಸ್‍‍ಯುವಿಯಲ್ಲಿ ಸಣ್ಣ ಗಾತ್ರದ ಒಆರ್‍‍‍ವಿಎಂ(ಔಟ್ ಸೈಡ್ ರೇರ್ ವ್ಯೂ ಮಿರರ್)ಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಸ್‍ಯುವಿಯು ದೊಡ್ದ ಗಾತ್ರದ ಒಆರ್‍‍‍ವಿಎಂಗಳನ್ನು ಹೊಂದಿತ್ತು. ಇದರಿಂದ ಹ್ಯಾರಿಯರ್ ಕೆಲವು ನಕರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಗ್ರಾಹಕರ ಪ್ರತಿಕ್ರಿಯೆಯಿಂದಾಗಿ ಟಾಟಾ ಮೋಟಾರ್ಸ್ ಹೊಸ ಹ್ಯಾರಿಯರ್‍‍ನಲ್ಲಿ ಒಆ‍‍ರ್‍‍‍ವಿಎಂಗಳ ಗಾತ್ರ ಚಿಕ್ಕದಾಗಿಸಲು ಯೋಜಿಸಿದೆ. ಇದರಿಂದ ಚಾಲಕನಿಗೆ ಹೆಚ್ಚು ಸಹಕಾರಿಯಾಗಲಿದೆ. ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ 7 ಸೀಟನ ಎರಡು ಹ್ಯಾರಿಯರ್ ಎಸ್‍‍ಯುವಿಗಳಿಗೆ ಹೋಲಿಸಿದರೆ ವಿಭಿನ್ನ ಗಾತ್ರದ ಒಆರ್‍‍ವಿಎಂಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಈ ವರ್ಷದ ಆರಂಭದಲ್ಲಿ ಜಿನೀವಾ ಮೋಟಾರ್ ಶೋನಲ್ಲಿ ಅನಾವರಣಗೊಂಡ ಹೊಸ 7 ಸೀಟಿನ ಹ್ಯಾರಿಯರ್ ಎಸ್‍‍ಯುವಿಗೆ ಬಜಾರ್ಡ್ ಎಂಬ ಹೆಸರನ್ನು ನೀಡಲಾಗಿದೆ. ಆದರೆ ಎರಡು ಎಸ್‍‍ಯುವಿಗಳು ಒಂದೇ ಮಾದರಿಯ ವಿನ್ಯಾಸವನ್ನು ಹೊಂದಿವೆ. ಟಾಟಾ ಬಝಾರ್ಡ್ 4,661 ಎಂಎಂ ಉದ್ದ, 1,894 ಎಂಎಂ ಅಗಲ ಮತ್ತು 1,786 ಎಂಎಂ ಎತ್ತರ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹ್ಯಾರಿಯರ್‍‍‍ಗೆ ಹೋಲಿಸಿದರೆ 63 ಎಂಎಂ ಉದ್ದ, 72 ಎಂಎಂ ಅಗಲ ಮತ್ತು 80 ಎಂಎಂ ಎತ್ತರವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಹೊಸ ಹ್ಯಾರಿಯರ್‍‍‍ನಲ್ಲಿ ಸ್ಲ್ಪಿಟ್ ಹೆಡ್‍‍ಲ್ಯಾಂಪ್, ಗ್ರಿಲ್ ಮತ್ತು ಹೊಸ ವಿನ್ಯಾಸದ ಬಂಪರ್ ಅನ್ನು ಅಳವಡಿಸಲಾಗಿದೆ. ಹೊಸ ಎಸ್‍‍ಯುವಿನಲ್ಲಿ ಟೇಲ್ ಲ್ಯಾಂಪ್ ಮತ್ತು ಪನೋರಮಿಕ್ ಸನ್‍‍ರೂಫ್ ಅನ್ನು ಹೊಂದಿದೆ. ಹೊಸ ಎಸ್‍‍ಯು‍ವಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಪ್ರಸ್ತುತ ಟಾಟಾ ಹ್ಯಾರಿಯರ್ ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಡಾರ್ಕ್ ಎಡಿಷನ್ ಆಯ್ಕೆ, ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಅನ್ನು ಹೊಂದಿದೆ. ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್‍ ಎಸ್‍ಯು‍ವಿನಲ್ಲಿ ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಅನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಹೊಸ ಟಾಟಾ ಹ್ಯಾರಿಯರ್ ಎಸ್‍‍ಯುವಿ 2.0 ಲೀಟರ್ ಟರ್ಬೋಚಾರ್ಜ್ಡ್ ಕ್ರಯೋಟಿಕ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 138 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹ್ಯುಂಡೈ ಟಕ್ಸನ್‍ ಮಾದರಿಯ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಟಾಟಾ ಹ್ಯಾರಿಯರ್‍‍ನಲ್ಲಿ ಅಳವಡಿಸಲಾಗಿದೆ. ಹೊಸ ಟಾಟಾ ಹ್ಯಾರಿಯರ್ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ 7 ಸೀಟಿನ ಟಾಟಾ ಹ್ಯಾರಿಯರ್

ಪ್ರಸ್ತುತ 5 ಸೀಟಿನ ಟಾಟಾ ಹ್ಯಾರಿಯರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13 ಲಕ್ಷದಿಂದ ರೂ.14.07 ಲಕ್ಷಗಳಾಗಿದೆ. ಹೊಸ 7 ಸೀಟಿನ ಟಾಟಾ ಹ್ಯಾರಿಯರ್‍ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿದೆ.

Most Read Articles

Kannada
English summary
Tata Harrier 7 seater SUV spied - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X