ಬಾಂಗ್ಲಾದೇಶದ ಸೇನೆಗಾಗಿ ನಿರ್ಮಾಣವಾಗುತ್ತಿದೆ 200 ಟಾಟಾ ಹೆಕ್ಸಾ ಕಾರುಗಳು

ಟಾಟಾ ಮೋಟಾರ್ಸ್ ಕೇವಲ ಪ್ಯಾಸೆಂಜರ್ ವಾಹನಗಳಲ್ಲಿ ಮಾತ್ರವಲ್ಲದೆಯೆ ಯುದ್ದ ವಾಹನಗಳ ಉತ್ಪಾದನೆಯಲ್ಲಿಯು ಸಹ ಹೆಸರುವಾಸಿಯಾಗಿದೆ. ಸಧ್ಯ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು ಸೇನೆಗೆ ಬೇಕಾದ ಹಾಗೆ ಎಲ್ಲಾ ಮಾರ್ಪಾಡುಗಳನ್ನು ಮಾಡಿ ಸೇವೆ ಸಲ್ಲಿಸುತ್ತಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಹೀಗಿರುವಾಗ ಟಾಟಾ ಮೋಟಾರ್ಸ್‍ನ ಉತ್ಪಾದನಾ ಗುಣಮಟ್ಟಕ್ಕೆ ಮೆಚ್ಚಿ ಬಾಂಗ್ಲಾದೇಶದ ಸೇನೆಯು 4 ವ್ಹೀಲ್ ಡ್ರೈವ್ ಹೊಂದಿರುವ 200 ಹೆಕ್ಸಾ ಕಾರುಗಳನ್ನು ನಿರ್ಮಾಣ ಮಾಡಿ ಕಳುಹಿಸಲು ಮನವಿಯನ್ನು ಮಾಡಿದೆ. ಈ ಕುರಿತಾಗಿ ಹಲವಾರು ಸುತ್ತಿನ ಪರೀಕ್ಷೆಯ ನಂತರ ಹೆಕ್ಸಾ ಕಾರುಗಳು ಬಾಂಗ್ಲಾದೇಶದ ಸೇನೆಗೆ ಸೇವೆಸಲ್ಲಿಸಲು ಸಿದ್ಧವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ನಮ್ಮ ದೇಶದ ಹೆಮ್ಮೆಯ ಟಾಟಾ ಹೆಕ್ಸಾ ಕಾರುಗಳು ಬಾಂಗ್ಲಾದೇಶದ ಸೇನೆಯಲ್ಲಿ ಕಾಣಿಸಿಕೊಳ್ಳಲಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಈ ಯೋಜನೆಯ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್‍ನ ಅಂತರಾಷ್ಟ್ರೀಯಾ ವ್ಯಾಪಾರ ಮತ್ತು ಪ್ರಯಾಣಿಕ ವಾಹನಗಳ ಮುಖ್ಯಸ್ಥರಾದ ಸುಜನ್ ರಾಯ್ ಅವರು. ಬಾಂಗ್ಲಾದೇಶವು ನಮ್ಮ ಪ್ರಮುಖ ಮಾರುಕಟ್ಟೆಯಾಗಿದ್ದು, ಅವರು ನೀಡಿರುವ ಈ ಬೇಡಿಕೆಯು ಟಾಟಾ ಮೋಟಾರ್ಸ್‍ನ ಹೆಚ್ಚುತ್ತಿರುವ ಯಶಸ್ಸಿನ ಸ್ಪಷ್ಟ ಸಂಖೇತವಾಗಿದೆ. ಬಾಂಗ್ಲಾದೇಶದ ಸಶಸ್ತ್ರ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಅನೇಕ ಮಾರ್ಗಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಎರಡೂ ಪಕ್ಷಗಳಿಗೆ ದೀರ್ಘ ಮತ್ತು ಲಾಭದಾಯಕ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ. ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ 2012ರಿಂದಲೂ ವ್ಯವಹಾರ ನಡೆಸುತ್ತಿದ್ದು, ಅಲ್ಲಿನ ಮಾರುಕಟ್ಟೆಯಲ್ಲಿ ಟಾಟಾ ಇಂಡಿಗೋ, ಟಿಯಾಗೊ ಮತ್ತು ನೆಕ್ಸಾನ್ ಕಾರುಗಳು ಮಾತ್ರ ಮಾರಾಟಕ್ಕೆ ಲಭ್ಯವಿದೆ. ಹಾಗೆಯೆ ಟಾಟಾ ಮೋಟಾರ್ಸ್ ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತಿರುವ ಹೆಕ್ಸಾ ಕಾರುಗಳು ಕೇವಲ ಸೇನೆಗಾಗಿಯೇ ಹೊರತು ಈ ಕಾರನ್ನು ಅಲ್ಲಿ ಮಾರಾಟ ಮಾಡಲು ಯಾವುದೇ ಆಲೋಚೆನೆ ಇಲ್ಲ ಎನ್ನಲಾಗಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹೆಕ್ಸಾ ಕಾರುಗಳು ಮೊದಲಿಗೆ ಜನವರಿ 2017ರಲ್ಲಿ ಬಿಡುಗಡೆಗೊಂಡಿದ್ದು, ಈ ಕಾರಿನಲ್ಲಿರುವ 2.2 ಲೀಟರ್ ಡೀಸೆಲ್ ಎಂಜಿನ್ ಮುಂಬರುವ ಬಿಎಸ್-6 ಎಮಿಷನ್ ಹೊರಸೂಸುವಿಕೆಯ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಾಗದ ಕಾರಣ, ಈ ಎಂಜಿನ್ ಅನ್ನು ಪ್ಯಾಸೆಂಜರ್ ಕಾರುಗಳ ಬದಲಿದೆ ಅವುಗಳಲ್ಲಿ ಹೆಚ್ಚಿನ ಪ್ರಮಾಡದಲ್ಲಿ ಬದಲಾವಣೆಗಳನ್ನು ಮಾಡಿ, ಟಾಟಾ ಮೋಟಾರ್ಸ್‍ನಲ್ಲಿನ ವಾಣಿಜ್ಯ ವಾಹನಗಳಿಗೆ ನೀಡಲಾಗುವುದು.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಈ ನಿಟ್ಟಿನಲ್ಲಿ ಏಳು ಆಸನಗಳುಳ್ಳ ಟಾಟಾ ಹ್ಯಾರಿಯರ್ ಅಥವಾ ಬಝರ್ಡ್ ಕಾರನ್ನು 2019ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿದ್ದು, ಈ ಕಾರು ಮಾರುಕಟ್ಟೆಯಲಿ ಹೆಚ್ಚಿನ ನಿರೀಕ್ಷಯೆನ್ನು ಹುಟ್ಟುಹಾಕಿದೆ. ಟಾಟಾ ಮೋಟಾರ್ಸ್ ಸಂಸ್ಥೆಯು ಬಝರ್ಡ್ ಕಾರನ್ನು ಈ ವರ್ಷ ಮುಗಿಯುವುದರೊಳಗೆ ಬಿಡುಗಡೆ ಮಾಡುವ ತೀರ್ಮಾನದಲಿದ್ದು, ಹ್ಯಾರಿಯರ್ ಕಾರಿನ ರೇಂಜ್ ಅನ್ನು ವಿಸ್ತರಿಸಲು ಹೆಕ್ಸಾ ಕಾರಿನ ಸ್ಥಾನವನ್ನು ಈ 7 ಸೀಟರ್ ಹ್ಯಾರಿಯರ್ ನೀಡಲಾಗುತ್ತಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಈ ಕುರಿತಾಗಿ ಟಾಟಾ ಮೋಟಾರ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೆಟ್ಕರ್‍‍‍ರವರು, ನಾಮ್ಮಲ್ಲಿರುವ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳ ಎಂಜಿನ್‍ನಲ್ಲಿರುವ ಪವರ್‍‍ಟ್ರೈನ್ ಅನ್ನು ಹಂಚಿಕೊಳ್ಳುತ್ತೇವೆ. ಆದುದರಿಂದ ಪ್ಯಾಸೆಂಜರ್ ಕಾರುಗಳಿಗೆ ಸೂಕ್ತವಾಗದ ಪವರ್‍‍ಟ್ರೈನ್ ಎಂಜಿನ್, ಪ್ಯಾಸೆಂಜರ್ ವಾಹನಗಳಿಗೂ ಸೂಕ್ತವಾಗದೇ ಇರಲಾರದು. ಆದುದರಿಂದ 2.2 ಲೀಟರ್‍ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಅಪ್ಗ್ರೇಡ್ ಮಾಡಿ ವಾಣಿಜ್ಯ ವಾಹನಗಳಲಿ ನೀಡುತ್ತೇವೆ. ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಪ್ರಸ್ಥುತ ಮಾರಾಟವಾಗುತ್ತಿರುವ ಟಾಟಾ ಹ್ಯಾರಿಯರ್ ಕಾರಿನಲ್ಲಿ 2.0 ಲೀಟರ್‍‍ನ ಡೀಸೆಲ್ ವೇರಿಯೆಂಟ್‍‍ಗೆ ಹೆಚ್ಚಿನ ಬೇಡಿಕೆಯು ಬರುತ್ತಿದ್ದು, ಇದೇ ಎಂಜಿನ್ ಅನ್ನು ನಮ್ಮ ಮುಂದಿನ ಪ್ಯಾಸೆಂಜರ್ ವಾಹನಗಳಲ್ಲಿ ಕೂಡಾ ಬಳಸಲಾಗುತ್ತದೆ ಎಂದು ಹೆಳಲಾಗಿದೆ. ಏಕೆಂದರೆ 2.0 ಲೀಟರ್‍‍ನ ಡೀಸೆಲ್ ಎಂಜಿನ್ ಇದೊಂದು ಸುಧಾರಿತ ಮತ್ತು ಉತ್ತಮವಾಗಿ ಸ್ಥಾಪಿಸಲಾಗಿದೆ ಎನ್ನಲಾಗಿದ್ದು, ಬಿಎಸ್6 ಜಾರಿಯಾದ ನಂತರವೂ ಇದೇ ಎಂಜಿನ್ ಅನ್ನು ಬಳಸುತ್ತೇವೆ ಎಂದು ಹೆಳಿದ್ದಾರೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ವರದಿ ಪ್ರಕಾರ ಟಾಟಾ ಬಝರ್ಡ್ ಕಾರುಗಳಲ್ಲಿ ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಇದೀಗ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಮತ್ತು ಬಿಡುಗಡೆಗೊಳ್ಳಲಿರುವ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿರುವ ಟಾಟಾ ಕ್ಯಾಸಿನ್ನಿ ಕಾರು, ತನ್ನ ಎದುರಾಳಿಗಳಿಗಿಂತಲೂ ಗಾತ್ರದಲ್ಲಿ ಅಧಿಕವಾಗಿರಲಿದೆಯಂತೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಕಾರಿನ ವಿನ್ಯಾಸ

ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಬಾಂಗ್ಲಾದೇಶದ ಸೇನೆಗಾಗಿ 200 ಹೆಕ್ಸಾ ಕಾರುಗಳನ್ನು ಉತ್ಪಾದನೆ ಮಾಡಲಿರುವ ಟಾಟಾ ಮೋಟಾರ್ಸ್

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರ ಈ ವರ್ಷದ ಹಬ್ಬದ ಋತುವಿನಲ್ಲಿ ಬಝರ್ಡ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

Article Published On: Tuesday, July 9, 2019, 11:49 [IST]
English summary
Tata Hexa To Bangladesh Army 200 Units Of 4x4 Model To Be Supplied Soon. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+