ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಭಾರತದಲ್ಲಿ ಕೋಟ್ಯಂತರ ವಾಹನಗಳಿದ್ದು, ಅವುಗಳಿಂದಾಗಿ ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗುತ್ತಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಸರ್ಕಾರವು ಬಿ‍ಎಸ್ 3 ಎಂಜಿನ್‍ ವಾಹನಗಳನ್ನು ಬಿ‍ಎಸ್ 4 ಎಂಜಿನ್‍ ವಾಹನಗಳಿಗೆ ಬದಲಾಯಿಸಿತು. ಆದರೂ ವಾಯು ಮಾಲಿನ್ಯ ಪ್ರಮಾಣವು ನಿಯಂತ್ರಣಕ್ಕೆ ಬರಲಿಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರವು ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕರಣಗೊಳಿಸಲು ಬಯಸಿದೆ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಈ ನಿಟ್ಟಿನಲ್ಲಿ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಹಲವು ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿರುವ ಸಾರಿಗೆ ಸಂಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರವನ್ನು ಆರಂಭಿಸಿವೆ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್ ಕೂಡ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಬಸ್ಸುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಈ ಹಿಂದೆ ಫೇಮ್ 1 ಯೋಜನೆಯಡಿಯಲ್ಲಿ 200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಿ, ಎಲೆಕ್ಟ್ರಿಕ್ ಬಸ್ಸುಗಳ ಮಾರುಕಟ್ಟೆಯಲ್ಲಿ 60%ಗೂ ಹೆಚ್ಚಿನ ಷೇರುಗಳನ್ನು ಹೊಂದಿತ್ತು.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಈಗ ಅಹಮದಾಬಾದ್ ಜನ್‍‍ಮಾರ್ಗ್ ಲಿಮಿಟೆಡ್‍‍ಗಾಗಿ (ಎ‍‍ಜೆ‍ಎಲ್) 300 ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಿ, ವಿತರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ದೇಶದಲ್ಲಿಯೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸುತ್ತಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಿಂದಾಗಿ ಸರ್ಕಾರದ ಎಲೆಕ್ಟ್ರಿಕ್ ಯೋಜನೆಗೆ ಬೆಂಬಲ ನೀಡುತ್ತಿದೆ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಎ‍‍ಜೆ‍ಎಲ್‍‍ಗೆ ನೀಡಲಿರುವ 9/9 ಎಲೆಕ್ಟ್ರಿಕ್ ಮಾಡೆಲ್ ಬಸ್ಸುಗಳು ಅಹಮದಾಬಾದ್‍‍ನ ಬಿ‍ಆರ್‍‍ಟಿ‍ಎಸ್ ಕಾರಿಡಾರ್‍‍ನಲ್ಲಿ ಸಂಚರಿಸಲಿವೆ. ಈ ಬಸ್ಸುಗಳನ್ನು ಒಪೆಕ್ಸ್ ಮಾದರಿಯಲ್ಲಿ ನಿಯೋಜಿಸಲಾಗುವುದು. ಇದರ ಜೊತೆಗೆ ಟಾಟಾ ಮೋಟಾರ್ಸ್ ವೇಗದ ಚಾರ್ಜಿಂಗ್ ಹಾಗೂ ಅಗತ್ಯವಿರುವ ಮೂಲಸೌಕರ್ಯಗಳನ್ನು ಸ್ಥಾಪಿಸಲಿದೆ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‌ನ ಕಮರ್ಷಿಯಲ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ ಅಧ್ಯಕ್ಷರಾದ ಗಿರೀಶ್ ವಾಘ್‍‍ರವರು, ದೇಶದ ಅತಿದೊಡ್ಡ ಇ-ಬಸ್ಸುಗಳ ಟೆಂಡರ್ ಪಡೆದಿರುವುದಕ್ಕೆ ಸಂತೋಷವಾಗುತ್ತಿದೆ. ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ವಿದ್ಯುತ್ ಟ್ರಾಕ್ಷನ್ ಸಿಸ್ಟಂ ಅಭಿವೃದ್ಧಿಪಡಿಸುವುದರೊಂದಿಗೆ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಅಲ್ಟ್ರಾ ಎಲೆಕ್ಟ್ರಿಕ್ ಬಸ್ಸುಗಳನ್ನು ಉನ್ನತವಾದ ವಿನ್ಯಾಸ ಹಾಗೂ ಗುಣಮಟ್ಟದ ವೈಶಿಷ್ಟ್ಯಗಳಿಂದ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ನಾವು ಸರ್ಕಾರದ ಜೊತೆಗೆ ಯಾವಾಗಲೂ ಕೈ ಜೋಡಿಸುತ್ತೇವೆ ಎಂದು ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಈ ಎಲೆಕ್ಟ್ರಿಕ್ ಬಸ್ಸುಗಳಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಟ್ರಾಕ್ಷನ್ ಕಾಂಪೊನೆಂಟ್‍‍ಗಳನ್ನು ಅಮೇರಿಕಾ, ಜರ್ಮನಿ ಹಾಗೂ ಚೀನಾದಂತಹ ದೇಶಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಅತ್ಯುತ್ತಮ ದರ್ಜೆಯ ಪೂರೈಕೆದಾರರಿಂದ ಪಡೆಯಲಾಗಿದೆ. ವಿವಿಧ ಭೂಪ್ರದೇಶಗಳಲ್ಲಿ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಹಿಮಾಚಲ ಪ್ರದೇಶ, ಚಂಡೀಗಢ, ಅಸ್ಸಾಂ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಬಗ್ಗೆ

ಟಾಟಾ ಮೋಟಾರ್ಸ್ ಲಿಮಿಟೆಡ್ 44 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಟಾಟಾ ಮೋಟಾರ್ಸ್ ವಿಶ್ವ ಮಟ್ಟದ ಆಟೋಮೊಬೈಲ್ ಕಂಪನಿಯಾಗಿದೆ. ಈ ಕಂಪನಿಯು ಕಾರು, ಯುಟಿಲಿಟಿ ವೆಹಿಕಲ್, ಪಿಕ್ - ಅಪ್, ಟ್ರಕ್ ಹಾಗೂ ಬಸ್ಸುಗಳನ್ನು ತಯಾರಿಸುತ್ತದೆ.

ಭಾರೀ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಭಾರತ ಮಾತ್ರವಲ್ಲದೇ ಇಂಗ್ಲೆಂಡ್, ದಕ್ಷಿಣ ಕೊರಿಯಾ, ಥೈಲ್ಯಾಂಡ್, ದಕ್ಷಿಣ ಆಫ್ರಿಕಾ ಹಾಗೂ ಇಂಡೋನೇಷ್ಯಾಗಳಲ್ಲಿ ಕಾರ್ಯಚರಿಸುತ್ತದೆ. ಟಾಟಾ ಮೋಟಾರ್ಸ್ ಇಂಗ್ಲೆಂಡ್‍‍ನಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಜೊತೆಗೆ ಹಾಗೂ ದಕ್ಷಿಣ ಕೊರಿಯಾದಲ್ಲಿ ಡೇವೂ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ.

Most Read Articles

Kannada
English summary
Tata Motors to supply more electric buses - Read in Kannada
Story first published: Tuesday, October 8, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X