ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ನೀತಿ ನಿಯಮಗಳು ಭಾರೀ ಹೊಡೆತ ನೀಡುತ್ತಿದ್ದು, ಇಷ್ಟುದಿನಗಳ ಕಾಲ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಕೆಲವು ಕಾರುಗಳಿಗೆ ಸಂಕಷ್ಟ ಎದುರಾಗಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ದೇಶದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವಾಹನ ಗುಣಮಟ್ಟದಲ್ಲಿ ಬದಲಾವಣೆ ತರುವ ಸಂಬಂಧ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕೇಂದ್ರದ ಸರ್ಕಾರದ ಹೊಸ ಕಾಯ್ದೆಗೆ ಅನುಗುಣವಾಗಿ ಬದಲಾವಣೆಗೊಳ್ಳಲು ಸಾಧ್ಯವಿರುವ ಸುಮಾರು 10ಕ್ಕೂ ಹೆಚ್ಚು ಜನಪ್ರಿಯ ಕಾರುಗಳು ಸದ್ಯದಲ್ಲೇ ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವುದು ಖಚಿತವಾಗಿದೆ. 2019ರ ಅಕ್ಟೋಬರ್ 1 ರಿಂದಲೇ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೆ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಈಗಾಗಲೇ ತಳಮಳ ಶುರುವಾಗಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇದರಲ್ಲಿ ಅಗ್ಗದ ಕಾರು ಎಂದೇ ಹೆಸರುಗಳಿಸಿದ್ದ ನ್ಯಾನೋ ಕಾರು ಸದ್ಯ ಮಾರುಕಟ್ಟೆಯಿಂದ ಮರೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ಸುರಕ್ಷತೆಯಿಲ್ಲದ ನ್ಯಾನೋ ಮಾರಾಟದಲ್ಲಿ ದೀರ್ಘ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಅಗ್ಗದ ಬೆಲೆಯೊಂದಿಗೆ ಲಕ್ಷಾಂತರ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ನ್ಯಾನೋ ಅಷ್ಟೇ ಪ್ರಮಾಣದಲ್ಲಿ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಹೀಗಾಗಿ ನ್ಯಾನೋ ಕಾರುನ್ನು ಸ್ಥಗಿತಗೊಳಿಸುತ್ತಿರುವ ಟಾಟಾ ಸಂಸ್ಥೆಯು ಉತ್ತಮ ಸುರಕ್ಷೆತೆವುಳ್ಳ ಹೊಸ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿಗೆ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು. ಆದ್ರೆ ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕೂಡಾ ಈ ಹಿಂದೆ ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ ಎಂದು ಆರೋಪಿಸಿದ್ದರು.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೀಗಿದ್ದರೂ ರತನ್ ಟಾಟಾರವರ ಕನಸಿನ ಕೂಸಾಗಿದ್ದರಿಂದ ನ್ಯಾನೋ ಕಾರನ್ನು ಭಾವನಾತ್ಮಕ ಕಾರಣಗಳಿಂದಾಗಿ ಇನ್ನೂ ಉತ್ಪಾದನೆ ಮುಂದುವರಿಸಿದ್ದ ಟಾಟಾ ಸಂಸ್ಥೆಯು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನ್ಯಾನೋ ಕಾರನ್ನು ಸ್ಥಗಿತಗೊಳಿಸುವುದಾಗಿ ಸುಳಿವು ನೀಡಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಅದರಲ್ಲೂ ಕಳೆದ 3 ತಿಂಗಳಲ್ಲಿನಲ್ಲಿ ಒಂದೇ ಒಂದು ನ್ಯಾನೊ ಕಾರು ಕೂಡಾ ಉತ್ಪಾದನೆಯೂ ಆಗಿಲ್ಲ ಹಾಗೆಯೇ ಮಾರಾಟ ಕೂಡಾ ಆಗಿಲ್ಲ. ಜೊತೆಗೆ ನ್ಯಾನೊ ಕಾರಿನ ಕುರಿತು ಯಾವೊಬ್ಬ ಗ್ರಾಹಕನು ಕೂಡಾ ವಿಚಾರಣೆ ಮಾಡುತ್ತಿಲ್ಲ. ಇದರಿಂದ ನ್ಯಾನೋ ಸ್ಥಗಿತಗೊಳಿಸುವ ತನಕ ನ್ಯಾನೋ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಮುಂಗಡ ಪಾವತಿ ನೀಡಿದ ನಂತರಷ್ಟೇ ನ್ಯಾನೋ ಕಾರುಗಳನ್ನು ಸಿದ್ದಗೊಳಿಸಲು ನಿರ್ಧರಿಸಿದ್ದು, ನ್ಯಾನೋ ಕಾರುಗಳನ್ನು ಸ್ಟಾಕ್ ಮಾಡದಿರಲು ತೀರ್ಮಾನಿಸಲಾಗಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇನ್ನು ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

MOST READ: ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಕಳೆದ ಮೂರು ತಿಂಗಳಿನಿಂದ ಟಾಟಾ ನ್ಯಾನೋ ಕಾರು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೀಗಾಗಿ ಬರಲಿರುವ ಬಿಎಸ್-6 ಕಾಯ್ದೆಯಿಂದಾಗಿ ವಾಹನ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಹೆಚ್ಚಿನ ಮಟ್ಟದ ಸುರಕ್ಷತೆ, ಮಾಲಿನ್ಯ ತಡೆಯಲು ಸುಧಾರಿತ ಮಾದರಿಯ ಎಂಜಿನ್ ಸೌಲಭ್ಯ ಹೊಂದಲು ಸಾಧ್ಯವಿರದ ನ್ಯಾನೋ ಮತ್ತು ಇತರೆ ಕೆಲವು ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸುವ ಅನಿರ್ವಾಯತೆ ಎದುರಾಗಿದೆ.

Kannada
English summary
Tata Nano Sales And Production Numbers For 2019 — Reveals An Uncertain Future. Read in Kannada.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more